ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದು ಭೌಗೋಳಿಕ-ರಾಜಕೀಯ ಪೈಪೋಟಿಯನ್ನೂ ಸೇರಿಕೊಳ್ಳಬಹುದು. ಆರ್ಥಿಕ ಶಕ್ತಿ ಕೇಂದ್ರವಾಗಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕಾವನ್ನು ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ರಿಪ್ಲೇಸ್ ಮಾಡಬಹುದು. ಪೂರ್ವದ ಮತ್ತೊಂದು ಉದಯೋನ್ಮುಖ ಶಕ್ತಿ ಭಾರತ. ಪೂರ್ವದಿಂದ ಬಂದ ಚೀನಾ ಮತ್ತು ಭಾರತ ಎರಡನ್ನೂ ನಾಗರಿಕತೆಯ ರಾಷ್ಟ್ರಗಳು ಎಂದು ಕರೆಯಲಾಗುತ್ತದೆ.
ಇದರ ಅರ್ಥವು ಸುದೀರ್ಘ ಇತಿಹಾಸ ಮತ್ತು ಆಡಳಿತ ಸಂಪ್ರದಾಯವನ್ನು ಹೊಂದಿದೆ. ನಾವು 2 ಸಾವಿರ ವರ್ಷಗಳ ಉದಾಹರಣೆಯನ್ನು ತೆಗೆದುಕೊಂಡರೆ, 18 ರಿಂದ 20 ನೇ ಶತಮಾನದ ಇನ್ನೂರು ವರ್ಷಗಳನ್ನು ಹೊರತುಪಡಿಸಿದರೆ, ಉಳಿದ ಶತಮಾನಗಳನ್ನು ಏಷ್ಯಾದ ಶಕ್ತಿಗಳು ಮುನ್ನಡೆಸಿದವು. 1 ಎ.ಡಿ.ಯಲ್ಲಿ ವಿಶ್ವ ಆರ್ಥಿಕತೆಗೆ ಭಾರತದ ಕೊಡುಗೆಯು ಶೇ.35ಕ್ಕಿಂತಲೂ ಹೆಚ್ಚು, ಇದು 2019ರಲ್ಲಿ ಶೇ.3.5ಕ್ಕಿಂತಲೂ ಇಳಿಕೆಯಾಗಿದೆ ಎಂದು ಐತಿಹಾಸಿಕ ದತ್ತಾಂಶವೊಂದು ವಿವರಿಸಿದೆ. ಆದರೆ ಈ ಐತಿಹಾಸಿಕ ಸತ್ಯವು ಕಳೆದುಹೋದ ಪ್ರಾಬಲವ್ಯವನ್ನು ಪಡೆಯುವ ಸಿದ್ಧಾಂತವನ್ನು ನಿರೂಪಿಸಲು ಭಾರತಕ್ಕೆ ಬಲವಾದ ನೆಲೆಯನ್ನು ನೀಡಿದೆ. ಭಾರತವು ಅತ್ಯಂತ ಪ್ರಮುಖ ಶಕ್ತಿಯಾಗುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ. ಅಧಿಕಾರವನ್ನು ಕೇವಲ ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಅಲ್ಲ, ಸಹಕಾರ ಮತ್ತು ಸಹೋದರತ್ವದ ಮೂಲಕ ಜಗತ್ತಿನ ಎಲ್ಲ ದೇಶಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಪ್ರದರ್ಶಿಸಲಾಗುತ್ತದೆ. 18 ರಿಂದ 21 ನೇ ಶತಮಾನದವರೆಗೆ, ವಿಶ್ವ ರಾಜಕಾರಣದ ಇತಿಹಾಸವು ರಕ್ತಪಾತ ಮತ್ತು ಒಳಜಗಳದಿಂದ ತುಂಬಿತ್ತು. ಸೂಪರ್ ಪವರ್ ಪರಿಕಲ್ಪನೆಯು ಮಿಲಿಟರಿ ದಬ್ಬಾಳಿಕೆ ಮತ್ತು ಆರ್ಥಿಕ ಅಧೀನದಿಂದ ಪ್ರಾರಂಭವಾಯಿತು. ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಏಷ್ಯಾ ಮತ್ತು ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಿತು. ಇದರಲ್ಲಿ ಬ್ರಿಟನ್ ಅತಿದೊಡ್ಡ ಪಾಲನ್ನು ಪಡೆದುಕೊಂಡಿತು. ಸುಮಾರು ಒಂದು ಶತಮಾನದವರೆಗೆ ಬ್ರಿಟನ್ ಏಕೈಕ ಪ್ರಮುಖ ಶಕ್ತಿಯಾಗಿತ್ತು, ಬಳಿಕ ಅಮೆರಿಕ ಅದರ ಉತ್ತರಾಧಿಕಾರಿಯಾಯಿತು. ವಿಶ್ವ ರಾಜಕಾರಣದ ಎಲ್ಲಾ ಸಿದ್ಧಾಂತಗಳು ಅಮೆರಿಕದ ಪ್ರಯಾಣವನ್ನು ಕೇವಲ ಶಕ್ತಿಯೆಂದು ಸಮರ್ಥಿಸಿಕೊಳ್ಳಲು ಆ ದೇಶವನ್ನೇ ಆಧರಿಸಿವೆ. ವಿಶ್ವ ರಾಜಕಾರಣದ ಬದಲಾಗುತ್ತಿರುವ ಚಲನಶೀಲತೆಯನ್ನು ನೋಡಲು ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ಥರ್ಡ್ ವರ್ಲ್ಡ್ ರಾಷ್ಟ್ರಗಳು ಒಂದೇ ಕನ್ನಡಿಯನ್ನು ಬಳಸಿಕೊಂಡವು.
ಅಂತಾರಾಷ್ಟ್ರೀಯ ರಾಜಕಾರಣ ತಜ್ಞರಾದ ಸಿಂಗಾಪುರದ ಕಿಶೋರ್ ಮಾಹುಬಾನಿ ಅವರು, ಎರಡು ಶತಮಾನಗಳವರೆಗಿನ ಪಾಶ್ಚಿಮಾತ್ಯ ಪ್ರಾಬಲ್ಯವನ್ನು ಐತಿಹಾಸಿಕ ಕೆಡುಕು ಎಂದು ಕರೆದರು. ಇದರರ್ಥ ಪೂರ್ವವು ವಿಶ್ವ ರಾಜಕಾರಣದ ಚಾಲನಾ ಶಕ್ತಿಯಾಗಲು ಎಲ್ಲಾ ಸಂಪನ್ಮೂಲಗಳನ್ನು ಹೊಂದಿದೆ ಎಂಬುದು. ಪಾಶ್ಚಿಮಾತ್ಯ ದಾರ್ಶನಿಕ ಕ್ವಿನ್ಸಿ ರೈಟ್ ಅವರು, ವಿಶ್ವ ರಾಜಕಾರಣದ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳಲು ವಿಶ್ವ ರಾಜಕಾರಣದ ಬಗೆಗಿನ ಭಾರತೀಯ ದೃಷ್ಟಿಕೋನಗಳು ಹೆಚ್ಚು ಉತ್ತಮ ಮತ್ತು ಆಳವಾದವು ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಕೌಟಿಲ್ಯ ಮತ್ತು ಮನು ಅವರ ಸಿದ್ಧಾಂತಗಳು ಭಾರತೀಯ ರಾಜಕೀಯ ಚಿಂತನೆಯ ಕೆಲವು ಪುಟಗಳಲ್ಲಿ ಸೀಮಿತವಾಗಿ ಉಳಿದಿವೆ. ಚೀನಾ ತನ್ನದೇ ಆದ ರೀತಿಯಲ್ಲಿ ಅಭಿವೃದ್ಧಿ ಹೊಂದಿತು. ಚೀನೀ ಕಾರ್ಯತಂತ್ರದ ಮಾರ್ಗಸೂಚಿಯನ್ನು ತಾತ್ವಿಕ ಆಧಾರಗಳ ಸಾಮಾನು ಸರಂಜಾಮುಗಳಿಂದ ನಿರ್ದೇಶಿಸಲಾಗುತ್ತದೆ, ಮುಖ್ಯವಾಗಿ ಕನ್ಫ್ಯೂಷಿಯಸ್, ದವಾಯಿಸಂ ಮತ್ತು ಮಾವೋಗಳಿಂದ. ವಿಶ್ವ ರಾಜಕಾರಣದ ಚೀನಾದ ಪಥವು ಬಹಳ ಸಂಕೀರ್ಣವಾಗಿದೆ. ಆದ್ದರಿಂದ, ಪಾಶ್ಚಿಮಾತ್ಯ ಸಿದ್ಧಾಂತಗಳು ಚೀನೀ ಚಲನೆಯನ್ನು ಅಳೆಯುವಲ್ಲಿ ವಿಫಲವಾಗಿವೆ.
