ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಉದ್ವಿಗ್ನಗೊಂಡಿದೆ, ಅಲ್ಲಿನ ಜನರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಎಂಬಿತ್ಯಾದಿ ವರದಿಗಳು ಬರುತ್ತಿವೆ. ಆದರೆ ಆ ವರದಿಗಳಲ್ಲಿ ಹುರುಳಿಲ್ಲ. ಪುಲ್ವಾಮಾ ಜಿಲ್ಲೆಯ ವ್ಯಾಪ್ತಿಗೆ ಬರುವ ಕಾಶ್ಮೀರದ ಟ್ರಾಲ್ನ ಸ್ಥಳೀಯ ನಿವಾಸಿಯೊಬ್ಬರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತಾನು ಸಂಪೂರ್ಣ ನಂಬಿಕೆ ಹೊಂದಿರುವುದಾಗಿ ಮತ್ತು ಜನರ ಕಲ್ಯಾಣಕ್ಕಾಗಿ ಅದು ಕೆಲಸ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಪ್ರಧಾನಿ ಮೋದಿಯವರನ್ನು ಒಳ್ಳೆಯ ಮನುಷ್ಯ ಎಂದು ಅವರು ಕರೆದಿದ್ದಾರೆ. ಸ್ಥಳೀಯ ಶಾಲೆಗಳ ಸುಧಾರಣೆ ಮಾಡಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಆಹಾರಗಳನ್ನು ಒದಗಿಸಬೇಕು, ತಮ್ಮ ಗ್ರಾಮದ ಪಶುಸಂಗೋಪನಾ ಕೇಂದ್ರಗಳನ್ನು ಸುಧಾರಿಸಬೇಕು ಮತ್ತು ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ಮಾಡಿಕೊಡಬೇಕು ಎಂಬಿತ್ಯಾದಿ ಕೆಲವು ಬೇಡಿಕೆಗಳನ್ನು ಅವರು ಮೋದಿ ಸರ್ಕಾರಕ್ಕೆ ಮಾಡಿದ್ದಾರೆ.
ಶ್ರೀನಗರದಲ್ಲಿ ಶಾಲೆಗಳು ತೆರೆದಿದ್ದು, ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿವೆ. ಹೀಗಾಗಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ನಿಧಾನಕ್ಕೆ ಸಾಮಾನ್ಯ ಸ್ಥಿತಿಗೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ವರದಿಯಾಗಿದೆ.
ಸಂವಿಧಾನದ 370ನೇ ವಿಧಿ ರದ್ದುಗೊಳಿಸುವಿಕೆಯ ಮತ್ತೊಂದು ಪರಿಣಾಮವೆಂದರೆ, ಶ್ರೀನಗರ ಮತ್ತು ಜಮ್ಮುವಿನಲ್ಲಿನ ಪುರಸಭೆಯ ಮೇಯರ್ಗಳಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡುವುದು. ಇದರ ಪರಿಣಾಮವಾಗಿ, ಮೇಯರ್ಗಳಾದ ಜುನೈದ್ ಅಜೀಮ್ ಮಾಟು ಮತ್ತು ಚಂದರ್ ಮೋಹನ್ ಗುಪ್ತಾ ಅವರು ಈಗ ಆಡಳಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿದ್ದಾರೆ.
This is Srinagar today (17/08/19) Life is normal, there is movement of vehicles on the streets. pic.twitter.com/Zz2fX6sWCJ
— Vikas Bhadauria (ABP News) (@vikasbha) August 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.