ನವದೆಹಲಿ: ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ನಿರಂತರವಾಗಿ ಹಗರಣಗಳು ನಡೆಯಲು ಅವಕಾಶ ಮಾಡಿಕೊಟ್ಟಿತು, ಇದರ ಪರಿಣಾಮವಾಗಿ ಕಳೆದ 70 ವರ್ಷಗಳಲ್ಲಿ ರೂ.4.82 ಲಕ್ಷ ಕೋಟಿಯಷ್ಟು ಸರ್ಕಾರ ಬೊಕ್ಕಸಕ್ಕೆ ನಷ್ಟವಾಗಿದೆ. 2 ಜಿ, ಬೊಫೋರ್ಸ್, ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್, ಸ್ಕಾರ್ಪೀನ್ ಸಬ್ ಮರೀನ್, ಮಹಾರಾಷ್ಟ್ರ ನೀರಾವರಿ, ಕಾಮನ್ವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು ಹಗರಣಗಳು ಸೇರಿದಂತೆ ಹಲವು ಹಗರಣಗಳ ಆರೋಪ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮೇಲಿವೆ.
ಕಾಂಗ್ರೆಸ್ನ ಹಲವಾರು ಉನ್ನತ ನಾಯಕರು ಬಹುಕೋಟಿ ಹಗರಣಗಳಲ್ಲಿ ಭಾಗಿಯಾಗಿದ ಆರೋಪವನ್ನು ಹೊಂದಿದ್ದಾರೆ. ಲಕ್ಷಗಳಿಂದ ಹಿಡಿದು ಕೋಟಿವರೆಗಿನ ಹಗರಣಗಲ್ಲಿ ಕಾಂಗ್ರೆಸ್ ನಾಯಕರುಗಳ ಹೆಸರಿದೆ. 1948ರಿಂದ ಕಾಂಗ್ರೆಸ್ ಭಾಗಿಯಾದ ಹಗರಣಗಳಲ್ಲಿ ಉಂಟಾದ ನಷ್ಟದ ಅಂದಾಜು ಮೊತ್ತ ರೂ.4.82 ಲಕ್ಷ ಕೋಟಿಯಾಗಿದೆ.
2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಗರಣಗಳು ಮತ್ತು ಅದರಲ್ಲಿ ಭಾಗಿಯಾದ ಆರೋಪಿಗಳ ಮೇಲೆ ಕ್ರಮ ಜರುಗಿಸುವ ಕಾರ್ಯಗಳು ನಡೆದಿವೆ. ಮಾತ್ರವಲ್ಲದೇ, ಭಷ್ಟಾಚಾರದ ವಿರುದ್ಧ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಸುಧಾರಣೆಯನ್ನು ಕಂಡಿದೆ. 2013 ರಲ್ಲಿ ಯುಪಿಎ ಆಡಳಿತದಲ್ಲಿ ದೇಶದ ಭ್ರಷ್ಟಾಚಾರ ಶ್ರೇಯಾಂಕವು ಸಾರ್ವಕಾಲಿಕ ಕನಿಷ್ಠ ಮಟ್ಟ ಅಂದರೆ 94 ಕ್ಕೆ ಇಳಿದಿತ್ತು.
1948 ರ ಜೀಪ್ ಹಗರಣವು ಸ್ವತಂತ್ರ ಭಾರತದ ಮೊದಲ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದ್ದು, ಇದರಲ್ಲಿ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರೋಪಿಯಾಗಿತ್ತು.
ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ನಾಯಕರ ಪಟ್ಟಿ ಬಹಳ ಉದ್ದವಾಗಿದೆ ಮತ್ತು ನೆಹರೂ, ರಾಜೀವ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಮತ್ತು ಅನೇಕರನ್ನು ಈ ಪಟ್ಟಿ ಒಳಗೊಂಡಿದೆ.
ಮಾಜಿ ಗೃಹ ಮತ್ತು ಹಣಕಾಸು ಸಚಿವರಾಗಿದ್ದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಈ ಪಟ್ಟಿಗೆ ಹೊಸ ಸೇರ್ಪಡೆಗೊಂಡಿದ್ದಾರೆ. ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಗುರುವಾರ ಸಿಬಿಐ ಕಸ್ಟಡಿಗೆ ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.