ಭಾರತೀಯ ದೃಷ್ಟಿಕೋನವು ತುಂಬಾ ನೇರವಾಗಿದೆ. ವಿಶ್ವ ಗುರುವಿನ ಪರಿಕಲ್ಪನೆಯು ಬಲಾತ್ಕಾರ, ಬಲ ಅಥವಾ ಆರ್ಥಿಕ ನಿರ್ಬಂಧವನ್ನು ಪ್ರತಿಪಾದಿಸುವುದಿಲ್ಲ. ಅಮೆರಿಕದ ವಿಭಿನ್ನ ಸಿದ್ಧಾಂತಗಳನ್ನು ನೋಡಿದರೆ ಅದು ಇತರರಿಗೆ ಹಾನಿ ಮಾಡುವುದನ್ನೇ ಪ್ರತಿಪಾದಿಸುತ್ತದೆ. ಭಾರತೀಯ ತತ್ವಶಾಸ್ತ್ರವು ಶಾಂತಿ ಮತ್ತು ಸಮೃದ್ಧಿಯ ಪರಿಕಲ್ಪನೆಯನ್ನು ಪ್ರದರ್ಶಿಸಿದೆ. ಆಗ್ನೇಯ ಏಷ್ಯಾದಲ್ಲಿ ಭಾರತೀಯ ಪ್ರಭಾವ ಎಲ್ಲರಿಗೂ ತಿಳಿದಿದೆ. ಆದರೆ ಹಿಂದೂ ಸಂಸ್ಕೃತಿಯು ಎಂದಿಗೂ ಆಯಾ ರಾಜ್ಯಗಳ ಸಾಮಾಜಿಕ ಕ್ರಮವನ್ನು ಬದಲಿಸಲಿಲ್ಲ. ಭಾರತೀಯ ಪ್ರಭಾವವು ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಾದ್ಯಂತ ವ್ಯಾಪಿಸಿದೆ. ಬ್ರಿಟಿಷ್ ವಸಾಹತುಶಾಹಿ ಶಕ್ತಿಯು ಮಧ್ಯಪ್ರಾಚ್ಯ ದೇಶಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಭಾರತದ ಐತಿಹಾಸಿಕ ಸಂಪರ್ಕಗಳನ್ನು ಬಳಸಿಕೊಂಡಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಚರ್ಚಿಲ್ ಅವರೊಂದಿಗಿನ ಸಂಭಾಷಣೆಯಲ್ಲಿ, ಜನರಲ್ ಕ್ಲೌಡ್ ಆಚಿನ್ಲೆಕ್ ಹೀಗೆ ಹೇಳಿದರು: “ನಮ್ಮ ಅಸ್ತಿತ್ವಕ್ಕೆ ಭಾರತ ಬಹಳ ಮುಖ್ಯ. ನಾವು ಇನ್ನೂ ಮಧ್ಯಪ್ರಾಚ್ಯವಿಲ್ಲದೆ ಭಾರತವನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ ಭಾರತವಿಲ್ಲದೆ ಮಧ್ಯಪ್ರಾಚ್ಯವನ್ನು ನಾವು ಹಿಡಿದಿಡಲು ಸಾಧ್ಯವಿಲ್ಲ”.
