ನವದೆಹಲಿ: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಸೆಪ್ಟೆಂಬರ್ 17ರೊಳಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರಕ್ಕೆ ಬೆಂಬಲವನ್ನು ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರ ಭೇಟಿಯ ಅಜೆಂಡಾವು, ಎರಡು ಏರ್ಬೋರ್ನೆ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ (ಎಡಬ್ಲ್ಯೂಎಸಿಎಸ್) ಮತ್ತು ವಿಸ್ತೃತ ವ್ಯಾಪ್ತಿಯ ಏರ್ ಟು ಏರ್ ಡೆರ್ಬಿ ಮಿಸೈಲ್ ಅನ್ನು ಭಾರತೀಯ ವಾಯುಸೇನೆಗೆ ಒದಗಿಸುವ ಮತ್ತು ಕೃಷಿ, ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿನ ಜಂಟಿ ಯೋಜನೆಗಳನ್ನು ಒಳಗೊಂಡಿದೆ.
ಫೆಬ್ರವರಿ 27 ರಂದು ಪಾಕಿಸ್ಥಾನವು ಭಾರತೀಯ ವಾಯುಗಡಿಯನ್ನು ಆಕ್ರಮಿಸಿಕೊಳ್ಳಲು ಮುಂದಾದ ಬಳಿಕ ಭಾರತವು ವಿಸ್ತೃತ ವ್ಯಾಪ್ತಿಯ ಏರ್ ಟು ಏರ್ ಡೆರ್ಬಿ ಮಿಸೈಲ್ ಅನ್ನು ಇಸ್ರೇಲಿನಿಂದ ಖರೀದಿಸಲು ಎದುರು ನೋಡುತ್ತಿದೆ. ಭವಿಷ್ಯದಲ್ಲಿ ಪಾಕಿಸ್ಥಾನದ ಎಫ್ -16 ವಿಮಾನಗಳ ವಿರುದ್ಧ ಹೋರಾಡಲು ಸು -30 ಎಂಕೆಐ ಪ್ಲಾಟ್ಫಾರ್ಮ್ನಲ್ಲಿ 70 ಕಿಲೋಮೀಟರ್ ವ್ಯಾಪ್ತಿಯ ಡರ್ಬಿ ಕ್ಷಿಪಣಿಗಳನ್ನು ಸಂಯೋಜಿಸಲು ಐಎಎಫ್ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಡಿಆರ್ಡಿಒ ಸಹಯೋಗದೊಂದಿಗೆ ಸಣ್ಣ, ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ.
ರಿವರ್ಸ್ ಆಸ್ಮೋಸಿಸ್ ಮೂಲಕ ಅಶ್ಕೆಲೋನ್ ಮತ್ತು ಹಡೆರಾದಲ್ಲಿನ ಡಸಲೀಕರಣ ಯೋಜನೆಗಳೊಂದಿಗೆ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಇಸ್ರೇಲ್ ಕರಗತ ಮಾಡಿಕೊಂಡಿದೆ. ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಪ್ರತಿ ಮನೆಗೆ ಕುಡಿಯಲು ಯೋಗ್ಯವಾದ ನೀರನ್ನು ಪೂರೈಸುವ ತಂತ್ರಜ್ಞಾನಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತವು ಇಸ್ರೇಲ್ ಅನ್ನು ಎದುರು ನೋಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.