ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನವ ಭಾರತದ ಸಾರವನ್ನು ಸಾರುವ ‘ವತನ್’ ಎಂಬ ಹೊಸ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆ ಮತ್ತು ವೀಡಿಯೋವನ್ನು ದೂರದರ್ಶನ ನಿರ್ಮಾಣ ಮಾಡಿದೆ.
ಈ ಹಾಡನ್ನು ಖ್ಯಾತ ಗಾಯಕ ಜಾವೇದ್ ಅಲಿ ಹಾಡಿದ್ದಾರೆ ಮತ್ತು ಸಾಹಿತ್ಯವನ್ನು ಆಲೋಕ್ ಶ್ರೀವಾಸ್ತವ್ ಬರೆದಿದ್ದಾರೆ. ದುಶ್ಯಂತ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದ್ದು, ಇದು ನಮ್ಮ ದೇಶಭಕ್ತಿಯ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.
ಗೀತೆಯು ರಾಷ್ಟ್ರಕ್ಕೆ ಗೌರವ ಸಲ್ಲಿಸುತ್ತದೆ. ವಿಶೇಷವಾಗಿ ಇದು ನವ ಭಾರತದ ಸಾರವನ್ನು ಮನಮುಟ್ಟುವಂತೆ ವಿವರಿಸಿದೆ.
‘ವತನ್ ತುಜೆ ಕೈಸೆ ಸಾಜಾಯೇಂಗೆ’ ಹಾಡು ‘ದೇಶ, ನಾವು ನಿನ್ನನ್ನು ಹೇಗೆ ಅಲಂಕರಿಸಲಿ’ ಎಂಬ ಅರ್ಥವನ್ನು ನೀಡುತ್ತದೆ.
ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಜಾವ್ಡೇಕರ್, “ಈ ಆಗಸ್ಟ್ 15 ರ ಸಲುವಾಗಿ ದೂರದರ್ಶನ ಮತ್ತು ಪ್ರಸಾರ್ ಭಾರತಿ ಈ ಅದ್ಭುತ ಹಾಡನ್ನು ಸಿದ್ಧಪಡಿಸಿದೆ. ಇದು ಜಾವೇದ್ ಅಲಿ ಅವರ ಕಂಠದಲ್ಲಿ ಮೂಡಿ ಬಂದ ಅದ್ಭುತವಾದ ಹಾಡಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನರು ಈ ಹಾಡನ್ನು ಆನಂದಿಸಲಿದ್ದಾರೆ. ಈ ಹಾಡನ್ನು ಇಂದು ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ” ಎಂದಿದ್ದಾರೆ.
ಭಾರತದ ವೈವಿಧ್ಯಮಯ ಮತ್ತು ಅದ್ಭುತ ಭೂದೃಶ್ಯವನ್ನು ಸುಂದರವಾಗಿ ಈ ಹಾಡಿನ ದೃಶ್ಯದಲ್ಲಿ ಸೆರೆ ಹಿಡಿಯಲಾಗಿದೆ, ಸುಮಾರು 4 ನಿಮಿಷಗಳ ವೀಡಿಯೊ ಪ್ರೇಕ್ಷಕರಿಗೆ ಈಶಾನ್ಯದ ಚಹಾ ತೋಟಗಳು, ದಕ್ಷಿಣದ ಪ್ರಶಾಂತ ಕಡಲತೀರಗಳು, ಉತ್ತರ ಭಾರತದ ಗಂಗಾ ಘಟ್ಟಗಳು, ಹಿಮಾಲಯ, ಪರ್ವತ ಶ್ರೇಣಿ ಸೇರಿದಂತೆ ದೇಶದ ವಿವಿಧ ಪ್ರದೇಶಗಳ ದೃಶ್ಯ ವೈವಿಧ್ಯದ ಅದ್ಭುತ ನೋಟವನ್ನು ತೋರಿಸುತ್ತದೆ.
Ahead of #IndependenceDay , launched in New Delhi today, #Watan, a song that celebrates #NewIndia, produced by #Doordarshan .@narendramodi @PMOIndia @javedali4u @DDNational @PIB_India @MIB_India @PIBMumbai @airnewsalerts @DDNewsHindi @bjp4india @bjp4maharashtra @BJP4Delhi pic.twitter.com/TbYE1QKFJs
— Prakash Javadekar (@PrakashJavdekar) August 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.