ನವದೆಹಲಿ: ಪರಿಸರ ಕಾಳಜಿಗಳನ್ನು ಪರಿಶೀಲನೆಗೊಳಪಡಿಸಲು ಹೊಸ ಸಮಿತಿಯನ್ನು ರಚನೆ ಮಾಡಬೇಕು ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶವನ್ನು ಮಾರ್ಪಡಿಸುವ ಮೂಲಕ ಸುಪ್ರೀಂಕೋರ್ಟ್, 900 ಕಿ.ಮೀ ಎಲ್ಲಾ ಹವಾಮಾನ ರಸ್ತೆಗಳ ಮೂಲಕ ಉತ್ತರಾಖಂಡದ ಬೆಟ್ಟಗಳಲ್ಲಿ ಇರುವ ನಾಲ್ಕು ಪವಿತ್ರ ಸ್ಥಳಗಳನ್ನು ಸಂಪರ್ಕಿಸುವ ಚಾರ್ಧಾಮ್ ಹೆದ್ದಾರಿ ಯೋಜನೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿದೆ.
ಆಗಸ್ಟ್ 22 ರೊಳಗೆ ಉನ್ನತ ಅಧಿಕಾರದ ಸಮಿತಿ (ಎಚ್ಪಿಸಿ) ರಚಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ 26 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಬೃಹತ್ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಂಪರ್ಕ ಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಿದ ನಂತರ ಗ್ರೀನ್ ಡೂನ್ ಎಂಬ ಎನ್ಜಿಒ ಈ ಯೋಜನೆಯು ಪ್ರಾದೇಶಿಕ ಪರಿಸರ ವಿಜ್ಞಾನಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಯೋಜನೆಯ ಮೇಲ್ವಿಚಾರಣೆಗಾಗಿ ಉತ್ತರಾಖಂಡದ ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸಮಿತಿಯನ್ನು ರಚಿಸಿತ್ತು.
ಶುಕ್ರವಾರ, ಯೋಜನೆಯ ವಿರುದ್ಧ ಎನ್ಜಿಒ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಸೆಪ್ಟೆಂಬರ್ ತಿಂಗಳಲ್ಲಿ ಹಸಿರು ನ್ಯಾಯಮಂಡಳಿ ನೀಡಿದ ಆದೇಶವನ್ನು ಹೊಸ ಉನ್ನತ ಅಧಿಕಾರ ಸಮಿತಿ (ಎಚ್ಪಿಸಿ)ಯನ್ನು ರಚಿಸುವಂತೆ ಆದೇಶಿಸುವ ಮೂಲಕ ಮಾರ್ಪಡಿಸಿದೆ.
ಇದಲ್ಲದೆ, ಸರ್ಕಾರದ ಬಾಹ್ಯಾಕಾಶ ಇಲಾಖೆ, ಡೆಹ್ರಾಡೂನ್ ಮೂಲದ ವನ್ಯಜೀವಿ ಸಂಸ್ಥೆ, MoEF (ಡೆಹ್ರಾಡೂನ್ ಪ್ರಾದೇಶಿಕ ಕಚೇರಿ) ಮತ್ತು ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯದ ಪ್ರತಿನಿಧಿಗಳನ್ನು ಉನ್ನತ ಅಧಿಕಾರ ಸಮಿತಿಯಲ್ಲಿ ಸೇರಿಸಿಕೊಳ್ಳುವಂತೆ ತಿಳಿಸಿದೆ. ಅಲ್ಲದೇ, ನಾಲ್ಕು ತಿಂಗಳುಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.