ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತೈಲದಲ್ಲಿ ಶೇ. 20 ರಷ್ಟು ಷೇರನ್ನು ರಾಸಾಯನಿಕ ವ್ಯವಹಾರಕ್ಕಾಗಿ ಸೌದಿ ಅರಾಮ್ಕೊಗೆ ನೀಡಲಿದೆ. ಇದು ನಮ್ಮ ಸಂಸ್ಥೆಯ ಮತ್ತು ಭಾರತದ ಅತಿದೊಡ್ಡ ವಿದೇಶಿ ಹೂಡಿಕೆಯಾಗಿದೆ ಎಂದು ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ.
“ಇದು ರಿಲಾಯನ್ಸ್ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ಹೂಡಿಕೆ” ಎಂದು ಮುಂಬಯಿನಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ.
“ಇದು ಭಾರತದ ಇದುವರೆಗಿನ ಅತಿದೊಡ್ಡ ವಿದೇಶಿ ಹೂಡಿಕೆಗಳಲ್ಲಿ ಒಂದಾಗಿದೆ” ಎಂದಿದ್ದಾರೆ.
ವ್ಯವಹಾರವನ್ನು ಒಳಗೊಂಡಂತೆ 75 ಬಿಲಿಯನ್ ಮೌಲ್ಯವನ್ನು ಈ ಒಪ್ಪಂದವು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ಸೌದಿ ಅರಾಮ್ಕೊ ತನ್ನ ಕಚ್ಚಾ ಬೆಲೆಗೆ ಹೊಸ ಮಾರುಕಟ್ಟೆಗಳನ್ನು ಭದ್ರಪಡಿಸಿಕೊಳ್ಳಲು ಯೋಜಿಸುತ್ತಿರುವುದರಿಂದ ರಿಲಾಯನ್ಸ್ ಜೊತೆ ಪಾಲು ಮಾರಾಟದ ಕುರಿತು ಮಾತುಕತೆ ನಡೆಸಿತ್ತು.
ರಿಲಾಯನ್ಸ್ ಜಮಾನಗರ್ ಸಂಸ್ಕರಣಾಗಾರಕ್ಕೆ ಸೌದಿ ಅರಾಮ್ಕೊ ದಿನಕ್ಕೆ 500,000 ಬ್ಯಾರೆಲ್ ಕಚ್ಚಾ ತೈಲವನ್ನು ದೀರ್ಘಾವಧಿಯಲ್ಲಿ ಪೂರೈಸಲಿದೆ ಎಂದು ಅಂಬಾನಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2022ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದರೆ, ನಾನು ಭಾರತ 2030ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಬೇಕು ಎಂಬುದನ್ನು ನಿರೀಕ್ಷಿಸುತ್ತೇನೆ ಎಂದರು.
“ಈ ಒಪ್ಪಂದವು ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ಮತ್ತು ವಿಶ್ವದ ಅತಿದೊಡ್ಡ ಇಂಟಿಗ್ರೇಟೆಡ್ ರಿಫೈನರಿ & ಪೆಟ್ರೋಕೆಮಿಕಲ್ಸ್ ನಡುವಣ ಸಮರ್ಥ ಸಮನ್ವಯವಾಗಿದೆ” ಎಂದಿದ್ದಾರೆ.
ಈ ಸಹಭಾಗಿತ್ವವು ರಿಲಾಯನ್ಸ್ನ ಎಲ್ಲಾ ರಿಫೈನರಿ & ಪೆಟ್ರೋಕೆಮಿಕಲ್ ಸ್ವತ್ತುಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಪೆಟ್ರೋಲಿಯಂ ರಿಟೇಲ್ ಜಾಯಿಂಟ್ ವೆಂಚರ್ ಶೇ. 51 ರಷ್ಟು ಪಾಲನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಹೊಸ ಮೊಬೈಲ್ ಜಿಯೋ ಪೋನ್-3 ಲೋಕಾರ್ಪಣೆ, ಜಿಯೋ ಬ್ರಾಡ್ಬ್ಯಾಂಡ್ ಸೇವೆಯ ಗಿಗಾ ಫೈಬರ್ನ ಬೆಲೆ ಮತ್ತು ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್ ಹಾಗೂ ಟೆಲಿವಿಷನ್ ಸೇವೆಗಳನ್ನು ಒಟ್ಟುಗೂಡಿಸುವ ಮೂರು ಪ್ಲೇ ಪ್ಲಾನ್ ಕುರಿತು ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.