ನವದೆಹಲಿ: ಭಾರತದ ಬೆಳವಣಿಗೆಯು ಕೇವಲ ಬುದ್ಧಿಮತ್ತೆಯನ್ನು ಆಧರಿಸಿಲ್ಲ, ಬದಲಾಗಿ ದೈಹಿಕ ಸಾಮರ್ಥ್ಯವನ್ನೂ ಆಧರಿಸಿದೆ. ರಾಷ್ಟ್ರದ ಆರೋಗ್ಯವು ಅದರ ನಾಗರಿಕರ ಆರೋಗ್ಯವನ್ನು ಅವಲಂಬಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ವಾರ ಫಿಟ್ ಇಂಡಿಯಾ ಅಭಿಯಾನವನ್ನು ಆರಂಭಿಸುತ್ತಿದ್ದಾರೆ.
ಆಗಸ್ಟ್ 29 ರಂದು ಈ ಅಭಿಯಾನಕ್ಕೆ ಚಾಲನೆಯನ್ನು ಮೋದಿ ನೀಡಲಿದ್ದು, ಅಲ್ಲಿಂದ ಇದು ರಾಷ್ಟ್ರವ್ಯಾಪಿಯಾಗಿ ಅಭಿಮಾನವಾಗಿ ರೂಪುಗೊಳ್ಳಲಿದೆ. ದೈಹಿಕ ಚಟುವಟಿಕೆಯಲ್ಲಿ ಮತ್ತು ಕ್ರೀಡೆಯಲ್ಲಿ ಪ್ರತಿನಿತ್ಯ ಭಾಗವಹಿಸುವಂತೆ ದೇಶದ ನಾಗರಿಕರನ್ನು ಉತ್ತೇಜಿಸುವ ಸಲುವಾಗಿ ಈ ಆಂದೋಲನವನ್ನು ಆರಂಭಿಸಲಾಗುತ್ತಿದೆ.
ಆಂದೋಲನದ ಬಗೆಗಿನ ಸರ್ಕಾರದ ಸಲಹೆಯ ಮೇರೆಗೆ ಕ್ರೀಡಾಸಚಿವ ಕಿರಣ್ ರಿಜಿಜು ಅವರ ನೇತೃತ್ವದಲ್ಲಿ 28 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ. 28 ಸದಸ್ಯರ ಪೈಕಿ 12 ಮಂದಿ ಸರ್ಕಾರದ ಕ್ರೀಡಾ, ಪ್ರೌಢಶಿಕ್ಷಣ, ಆಯುಷ್, ಯುವ ವ್ಯವಹಾರ ಮುಂತಾದವುಗಳ ಕಾರ್ಯದರ್ಶಿಗಳಾಗಿದ್ದಾರೆ. ಐಒಎ ಅಧ್ಯಕ್ಷ ಮತ್ತು 7 ಎನ್ ಎಸ್ ಎಫ್ ಮುಖ್ಯಸ್ಥರುಗಳು ಬಾಕ್ಸಿಂಗ್ ಅಥ್ಲೆಟಿಕ್ಸ್ ಫುಟ್ಬಾಲ್ ಮತ್ತು ಸೈಕ್ಲಿಂಗ್ ಮುಂತಾದವುಗಳ ಮುಖ್ಯಸ್ಥರುಗಳು ಈ ಸಮಿತಿಯಲ್ಲಿ ಸದಸ್ಯರಾಗಿ ಇರಲಿದ್ದಾರೆ.
ಸಮಿತಿಯು ಖಾಸಗಿ ವಲಯದ ಪ್ರತಿನಿಧಿಗಳನ್ನು ಮತ್ತು ಕಾನ್ಫಿಡರೇಷನ್ ಆಫ್ ಇಂಡಿಯಾ ಇಂಡಸ್ಟ್ರೀಸ್ ಅಶೋಚಾಂ ಇಂಡಿಯಾ, ಎಫ್ಐಸಿಸಿಐ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಮಿಲಿಂದ್ ಸೋಮನ್ ಅವರನ್ನು ಒಳಗೊಳ್ಳಲಿದೆ.
‘ಸರಕಾರದ ಫಿಟ್ ಇಂಡಿಯಾ ಆಂದೋಲನದ ಸಲಹಾಸಮಿತಿಯ ಭಾಗವಾಗಿರುವ ಸಂತೋಷವಾಗುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಅರ್ಪಣೆ ಮಾಡುತ್ತೇನೆ. ಪ್ರತಿ ಭಾರತೀಯನು ಫಿಟ್ ಆಗಿರಲು ಅತ್ಯಂತ ಸರಳ ವಿಧಾನಗಳನ್ನು ತಿಳಿಸಿಕೊಡಲು ಪ್ರಯತ್ನಿಸುತ್ತೇನೆ’ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.