ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಈ ಹಿಂದೆ ತನ್ನ ಆಯಿಲ್ ಟು ಕೆಮಿಕಲ್ಸ್ ವ್ಯವಹಾರದಲ್ಲಿ ಶೇ 20 ರಷ್ಟು ಪಾಲನ್ನು ಸೌದಿ ಅರೇಬಿಯಾದ ಅರಾಮ್ಕೊಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಇದು $75 ಬಿಲಿಯನ್ ವ್ಯವಹಾರವಾಗಿದೆ. ಈ ಒಪ್ಪಂದದ ಬಳಿಕ ಸೌದಿ ಅರೇಬಿಯಾವು ಭಾರತದ ಅಗ್ರ ಕಚ್ಛಾತೈಲ ಪೂರೈಕೆದಾರನ ಸ್ಥಾನವನ್ನು ಪಡೆದುಕೊಂಡಿದೆ.
ಈ ಒಪ್ಪಂದದ ಅನ್ವಯ ಸೌದಿ ಅರೇಬಿಯಾವು ದಿನಕ್ಕೆ 500,000 ಬ್ಯಾರೆಲ್ (ಬಿಪಿಡಿ) ಕಚ್ಚಾ ತೈಲವನ್ನು ವ್ಯವಹಾರಕ್ಕೆ ಸರಬರಾಜು ಮಾಡಲಿದೆ ಅಥವಾ ವರ್ಷಕ್ಕೆ 25 ಮಿಲಿಯನ್ ಟನ್ ಕಚ್ಚಾ ತೈಲವನ್ನು ಪೂರೈಸಲಿದೆ. ಇದು ಭಾರತಕ್ಕೆ ಕಚ್ಚಾ ಸರಬರಾಜುದಾರರ ಪಟ್ಟಿಯಲ್ಲಿ ಸೌದಿ ಅರೇಬಿಯಾದ ಪಾಲನ್ನು ಹೆಚ್ಚಿಸುತ್ತದೆ ಮತ್ತು ಇದು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆಯಲು ಆ ರಾಷ್ಟ್ರಕ್ಕೆ ಸಹಾಯ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಸೌದಿ ಅರೇಬಿಯಾ ಸಾಂಪ್ರದಾಯಿಕವಾಗಿ ಭಾರತಕ್ಕೆ ಸರಕು ಸರಬರಾಜುದಾರನಾಗಿದ್ದರೂ ಕಳೆದ ಎರಡು ಹಣಕಾಸು ವರ್ಷಗಳಿಂದ ಇರಾಕ್ಗೆ ತನ್ನ ಅಗ್ರ ಸ್ಥಾನವನ್ನು ಕಳೆದುಕೊಂಡಿತ್ತು. ಈ ಎರಡು ವರ್ಷ ಭಾರತಕ್ಕೆ ಸೌದಿ 40.33 ಮಿಲಿಯನ್ ಟನ್ ಕಚ್ಚಾ ತೈಲವನ್ನು ಪೂರೈಸಿದ್ದರೆ, ಇರಾಕ್ 46.61 ಮಿಲಿಯನ್ ಟನ್ಗಳನ್ನು ಪೂರೈಸಿ ಅಗ್ರಸ್ಥಾನದಲ್ಲಿದೆ.
“500,000 ಬಿಪಿಡಿಯ ಕಚ್ಚಾ ಸರಬರಾಜು ರಿಲಯನ್ಸ್ನ ಕಚ್ಚಾ ಖರೀದಿಯ ಶೇಕಡಾ 40 ರಷ್ಟನ್ನು ಪ್ರತಿನಿಧಿಸುತ್ತದೆ, ಇದು ಈಗಾಗಲೇ ತೆಗೆದುಕೊಂಡ ಪಾಲುಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ, ಆದರೂ ಸೌದಿ ಅರಾಮ್ಕೊ ಐತಿಹಾಸಿಕವಾಗಿ ರಿಲಾಯನ್ಸ್ನ 20 ಶೇಕಡಾ ಕಚ್ಚಾ ತೈಲ ಅವಶ್ಯಕತೆಗಳನ್ನು ಪೂರೈಸಿದೆ” ಎಂದು ವುಡ್ನ ಸಂಸ್ಕರಣೆ ಮತ್ತು ರಾಸಾಯನಿಕಗಳ ಉಪಾಧ್ಯಕ್ಷ ಅಲನ್ ಗೆಲ್ಡರ್ ಹೇಳಿದ್ದಾರೆ.
ಆಗಸ್ಟ್ 12 ರಂದು ಆರ್ಐಎಲ್ನ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಒಪ್ಪಂದದ ಬಗ್ಗೆ ಘೋಷಣೆ ಮಾಡಿದ ಮುಖೇಶ್ ಅಂಬಾನಿ, ಇದು ಭಾರತದ ಅತಿದೊಡ್ಡ ವಿದೇಶಿ ಹೂಡಿಕೆಗಳಲ್ಲಿ ಒಂದು ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.