ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿರುವ ಪಿ.ವಿ ಸಿಂಧು ಅವರು ಮಂಗಳವಾರ ಮಧ್ಯರಾತ್ರಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ವಿಮಾನನಿಲ್ದಾಣದಲ್ಲಿ ನೆರೆದಿದ್ದ ಅಪಾರ ಅಭಿಮಾನ ಬಳಗ ಅವರಿಗೆ ಅದ್ಧೂರಿಯಾಗಿ ಸ್ವಾಗತವನ್ನು ಕೋರಿತು.
ಎರಡು ಬಾರಿಯ ಬೆಳ್ಳಿ ಪದಕ ವಿಜೇತೆಯಾಗಿರುವ ಪಿ.ವಿ ಸಿಂಧು ಭಾನುವಾರ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಮಾಧ್ಯಮದವರೊಂದಿಗೆ ತನ್ನ ಸಾಧನೆಯ ಬಗ್ಗೆ ಮಾತನಾಡಿದ ಅವರು, ಐತಿಹಾಸಿಕ ಸಾಧನೆಗೆ ಬೆಂಬಲ ನೀಡಿದ ತನ್ನ ತರಬೇತುದಾರರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ನನಗಿದು ಅತ್ಯಂತ ಶ್ರೇಷ್ಠ ಕ್ಷಣವಾಗಿದೆ ಮತ್ತು ಭಾರತೀಯಳಾಗಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.
“ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಆಶೀರ್ವಾದಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಇನ್ನೂ ಹೆಚ್ಚು ಶ್ರಮಿಸುತ್ತೇನೆ ಮತ್ತು ಇನ್ನೂ ಅನೇಕ ಪದಕಗಳನ್ನು ಪಡೆಯುತ್ತೇನೆ. ಇದು ನನಗೆ ಬಹುನಿರೀಕ್ಷಿತ ಗೆಲುವು, ಹಿಂದೆ 2 ಬಾರಿ ಈ ಅವಕಾಶವನ್ನು ತಪ್ಪಿಸಿಕೊಂಡಿದ್ದೇನೆ ಆದರೆ ಅಂತಿಮವಾಗಿ ಅದನ್ನು ಸಾಧಿಸಿದ್ದೇನೆ” ಎಂದು ಪಿವಿ ಸಿಂಧು ಹೇಳಿದರು.
“ನನಗೆ ಇದು ಒಂದು ದೊಡ್ಡ ಕ್ಷಣ. ನಾನು ಭಾರತೀಯಳಾಗಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ” ಎಂದು ಅವರು ಹೇಳಿದರು.
ಜಪಾನಿನ ಪ್ರತಿಸ್ಪರ್ಧಿ ನೊಝೋಮಿ ಒಕುಹರಾ ಅವರನ್ನು 21-7, 21-7 ಸೆಟ್ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.
World champion @Pvsindhu1 touchdown in 🇮🇳.
Hear her speak for the first time after arriving in New Dehi.👇@Media_SAI @IndiaSports @WeAreTeamIndia #IndiaontheRise #BEFWorldchampion pic.twitter.com/5J4jY6MFCa
— BAI Media (@BAI_Media) August 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.