ಜಮ್ಮು: 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿದ ನಿರ್ಧಾರದ ಬಳಿಕ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಓಕೆ) ಬಗ್ಗೆ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದೆ. ಪಿಓಕೆಯನ್ನು ಸ್ವತಂತ್ರಗೊಳಿಸಿ ಭಾರತದೊಂದಿಗೆ ವಿಲೀನಗೊಳಿಸಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಸಂಸತ್ತು ಸರ್ವಾನುಮತದಿಂದ ಒಪ್ಪಿಕೊಂಡಂತೆ, ನಾವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮುಕ್ತಗೊಳಿಸಿ ಭಾರತದೊಂದಿಗೆ ವಿಲೀನಗೊಳಿಸೋಣ. ನಮ್ಮ ಜೀವಿತಾವಧಿಯಲ್ಲೇ ಈ ಬೆಳವಣಿಗೆಯನ್ನು ನೋಡಲು ನಮಗೆ ಅವಕಾಶ ಸಿಗಲಿ ಎಂದು ಸರ್ವಶಕ್ತನಲ್ಲಿ ಪ್ರಾರ್ಥಿಸೋಣ ”ಎಂದು ಜಮ್ಮುವಿನಲ್ಲಿ ಪಕ್ಷದ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಸಿಂಗ್ ಹೇಳಿದ್ದಾರೆ.
“ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ಹಿಂಪಡೆದ ಬೆಳವಣಿಗೆ ನಮ್ಮ ಜೀವಿತಾವಧಿಯಲ್ಲೇ ಆಯಿತು ಎಂಬುದು ನಮ್ಮ ಅದೃಷ್ಟ. ಮೂರು ತಲೆಮಾರಿನ ತ್ಯಾಗದ ಫಲವಾಗಿ ಇದು ಸಾಧ್ಯವಾಯಿತು” ಎಂದಿದ್ದಾರೆ.
“ಈ ಐತಿಹಾಸಿಕ ಬೆಳವಣಿಗೆಯ ನಂತರ ನಾವು ಇನ್ನೂ ಹೆಜ್ಜೆಯನ್ನು ಮುಂದಿಟ್ಟು ಪಾಕಿಸ್ಥಾನದ ಅಕ್ರಮ ನಿಯಂತ್ರಣದಲ್ಲಿರುವ ಪಿಒಕೆಯನ್ನು ಸ್ವತಂತ್ರಗೊಳಿಸಬೇಕು ಮತ್ತು ಅದನ್ನು ಭಾರತದೊಂದಿಗೆ ವಿಲೀನಗೊಳಿಸಬೇಕು. 1994ರಲ್ಲಿ ಭಾರತಸ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದಂತೆ ಪಿಓಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಬೇಕು” ಎಂದಿದ್ದಾರೆ.
“ಪಿಓಕೆ ನಮ್ಮ ದೇಶದೊಂದಿಗೆ ಏಕೀಕರಣಗೊಳ್ಳುವುದನ್ನು ನೋಡುವುದಕ್ಕಾಗಿ ಮತ್ತು ಪಿಒಕೆ ರಾಜಧಾನಿ ಮುಜಾಫರಬಾದಿಗೆ ಜನರು ಮುಕ್ತವಾಗಿ ಭೇಟಿಕೊಡುವ ಸಂದರ್ಭಕ್ಕಾಗಿ ಪ್ರಾರ್ಥನೆ ಮಾಡೋಣ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.