ನವದೆಹಲಿ: ಜಾಂಬಿಯಾದ ಅಧ್ಯಕ್ಷ ಎಡ್ಗರ್ ಚೌಗ್ವಾ ಲುಂಗು ಅವರು ಆಗಸ್ಟ್ 20 ರಿಂದ 22 ರವರೆಗೆ ಭಾರತ ಪ್ರವಾಸದಲ್ಲಿದ್ದು, ಇದು ಅವರ ಮೊದಲ ಭಾರತ ಪ್ರವಾಸವಾಗಿದೆ. ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾಂಬಿಯಾದ ಅಧ್ಯಕ್ಷ ಎಡ್ಗರ್ ಚೌಗ್ವಾ ಲುಂಗು ಅವರು ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದರು.
“ಆರೋಗ್ಯ, ಪ್ರವಾಸೋದ್ಯಮ, ಕೃಷಿ, ಆಹಾರ ಸಂಸ್ಕರಣೆ, ಗಣಿಗಾರಿಕೆ ಮತ್ತು ಇಂಧನಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಜಾಂಬಿಯಾದಲ್ಲಿನ ಭಾರತೀಯ ವಲಸೆಗಾರರು ಎರಡು ರಾಷ್ಟ್ರಗಳ ನಡುವಿನ ಪ್ರಮುಖ ಎಳೆಯಾಗಿದ್ದಾರೆ. ಸಾಂಸ್ಕೃತಿಕ ವಿನಿಮಯ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ನಾವು ಹೊಸ ಪರಿವರ್ತನೆಗಳನ್ನು ತರುತ್ತೇವೆ. ಜಾಂಬಿಯಾನ್ ರಾಜತಾಂತ್ರಿಕರ ತರಬೇತಿಯಲ್ಲಿ ಭಾಗವಹಿಸಲು ನಮಗೆ ತುಂಬಾ ಸಂತೋಷವಾಗಿದೆ ”ಎಂದು ಮೋದಿ ದ್ವಿಪಕ್ಷೀಯ ಮಾತುಕತೆಯ ವೇಳೆ ಹೇಳಿದ್ದಾರೆ.
“ಜಾಂಬಿಯಾ ಖನಿಜ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ದೇಶವಾಗಿದೆ. ಭಾರತವು ಜಾಂಬಿಯಾದಿಂದ ಹೆಚ್ಚಿನ ಪ್ರಮಾಣದ ತಾಮ್ರವನ್ನು ಆಮದು ಮಾಡಿಕೊಳ್ಳುತ್ತದೆ. ಖನಿಜ ಸಂಪನ್ಮೂಲಗಳ ಕುರಿತು ಉಭಯ ದೇಶಗಳ ನಡುವಿನ ಒಪ್ಪಂದವು ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಖನಿಜ ಸಂಪನ್ಮೂಲಗಳ ಆವಿಷ್ಕಾರ ಮತ್ತು ಹೊರತೆಗೆಯುವಿಕೆಯ ಬಗ್ಗೆ ಒಂದು ರೂಪರೇಷೆಯನ್ನು ನೀಡುತ್ತದೆ “ಎಂದು ಪ್ರಧಾನಿ ಹೇಳಿದರು.
ಉಭಯ ರಾಷ್ಟ್ರಗಳು ರಕ್ಷಣಾ ಸಹಕಾರ ಕುರಿತ ಒಂದು ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಉಭಯ ದೇಶಗಳ ರಕ್ಷಣಾ ಸಂಸ್ಥೆಗಳಲ್ಲಿ ಸಾಂಸ್ಥಿಕ ವಿನಿಮಯವನ್ನು ಹೆಚ್ಚಿಸಲಿದೆ. ಜಾಂಬಿಯಾ ಸಶಸ್ತ್ರ ಪಡೆಗಳ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಮಿಲಿಟರಿ ಮತ್ತು ವಾಯುಪಡೆಯ ತರಬೇತಿ ತಂಡವನ್ನು ಜಾಂಬಿಯಾದಲ್ಲಿ ನಿಯೋಜಿಸಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದರು. ಜಾಂಬಿಯಾ ವಾಯುಪಡೆಯ ನೆಲೆಗಳಲ್ಲಿ ಭಾರತ ಐದು ಫೈಯರ್ ಟೆಂಡರ್ಗಳನ್ನು ನಿಯೋಜಿಸಲಿದೆ.
Furthering friendship with Zambia. Addressing the press with President @EdgarCLungu. https://t.co/fbgmZORKsa
— Narendra Modi (@narendramodi) August 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.