ಇಡೀ ಜಗತ್ತು ಒಂದು, ಹಂಚಿಕೊಳ್ಳುವಿಕೆ ಮತ್ತು ಪುನರುತ್ಥಾನದ ಅವಶ್ಯಕತೆಯಿದೆ, ನಿಮ್ಮ ದುಃಖಗಳು ನನ್ನ ನೋವು ಎಂಬ ಅಂಶಗಳನ್ನು ವಿಶ್ವ ರಾಜಕಾರಣದ ಯಾವುದೇ ಪಾಶ್ಚಿಮಾತ್ಯ ಸಿದ್ಧಾಂತಗಳು ಪ್ರತಿಪಾದಿಸುವುದಿಲ್ಲ. ಪಾಶ್ಚಿಮಾತ್ಯ ಸಿದ್ಧಾಂತ ವಾಸ್ತವವಾದಿ ಅಥವಾ ಆದರ್ಶವಾದಿ ಅಥವಾ ಇಂಗ್ಲಿಷ್ ಚಿಂತನೆಯ ಶಾಲೆ ಅಥವಾ ಆಧುನಿಕೋತ್ತರ ಚಿಂತನೆಯನ್ನೇ ಪ್ರತಿಪಾದಿಸುತ್ತವೆ. ಚೀನಾವು ಒಂದು ಶಕ್ತಿಯಾಗಿ ಪಾಶ್ಚಿಮಾತ್ಯ ರೇಖೆಗಳಲ್ಲೇ ಸಾಗುತ್ತಿದೆ. ಇದರ ಒಬಿಆರ್ ಪಶ್ಚಿಮದ ಸಾಮ್ರಾಜ್ಯಶಾಹಿ ವಿಧಾನವನ್ನು ಪ್ರದರ್ಶಿಸಿದೆ. ಜಗತ್ತನ್ನು ಸಂಪರ್ಕಿಸುವ ಹೆಸರಿನಲ್ಲಿ, ಇದು ಹಿಂದೂ ಮಹಾಸಾಗರದಲ್ಲಿ ನೌಕಾ ಮಿಲಿಟರಿ ನೆಲೆಗಳನ್ನು ರಚಿಸುತ್ತಿದೆ. ಅದು ತನ್ನದೇ ಆದ ಆರ್ಥಿಕ ಲಾಭಕ್ಕಾಗಿ ಜಗತ್ತನ್ನು ವಿಭಜಿಸುತ್ತಿದೆ.
ವಿಶ್ವ ಗುರು ಎಂದು ಕರೆಯಲ್ಪಡುವ ದೊಡ್ಡ ಶಕ್ತಿ ಎಂದು ಭಾರತ ತನ್ನನ್ನು ಹೇಗೆ ಕರೆದುಕೊಳ್ಳಬಹುದು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಸ್ವಾತಂತ್ರ್ಯದ ನಂತರ, ನಾವು ಅನೇಕ ಅವಕಾಶಗಳನ್ನು ಕಳೆದುಕೊಂಡೆವು ಮತ್ತು ಭಾರತದ ಪಾತ್ರ ಮತ್ತು ಚಿತ್ರಣವನ್ನು ಉದ್ದೇಶಪೂರ್ವಕವಾಗಿ ಸಿಂಕ್ರೊನೈಸ್ ಮಾಡಿಕೊಂಡೆವು. ಜಾಗತಿಕ ಶಕ್ತಿಯ ಸ್ಥಾನಮಾನಕ್ಕೆ ಬೇಕಾದ ಅವಶ್ಯಕತೆಗಳನ್ನು ಭಾರತ ಪ್ರಸ್ತುತ ಪೂರೈಸುತ್ತಿಲ್ಲ ಎಂದು ಭರತ್ ಕರ್ನಾರ್ಡ್ ಪ್ರತಿಪಾದಿಸಿದ್ದಾರೆ. ಒಂದು ದೇಶಕ್ಕೆ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ‘ಚಾಲನಾ ದೃಷ್ಟಿ’, ರಾಷ್ಟ್ರೀಯ ಹಿತಾಸಕ್ತಿಗಳನ್ನು ವ್ಯಾಖ್ಯಾನಿಸುವಿಕೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬೆಂಬಲಿಸಲು ಬಲಾತ್ಕಾರ ಮತ್ತು ಮೃದು ಧೋರಣೆ ಎರಡನ್ನೂ ಅನುರಿಸುವ ಸಾಮರ್ಥ್ಯ ಇರಬೇಕೆಂದು ಕಾರ್ನಾರ್ಡ್ ಪ್ರತಿಪಾದಿಸುತ್ತಾರೆ.
