ನವದೆಹಲಿ: ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಜನಪ್ರಿಯ ಸಾಹಸಮಯ ಟಿವಿ ಶೋ “ಮ್ಯಾನ್ ವರ್ಸಸ್ ವೈಲ್ಡ್” ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಟಿವಿ ಶೋನಲ್ಲಿ ಭಾಗಿಯಾಗಿ ಉತ್ತಮ ಸಂದೇಶವನ್ನು ರವಾನಿಸಿದ ಮೋದಿಯವರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವಿಟರ್ನಲ್ಲಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
“ಇಂದು ManVsWild ನಲ್ಲಿ ಭಾರತದ ಸಂಪೂರ್ಣ ಅನ್ವೇಷಿಸದ ಆಯಾಮವನ್ನು ಬೇರ್ ಗ್ರಿಲ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಗತ್ತು ನೋಡಿತು. ಪರಿಸರ ಸಂರಕ್ಷಣೆ, ಸಹಬಾಳ್ವೆ ಮತ್ತು ನಮ್ಮ ಶ್ರೀಮಂತ ವನ್ಯಜೀವಿಗಳನ್ನು ರಕ್ಷಿಸುವ ಬಗ್ಗೆ ನಮ್ಮ ನಾಗರಿಕ ಮೌಲ್ಯಗಳನ್ನು ಪ್ರಧಾನಿ ಮೋದಿ ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿರುವುದು ಒಂದು ಹೆಮ್ಮೆಯ ಕ್ಷಣವಾಗಿದೆ” ಎಂದು ಶಾ ಅವರು ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಸ್ಸಾಂ ಸಿಎಂ ಸೊರ್ಬಾನಂದ್ ಸೋನಾವಾಲ್ ಮುಂತಾದವರು ಮೋದಿಯ ಕಾರ್ಯಕ್ಕೆ ಶ್ಲಾಘನೆಗಳನ್ನು ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ನಿರೂಪಕ ಬೇರ್ ಗ್ರಿಲ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಈ ಶೋ ಅನ್ನು ನಡೆಸಿಕೊಟ್ಟಿದ್ದು, ನಿನ್ನೆ ರಾತ್ರಿ 9 ಗಂಟೆಗೆ ಭಾರತದ ಡಿಸ್ಕವರಿ ಚಾನೆಲ್ನಲ್ಲಿ ಇದು ಪ್ರಸಾರವಾಯಿತು.
ಈ ವಿಶೇಷ ಎಪಿಸೋಡ್ ಅನ್ನು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇದು ವನ್ಯಜೀವಿ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲುವ “ಫ್ರಾಂಕ್ ಆ್ಯಂಡ್ ಫ್ರೀವೀಲಿಂಗ್ ಜರ್ನಿ”ಯಾಗಿದೆ ಎಂದು ಡಿಸ್ಕವರಿ ಚಾನೆಲ್ ಹೇಳಿದೆ. ಈ ಹಿಂದೆ ಅಲಾಸ್ಕಾದ ಅರಣ್ಯದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೂ ಗ್ರಿಲ್ಸ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.
ಪರಿಸರ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಣ್ಯರು, ಚಿತ್ರರಂಗದ ದಿಗ್ಗಜರು ಸೇರಿದಂತೆ ಟ್ವಿಟ್ಟಿಗರು ಪ್ರಧಾನಿ ಮೋದಿಯ ಕಾರ್ಯಕ್ರಮಕ್ಕೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
Today on #ManVsWild with @BearGrylls and PM @narendramodi, the world got to see a completely unexplored aspect of India.
It was a proud moment to see PM Modi share our civilisational values on environment conservation, coexistence & protecting our rich wild life with the world.
— Amit Shah (@AmitShah) August 12, 2019
Be it renewable energy or climate change, PM Shri @narendramodi ji has addressed several causes for #PlanetEarth over the years.
Today’s episode of #ManVsWild enlightened us on environmental conservation and created awareness on protecting our planet. #PMModiOnDiscovery pic.twitter.com/7gyBPMB15c
— Sarbananda Sonowal (@sarbanandsonwal) August 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.