ನವದೆಹಲಿ: ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿರುವ ಹಿನ್ನಲೆಯಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯವು ಎಡಪಂಥೀಯ ಉಗ್ರವಾದದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಬಲ್ಲದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ನಡೆದ ಎಡಪಂಥೀಯ ಉಗ್ರಗಾಮಿತ್ವ ಕುರಿತ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ,”ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಡಪಂಥೀಯ ಹಿಂಸಾಚಾರದ ಘಟನೆಗಳು ಕಡಿಮೆಯಾಗಿದ್ದರೂ, ಅದನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ನಾವು ಇಂದು ಗಮನ ಹರಿಸಬೇಕಾಗಿದೆ ಮತ್ತು ಈ ನಿಟ್ಟಿನ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮತ್ತು ರಾಜ್ಯಗಳು ಕ್ಷಿಪ್ರಗತಿಯಲ್ಲಿ ನಿರ್ವಹಿಸಬೇಕಾಗಿದೆ” ಎಂದು ಹೇಳಿದರು.
ಸಭೆಯ ವೇಳೆ ಶಾ ಅವರು, ಸುಧಾರಿತ ತಂತ್ರಜ್ಞಾನದ ಬಳಕೆ, ಗುಪ್ತಚರ ಹಂಚಿಕೆ, 66 ಇಂಡಿಯನ್ ರಿಸರ್ವ್ಡ್ ಬೆಟಾಲಿಯನ್ಗಳ (ಐಆರ್ಬಿ) ಸಂಗ್ರಹ ಇತ್ಯಾದಿಗಳ ಮೂಲಕ ಎಡ ಉಗ್ರವಾದವನ್ನು ತೊಡೆದುಹಾಕಲು ಕೇಂದ್ರವು ಅನುಸರಿಸುತ್ತಿರುವ ಬಹು ಆಯಾಮದ ಕಾರ್ಯತಂತ್ರಗಳ ಬಗ್ಗೆ ವಿವರಿಸಿದರು. ಎಡ ಉಗ್ರರ ವಿರುದ್ಧ ಹೋರಾಡಲು ಸ್ಥಳೀಯ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಪ್ರತಿಪಾದಿಸಿದರು. ಬಲಿಷ್ಠ ಸ್ಥಳಿಯ ಪಡೆಗಳು ತಮ್ಮ ಪ್ರದೇಶಗಳಿಂದ ಎಡ ಉಗ್ರ ಸಂಘಟನೆಗಳನ್ನು ಪರಿಣಾಮಕಾರಿಯಾಗಿ ನಿರ್ಮೂಲನೆಗೊಳಿಸಬಲ್ಲದು ಎಂದರು.
ಸಭೆಯ ಬಳಿಕ ಟ್ವಿಟ್ ಮಾಡಿರುವ ಅಮಿತ್ ಶಾ ಅವರು, “ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಫಲಪ್ರದವಾದ ಸಭೆಯನ್ನು ನಡೆಸಿದೆ. ರಾಜ್ಯಗಳ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಎಡಪಂಥೀಯ ಉಗ್ರವಾದ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ನಿರ್ಮೂಲನೆ ಮಾಡಲು ಕಟಿಬದ್ಧವಾಗಿದೆ” ಎಂದರು.
Had a very fruitful meeting with the CM’s of the LWE affected states.
Discussed several issues related to the security & development of these states.
Left Wing Extremism is against the idea of democracy and under the leadership of PM @narendramodi we are committed to uproot it. pic.twitter.com/xB7LgLI4lo
— Amit Shah (@AmitShah) August 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.