ಭಾರತವು 5000 ವರ್ಷಗಳಷ್ಟು ಹಳೆಯ ನಾಗರಿಕತೆಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅದರ ಆಧುನಿಕ ಅವತಾರಕ್ಕೂ ಕೂಡ ಎಪ್ಪತ್ತೆರಡು ವರ್ಷಗಳು. ದಕ್ಷಿಣ ಏಷ್ಯಾದ ಉಪಖಂಡದ ಅತಿದೊಡ್ಡ ಪ್ರದೇಶವನ್ನು ಭಾರತ ಹೊಂದಿದೆ. ಉತ್ತರಕ್ಕೆ ಹಿಮಾಲಯ ಪರ್ವತ ಶ್ರೇಣಿಗಳು ಮತ್ತು ದಕ್ಷಿಣಕ್ಕೆ ಹಿಂದೂ ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿರುವ ಭಾರತೀಯರು, ಉಪಖಂಡವು ಭೂಖಂಡದ ಒಂದು ಅಸ್ತಿತ್ವ ಎಂದು ನಂಬುತ್ತಾರೆ. ಐದು ಸಾವಿರ ವರ್ಷಗಳ ನಿರಂತರ ನಾಗರಿಕತೆಯು ಉತ್ತರದ ಹಿಮಾಲಯ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಮತ್ತು ಪೂರ್ವದ ಹಿಂದೂ ಕುಶ್ ಮತ್ತು ಅರಾಕನ್ ಪರ್ವತಗಳ ನಡುವಿನ ವಿಶಾಲ ಜಾಗದಲ್ಲಿ ಪೋಷಿಸಲ್ಪಟ್ಟಿದೆ. ಇದು ಭಾರತೀಯ ಪ್ರಭಾವದ ಪ್ರಜ್ಞೆಯನ್ನು ಬೆಳೆಸಿದೆ. ಕೆಲವು ಆಗ್ನೇಯ ಏಷ್ಯಾದ ಸಾಮ್ರಾಜ್ಯಗಳು ಏಳನೇ ಶತಮಾನದಲ್ಲಿ ಇಂದಿನ ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ (ಜಾವಾ) ದಲ್ಲಿ ಶ್ರೀ ವಿಜಯ ಸಾಮ್ರಾಜ್ಯದಂತಹ ಹಿಂದೂ ಧರ್ಮ ಮತ್ತು ಬೌದ್ಧಧರ್ಮವನ್ನುಪಾಲನೆ ಮಾಡಿದ ರಾಜವಂಶಗಳ ನೇತೃತ್ವದಲ್ಲಿದ್ದವು. ಭಾರತೀಯ ಪ್ರಭಾವವು ಪ್ರದೇಶಗಳ ಆಕಾರವನ್ನು ಬದಲಾಯಿಸಲಿಲ್ಲ ಅಥವಾ ಪೂರ್ವ ಏಷ್ಯಾದ ಸಾಮಾಜಿಕ ಕ್ರಮವನ್ನೂ ವಿರೂಪಗೊಳಿಸಲಿಲ್ಲ.
ಸ್ವತಂತ್ರ ಭಾರತವು ಒಂದು ದೊಡ್ಡ ಶಕ್ತಿಯಾಗುವ ಅವಕಾಶಗಳನ್ನು ಹೇಗೆ ಕಳೆದುಕೊಂಡಿತು ಎಂಬುದನ್ನು ವಿವರಿಸಿದ ಅನೇಕ ಆಧುನಿಕ ಕಾಲದ ಭಾರತದ ಕಾರ್ಯತಾಂತ್ರಿಕ ಚಿಂತಕರು ಇದ್ದಾರೆ. ದೂರದ ಪೂರ್ವ ಮತ್ತು ಮಧ್ಯಪ್ರಾಚ್ಯದಲ್ಲಿ ಭಾರತವು ತನ್ನ ಬ್ರಿಟಿಷ್ ಭಾರತದ ಗುರುತಿಸುವಿಕೆಯನ್ನು ಉಳಿಸಿಕೊಂಡಿದ್ದರೆ ಭಾರತವು ಒಂದು ದೊಡ್ಡ ಶಕ್ತಿಯಾಗಬಹುದಿತ್ತು. ಭಾರತೀಯ ಕಾರ್ಯತಂತ್ರಿಕ ಚಿಂತಕ ಪನ್ನಿಕರ್ ತಮ್ಮ ಅಭಿಪ್ರಾಯವನ್ನು ಹೀಗೆ ವಿವರಿಸಿದ್ದಾರೆ, “ಹಳೆಯ ಭಾರತೀಯ ಸಾಮ್ರಾಜ್ಯವು ತನ್ನ ಪರವಾದ ಸಾಮಾನ್ಯ ರಕ್ಷಣೆಯನ್ನು ಹೊಂದಿತ್ತು. ಯಮೆನ್ ದೇಶದ ಅಡೆನ್ ಕೂಡ ಇದರಲ್ಲಿ ಸೇರಿತ್ತು. ಅಡೆನ್ ಒಂದು ಔಟ್ ಪೋಸ್ಟ್ ಆಗಿ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕರಾವಳಿಯನ್ನು ಭಾರತೀಯ ನೀತಿಯ ಕಕ್ಷೆಯಲ್ಲಿ ಇಟ್ಟುಕೊಂಡಿತ್ತು, ಟಿಬೆಟ್ ಅನ್ನು ತಟಸ್ಥಗೊಳಿಸಿತು ಮತ್ತು ಬರ್ಮಾದ ಪೂರ್ವ ಗಡಿಯನ್ನು ಬಲವಾಗಿ ಹಿಡಿದಿಟ್ಟುಕೊಂಡಿತ್ತು.
