ನವದೆಹಲಿ: ದೇಶದಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ, ನಾಲ್ಕು ರಾಜ್ಯಗಳಲ್ಲಿನ 137 ಶಿಖರಗಳನ್ನು ವಿದೇಶಿ ಪ್ರವಾಸಿಗರಿಗಾಗಿ ಮುಕ್ತವಾಗಿಸಲು ಸರ್ಕಾರ ನಿರ್ಧರಿಸಿದೆ.
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳಲ್ಲಿರುವ ಈ ಶಿಖರಗಳ ಮೇಲೆ ಪರ್ವತಾರೋಹಣ ಮತ್ತು ಚಾರಣವನ್ನು ಮಾಡಲು ಇನ್ನು ಮುಂದೆ ವಿದೇಶಿ ಪ್ರವಾಸಿಗರು ಪರ್ವತಾರೋಹಣ ವೀಸಾಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ 15 ಶಿಖರಗಳು ಸೇರಿವೆ. ಉತ್ತರಾಖಂಡದ ಅತೀಹೆಚ್ಚು ಶಿಖರಗಳು ಅಂದರೆ 51 ಶಿಖರಗಳನ್ನು ವಿದೇಶಿಗರಿಗಾಗಿ ತೆರೆಯಲಾಗುತ್ತಿದೆ. ಹಿಮಾಚಲ ಪ್ರದೇಶ 47 ಮತ್ತು ಸಿಕ್ಕಿಂನ 24 ಶಿಖರಗಳನ್ನು ವಿದೇಶಿ ಪ್ರವಾಸಿಗರಿಗೆ ತೆರೆಯಲಾಗುತ್ತದೆ.
ರಾಜ್ಯಗಳು ಇನ್ನು ಮುಂದೆ ಈ ತಾಣಗಳಿಗಾಗಿ ಸಾಹಸ ಪ್ರವಾಸೋದ್ಯಮ ನಿರ್ವಾಹಕರನ್ನು ನೋಂದಾಯಿಸಬಹುದು. ಸಾಹಸ ಪ್ರವಾಸೋದ್ಯಮವು ಪ್ರವಾಸೋದ್ಯಮ ಸಚಿವಾಲಯದ ಪ್ರಮುಖ ಗಮನವಾಗಿತ್ತು, ಇದು ದೇಶಕ್ಕೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರಯಾಣಿಕರನ್ನು ಆಕರ್ಷಿಸಲಿದೆ.
ಪರ್ವತಾರೋಹಣ ಮತ್ತು ಚಾರಣವನ್ನು ಒಳಗೊಂಡಿರುವ ಭೂಮಿ, ವಾಯು ಮತ್ತು ಜಲ ಆಧಾರಿತ ಚಟುವಟಿಕೆಗಳನ್ನು ಒಳಗೊಂಡಿರುವ ಸಾಹಸ ಪ್ರವಾಸೋದ್ಯಮ ಮಾರ್ಗಸೂಚಿಗಳನ್ನು ಸಚಿವಾಲಯವು 2018 ರಲ್ಲಿ ಬಿಡುಗಡೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.