ನವದೆಹಲಿ: ಎನ್ಡಿಎ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ನಗರ ಅಡಿಯಲ್ಲಿನ ‘ಎಲ್ಲರಿಗೂ ವಸತಿ’ ಅಭಿಯಾನದಡಿ 2020 ರ ವೇಳೆಗೆ 1 ಕೋಟಿ ಮನೆಗಳ ನಿರ್ಮಾಣ ಗುರಿಯನ್ನು ಸಾಧಿಸಲು ಸಜ್ಜಾಗಿದ್ದೇವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ.
“ನಾವು 2022 ರ ವೇಳೆಗೆ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ನಾವು ಈಗಾಗಲೇ ಸುಮಾರು 84 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಒಂದು ಕೋಟಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂಬದು ಸಂಪೂರ್ಣ ವಿಶ್ವಾಸವಿದೆ ನನಗಿದೆ” ಎಂದು ಪುರಿ ಹೇಳಿದ್ದಾರೆ.
ಮಂಜೂರಾದ ನಂತರ ಮನೆಗಳ ತ್ವರಿತಗತಿಯ ನಿರ್ಮಾಣದ ಬಗ್ಗೆಯೂ ಅವರು ಆಶಾವಾದ ವ್ಯಕ್ತಪಡಿಸಿದರು. ಈ ಯೋಜನೆಯಡಿ ಹೆಚ್ಚುವರಿಯಾಗಿ ಇನ್ನೂ 12 ಲಕ್ಷ ಮನೆಗಳ ನಿರ್ಮಾಣದ ಬಗ್ಗೆ ಪ್ರಸ್ತಾಪ ಬಂದಿದ್ದು, ಈ ಬಗ್ಗೆ ಪರಿಶೀಲನೆಯನ್ನು ಸಚಿವಾಲಯ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ 24 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಮತ್ತು ಶೀಘ್ರದಲ್ಲೇ ಈ ಸಂಖ್ಯೆ 50 ಲಕ್ಷವನ್ನು ತಲುಪಲಿದೆ ಎಂದು ಪುರಿ ಮಾಹಿತಿ ನೀಡಿದರು.
2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಕಡಿಮೆ ಆದಾಯದ ವರ್ಗಗಳನ್ನು ಗುರಿಯಾಗಿಸಿದ ಮಹತ್ವದ ಯೋಜನೆ ಮತ್ತು ಈ ವರ್ಗಗಳಲ್ಲಿನ ಕುಟುಂಬಗಳಿಗೆ ತಮ್ಮದೇ ಆದ ವಸತಿಯನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಪ್ರೋತ್ಸಾಹಗಳನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.