1943 ರಲ್ಲಿ ಬರೆದ ‘ದಿ ಫ್ಯೂಚರ್ ಆಫ್ ಸೌತ್ ಈಸ್ಟ್ ಏಷ್ಯಾ’ ಪುಸ್ತಕದಲ್ಲಿ ಪನ್ನಿಕರ್ ಅವರು, ಇತಿಹಾಸದಲ್ಲಿ ಭಾರತವು ಆಗ್ನೇಯ ಏಷ್ಯಾವನ್ನು ನಿಯಂತ್ರಿಸಿದ ಏಕೈಕ ಶಕ್ತಿ ಎಂದು ವಾದಿಸಿದ್ದರು. ಪನ್ನಿಕರ್ ಅವರು, ಭಾರತವನ್ನು ಭೌಗೋಳಿಕ ಸ್ಥಾನ, ಗಾತ್ರ ಮತ್ತು ಸಂಪನ್ಮೂಲಗಳಿಂದಾಗಿ ಭದ್ರತಾ ಪೂರೈಕೆದಾರನಾಗಿ ಮತ್ತು ಪ್ರದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ನೋಡಿದರು. ಇನ್ನೊಬ್ಬ ಭಾರತೀಯ ಕಾರ್ಯತಾಂತ್ರಿಕ ಚಿಂತಕ ಪ್ರೊ. ಪಿ.ಎನ್. ಕಿರ್ಪಾಲ್ ಅವರು, 1945 ರಲ್ಲಿ ಹೀಗೆ ಬರೆದಿದ್ದಾರೆ, “ಮೂರು ದೊಡ್ಡ ಹೆದ್ದಾರಿಗಳು ಭಾರತವನ್ನು ವಿಶ್ವದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತವೆ. ಒಂದು ಕೋಲ್ಕತ್ತಾದಿಂದ ದಕ್ಷಿಣ ಮತ್ತು ಆಗ್ನೇಯ ಕಡೆಗೆ; ಸಮುದ್ರ ಮಾರ್ಗಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಲುಪುತ್ತವೆ. ಸ್ವಾತಂತ್ರ್ಯದ 65 ವರ್ಷಗಳ ನಂತರ ಭಾರತ ಸರ್ಕಾರವು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಭಾರತವು ಬಂಗಾಳಕೊಲ್ಲಿಯಿಂದ ಆಗ್ನೇಯ ಏಷ್ಯಾದ ದೇಶಗಳಿಗೆ ಭೂ ಮಾರ್ಗ ಮತ್ತು ಸಮುದ್ರ ಮಾರ್ಗವನ್ನು ಪ್ರಾರಂಭಿಸಿದೆ. ಭಾರತದ ಇಂಡೋ-ಪೆಸಿಫಿಕ್ ಸ್ಕೆಚ್ ಜಪಾನ್, ಕೊರಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಚಲಿಸುತ್ತದೆ. ಇನ್ನೊಂದು ಮುಂಬಯಿ ಮತ್ತು ಕರಾಚಿಯಿಂದ ಮಧ್ಯಪ್ರಾಚ್ಯಆಫ್ರಿಕಾ ಮತ್ತು ಯುರೋಪ್ಗೆ ಪಶ್ಚಿಮ ಮಾರ್ಗ. ಮೂರನೇಯದು ದೆಹಲಿಯಿಂದ ಉತ್ತರ-ಪಶ್ಚಿಮದ ಹಾದಿ. ನಮ್ಮ ರೈಲ್ವೆ ವ್ಯವಸ್ಥೆಯು ವಿಶ್ವದ ಅತ್ಯಂತ ಪ್ರಾಚೀನ ವಾಣಿಜ್ಯ ಮತ್ತು ಸಂಸ್ಕೃತಿಯ ಹೆದ್ದಾರಿಗಳಾದ ಭಾರತದಿಂದ ಯುರೋಪಿಗೆ ಭೂ ಮಾರ್ಗವನ್ನು ಕಲ್ಪಿಸಬಹುದಾಗಿದೆ.
