ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಹಸಿ ಬೇರ್ ಗ್ರಿಲ್ಸ್ ಅವರೊಂದಿಗೆ ಡಿಸ್ಕವರಿ ಚಾನೆಲಿನಲ್ಲಿ ನಡೆಸಿಕೊಟ್ಟ ಮ್ಯಾನ್ ವರ್ಸಸ್ ವೈಲ್ಡ್ ಶೋ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇದುವರೆಗೆ ಈ ಶೋ 3.6 ಬಿಲಿಯನ್ ಇಂಪ್ರೆಶನ್ಗಳನ್ನು ಪಡೆದುಕೊಂಡಿದ್ದು, ಇನ್ನೂ ಪಡೆದುಕೊಳ್ಳುತ್ತಲೇ ಸಾಗುತ್ತಿದೆ. 3.4 ಬಿಲಿಯನ್ ಇಂಪ್ರೆಶನ್ಗಳನ್ನು ಪಡೆದುಕೊಂಡಿರುವ ಸೂಪರ್ ಬೌಲ್ ಅನ್ನೂ ಮೋದಿಯವರ ಈ ಶೋ ಮೀರಿಸಿದೆ.
ಮೋದಿಯವರ ಮ್ಯಾನ್ ವರ್ಸಸ್ ವೈಲ್ಡ್ ಶೋ ಆಗಸ್ಟ್ 12 ರಂದು ಡಿಸ್ಕವರಿ ಚಾನೆಲ್ನಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು ಮತ್ತು ನಂತರ ಇದು ದೂರದರ್ಶನದಲ್ಲಿ ಪ್ರಸಾರವಾಯಿತು.
ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಪ್ರಧಾನಿ ಮೋದಿಯವರ ಜೊತೆಗೆ ಬೇರ್ ಗ್ರಿಲ್ಸ್ ಶೋ ಅನ್ನು ನಡೆಸಿಕೊಡ್ಡಿದ್ದಾರೆ. ಉತ್ತರಾಖಂಡದ ಅರಣ್ಯವೊಂದರಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
ಶೋ ಪ್ರಸಾರವಾಗುವುದಕ್ಕೂ ಮುನ್ನ ಹಲವಾರು ಜನರು #PMModiOnDiscovery ಅನ್ನು ಟ್ರೆಂಡ್ ಮಾಡಿದರು. ಜಾಗತಿಕ ಮಾಧ್ಯಮ ಗುಪ್ತಚರ ಸಂಸ್ಥೆ ಮೆಲ್ಟ್ವಾಟರ್ನ ಮಾಹಿತಿಯ ಪ್ರಕಾರ, ಈ ಹ್ಯಾಶ್ಟ್ಯಾಗ್ನ ಟ್ವೀಟ್ ಮೊದಲ ಬಾರಿಗೆ ಕಾಣಿಸಿಕೊಂಡ 12 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಹ್ಯಾಶ್ಟ್ಯಾಗ್ 204.2 ಕೆ ಗಿಂತಲೂ ಹೆಚ್ಚು ಬಾರಿ ಬಳಕೆಯಾಗಿದೆ. 728 ಮಿಲಿಯನ್ ಜನರನ್ನು ತಲುಪಿದೆ.
ನ್ಯಾಟ್ ಜಿಯೋದಲ್ಲಿನ ರನ್ನಿಂಗ್ ವೈಲ್ಡ್ ಕೋ-ಕ್ರಿಯೇಟರ್ ಡಲ್ಬರ್ಟ್ ಶೂಪ್ಮೆನ್ ಈ ಶೋ ಪಡೆದ ಜನಪ್ರಿಯತೆಯ ಬಗ್ಗೆ ಟ್ವಿಟರಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೇರ್ ಗ್ರಿಲ್ಸ್ ಅವರೂ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದು, ಈ ಸಾಧನೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
#1 in India & #1 Worldwide with 3.6 billion impressions. SO AWESOME! THANK YOU!!!!
(For reference: Super Bowl 53 had 3.4 billion social impressions for the game itself.)#PMModionDiscovery #ManVsWild #BearGrylls pic.twitter.com/MGLeI4e82X
— Delbert Shoopman (@DelbertShoopman) August 16, 2019
So proud of this – thank you team! https://t.co/Y1TUnDRPhd
— Bear Grylls (@BearGrylls) August 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.