ನವದೆಹಲಿ: ಭಾರತದೊಳಗೆ ನುಸುಳಿಸುವ ಉದ್ದೇಶದಿಂದ ವಾಸ್ತವ ಗಡಿ ರೇಖೆಯಾದ್ಯಂತದ ವಿವಿಧ ಲಾಂಚ್ಪ್ಯಾಡ್ಗಳಲ್ಲಿ ಪಾಕಿಸ್ಥಾನವು ಅಫ್ಘಾನ್ ಪಶ್ತೂನ್ ಭಯೋತ್ಪಾದಕರನ್ನು ಇರಿಸಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.
ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಸಲುವಾಗಿ ಪಾಕಿಸ್ಥಾನವು ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕದ ಸಮಸ್ಯೆಯನ್ನು ಅಂತಾರಾಷ್ಟ್ರೀಕರಿಸುವ ಪಾಕಿಸ್ಥಾನದ ಪ್ರಯತ್ನಗಳು ಫಲ ನೀಡದ ಹಿನ್ನಲೆಯಲ್ಲಿ ಅದು ಉಗ್ರರನ್ನು ಒಳನುಸುಳಿಸುವ ಪ್ರಯತ್ನವನ್ನು ಆರಂಭಿಸಿದೆ.
“ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಎಂ), 12ಕ್ಕೂ ಅಧಿಕ ಅಫ್ಘಾನ್ ಮತ್ತು ಪಶ್ತೂನ್ ಭಯೋತ್ಪಾದಕರನ್ನು ಪಾಕಿಸ್ಥಾನ ಸೇನೆಯ ತರಬೇತಿ ಪಡೆದ ವಿಶೇಷ ಗುಂಪುಗಳನ್ನು ಒಳಗೊಂಡ ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ)ನಲ್ಲಿ ನಿಯೋಜಿಸಿದೆ ಮತ್ತು ಇವರನ್ನು ಎಲ್ ಓಸಿ ಮತ್ತು ಉತ್ತರ ಕಾಶ್ಮೀರದ ಲಿಪಾ ಕಣಿವೆಯ ಮೂಲಕ ಭಾರತಕ್ಕೆ ಒಳನುಸುಳಿಸುವ ಪ್ರಯತ್ನ ನಡೆಸಲಾಗುತ್ತಿದ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರತದ ಪ್ರಮುಖ ನಗರಗಳನ್ನು ಭಯೋತ್ಪಾದಕರು ಗುರಿಯಾಗಿಸಬಹುದು ಎಂದು ಗುಪ್ತಚರ ಮಾಹಿತಿ ತಿಳಿಸಿದೆ. ಎಲ್ಒಸಿಯಲ್ಲಿ ನಿಯಮಿತವಾಗಿ ಉದ್ವಿಗ್ನತೆ ಸೃಷ್ಟಿಯಾಗುತ್ತಿದೆ. ಸಾಮಾನ್ಯವಾಗಿ, ಪಾಕಿಸ್ಥಾನ ಸೇನೆಯು ಭಯತ್ಪಾದಕರ ಒಳನುಸುಳುವಿಕೆಗೆ ಅನುಕೂಲ ಮಾಡಿಕೊಡಲು ಕದನ ವಿರಾಮ ಉಲ್ಲಂಘನೆಯನ್ನು ಆಶ್ರಯಿಸುತ್ತದೆ.
ಒಳನುಸುಳಿಸಲು ತರಬೇತು ಪಡೆದ ಉಗ್ರರ ಕೊರತೆ ಸೃಷ್ಟಿಯಾಗುತ್ತಿರುವುದರಿಂದಲೇ ಅಫ್ಘಾನ್ ಮತ್ತು ಪಶ್ತೂನ್ ಉಗ್ರರನ್ನು ಪಾಕ್ ಸೇನೆ ನಿಯೋಜಿಸುತ್ತಿದೆ. ಭಾರತೀಯ ಸೈನಿಕರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯೇ ಇದಕ್ಕೆ ಕಾರಣ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೇ, ಅಫ್ಘಾನ್, ಪಶ್ತೂನ್ ಭಯೋತ್ಪಾದಕರೂ ಹೆಚ್ಚು ಅಪಾಯಕಾರಿ ಎಂದೂ ಅವರು ಎಚ್ಚರಿಸಿದ್ದಾರೆ.
ಇನ್ನೊಂದೆಡೆ ತಮಿಳುನಾಡಿಗೆ ಉಗ್ರರು ಪ್ರವೇಶಿಸಿದ್ದಾರೆ ಎಂಬ ಬಗ್ಗೆ ಮಾಹಿತಿಗಳು ಲಭ್ಯವಾಗಿರುವ ಹಿನ್ನಲೆಯಲ್ಲಿ ಅಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಿಂದೂಗಳಂತೆ ವೇಷ ಧರಿಸಿ ಉಗ್ರರು ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.