ಮತ್ತೊಂದು ಭಾರತ ಮಾಡಿದ ಪ್ರಮಾದವೆಂದರೆ ಟಿಬೆಟ್ ಅನ್ನು ಚೀನಾದ ಕೈಗೆ ನೀಡಿದ್ದು. ಟಿಬೆಟ್, ಭೂತಾನ್ ಮತ್ತು ನೇಪಾಳವು ಭಾರತ ಮತ್ತು ಚೀನಾ ನಡುವಿನ ಬಫರ್ ಝೋನ್ಗಳಾಗಿವೆ. ಭಾರತದ ಹಿತಾಸಕ್ತಿಯ ಪ್ರದೇಶವು ಒಂದು ಕಡೆ ಗಲ್ಫ್ ನಿಂದ ಇನ್ನೊಂದೆಡೆ ಇಂಡೋ-ಚೀನಾಕ್ಕೆ ವಿಸ್ತರಿಸಿದೆ. ಹಿಂದೂ ಮಹಾಸಾಗರ ಪ್ರದೇಶ, ಅಫ್ಘಾನಿಸ್ತಾನ, ಸಿಂಕಿಯಾಂಗ್ ಮತ್ತು ಟಿಬೆಟ್ ಜೊತೆಗೆ ಹೊರಗಿನ ಉತ್ತರದ ಪ್ರದೇಶಗಳು ಭಾರತದ ನಿಜವಾದ ಭದ್ರತೆಯನ್ನು ಹೊಂದಿದೆ.
ಕಳೆದ ಐದು ವರ್ಷಗಳಿಂದ ಭಾರತವು ವಿಭಿನ್ನ ವಿದೇಶಾಂಗ ನೀತಿಯನ್ನು ಹೊಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ವಿಶ್ವ ರಾಜಕಾರಣದಲ್ಲಿ ಭಾರತದ ಕಳೆದುಹೋದ ನೆಲ ಮತ್ತು ಘನತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಪ್ರಯತ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದ್ದಾರೆ. ಭಾರತೀಯ ಉಪಖಂಡ ಮತ್ತು ವಿದೇಶಗಳಲ್ಲಿನ ಭಾರತದ ಪಾಲನ್ನು ಚೀನಾವು ಆಕ್ರಮಿಸಿಕೊಂಡಿರುವುದರಿಂದ, ಕೆಲವೇ ವರ್ಷಗಳಲ್ಲಿ ಎಲ್ಲವೂ ಬದಲಾಗಲು ಸಾಧ್ಯವಿಲ್ಲ. ಆದರೆ ಈ ನಿಟ್ಟಿನಲ್ಲಿ ಪ್ರಯಾಣ ಪ್ರಾರಂಭವಾಗಿದೆ. ಇಡೀ ಹಿಮಾಲಯನ್ ಪ್ರದೇಶಗಳಿಂದ ಹಿಡಿದು ಹಿಂದೂ ಮಹಾಸಾಗರದವರೆಗಿನ ರಾಜ್ಯಗಳು ಮಧ್ಯಪ್ರಾಚ್ಯದವರೆಗೆ ಆಫ್ರಿಕಾದವರೆಗೆ ವ್ಯಾಪಿಸಿವೆ. ಫೋರಂ ಫಾರ್ ಅವೇರ್ನೆಸ್ ಆಫ್ ನ್ಯಾಷನಲ್ ಸೆಕ್ಯೂರಿಟಿ (FANS) ಎಂಬ ಸಂಘಟನೆಯನ್ನು ಪೋಷಿಸುವ ಆರ್ಎಸ್ಎಸ್ ಚಿಂತಕ ಶ್ರೀ ಇಂದ್ರೇಶ್ ಕುಮಾರ್ ಅವರು, ಭಾರತವನ್ನು ಒಂದು ದೊಡ್ಡ ಶಕ್ತಿಯಾಗಿ ಸ್ಥಾಪಿಸುವುದು ಅವಶ್ಯಕ ಪ್ರಸ್ತಾಪ ಎಂದು ನಂಬಿದ್ದಾರೆ. ಈ ಪ್ರದೇಶಗಳು ಭಾರತದೊಂದಿಗೆ ಬಲವಾದ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ. ಭಾಷೆಗಳಿಗೂ ಹೋಲಿಕೆ ಇದೆ. ಇಲ್ಲಿನ ಮೌಲ್ಯ ವ್ಯವಸ್ಥೆಯು ಭಾರತೀಯ ಮೌಲ್ಯ ವ್ಯವಸ್ಥೆಗೆ ಹೆಚ್ಚು ಹತ್ತಿರದಲ್ಲಿದೆ. ಆದರೆ ಇದನ್ನು ಮಾಡಲು ಕೇವಲ ಬಲವಾದ ಇಚ್ಛಾಶಕ್ತಿ ಬೇಕು. ಅದೃಷ್ಟವಶಾತ್, ಭಾರತವು ಈಗ ಸ್ಪಷ್ಟ ದೃಷ್ಟಿ ಮತ್ತು ಚಿಂತನೆಯನ್ನು ಹೊಂದಿರುವ ರಾಷ್ಟ್ರೀಯವಾದಿ ಸರ್ಕಾರವನ್ನು ಹೊಂದಿದೆ. ಭಾರತದ ಪ್ರಭಾವವು ದೇಶಗಳನ್ನು ಜನಾಂಗೀಯ ಅಥವಾ ಕೋಮುವಾದದ ಮೇಲೆ ವಿಭಜನೆ ಮಾಡುವುದಿಲ್ಲ. ಅದು ಏಕೀಕರಣ ಮತ್ತು ಸಹೋದರತ್ವವನ್ನು ಅರಿತುಕೊಳ್ಳಲು ಕಾರಣವಾಗುತ್ತದೆ.
ಆದರೆ, ಕಾರ್ಯತಾಂತ್ರಿಕ ಚಿಂತನೆಗೆ ಕಳೆದುಹೋದ ನೆಲವನ್ನು ಮರಳಿ ಪಡೆಯಲು ಸಮಯ ಬೇಕಾಗುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಮೃದು ಶಕ್ತಿಗಳು ಈಗಾಗಲೇ ಜಗತ್ತನ್ನು ತನ್ನ ಪರವಾಗಿ ಆವರಿಸಿಕೊಂಡಿವೆ. ಯೋಗವು ಕೇವಲ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಶಾಂತಿಯನ್ನು ಪುನಃಸ್ಥಾಪಿಸುವುದನ್ನು ಎಂದು ಕಲಿಸುತ್ತಿಲ್ಲ, ಬದಲು ಆಧ್ಯಾತ್ಮಿಕ ಏಕೀಕರಣದ ಮೂಲಕ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಜಗತ್ತನ್ನು ಶಾಂತಿಯಿಂದ ಬದುಕಲು ಮತ್ತು ಇತರರಿಗೂ ಬದುಕಲು ಅವಕಾಶ ಮಾಡಿಕೊಡುವುದನ್ನು ಕಲಿಸುತ್ತಿದೆ. ಇದು ಭಾರತೀಯರ ವಿಶ್ವ ರಾಜಕಾರಣದ ದೃಷ್ಟಿಕೋನದ ಶ್ರೇಷ್ಠತೆ, ನಾಳೆಯೋ ಅಥವಾ ನಾಡಿದ್ದೋ ಅರ್ಥ ಆಗಿಯೇ ಆಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.