ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಸಾಕಷ್ಟು ಪರಿಗಣಿಸಿ ನಂತರ ತೆಗೆದುಕೊಳ್ಳಲಾಗಿದೆ ಮತ್ತು ಈ ನಿರ್ಧಾರದಿಂದ ಖಂಡಿತವಾಗಿಯೂ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಕನಾಮಿಕ್ ಟೈಮ್ಸ್ಗೆ ಸಂದರ್ಶನವನ್ನು ನೀಡಿರುವ ಅವರು, 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವು “ಸಂಪೂರ್ಣವಾಗಿ ದೇಶೀಯವಾದದ್ದು” ಎಂದು ಹೇಳಿದರು.
“ಹೆಚ್ಚಿನ ಚಿಂತನೆಯ ನಂತರವೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಮತ್ತು ಅದರ ಬಗ್ಗೆ ನನಗೆ ಸಾಕಷ್ಟು ಖಚಿತತೆ ಇದೆ ಮತ್ತು ಜನರ ಅನುಕೂಲಕ್ಕಾಗಿ ಈ ನಿರ್ಧಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ” ಎಂದು ಮೋದಿ ಹೇಳಿದ್ದಾರೆ.
ಆಗಸ್ಟ್ 8 ರಂದು ಭಾಷಣದ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭರವಸೆಯನ್ನು ನೀಡಿದ್ದ ಮೋದಿ, ಆಗಸ್ಟ್ 12 ರಂದು ಈದ್ ಆಚರಿಸುವಲ್ಲಿ ಯಾವುದೇ ತೊಂದರೆಗಳನ್ನು ನೀವು ಎದುರಿಸುವುದಿಲ್ಲ ಮತ್ತು ಕಣಿವೆಯ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳಲಿದೆ ಎಂದಿದ್ದರು.
ನಮ್ಮ ಸರ್ಕಾರವು “ನವ ಜಮ್ಮು ಕಾಶ್ಮೀರ ಮತ್ತು ನವ ಲಡಾಖ್” ಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದರು.
ಇಂದು ಪ್ರಧಾನಿ ಮೋದಿ ಅವರು ‘ನವ ಕಾಶ್ಮೀರ’ ನಿರ್ಮಿಸುವ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ.
“ನವ ಕಾಶ್ಮೀರ ಉಗಮವಾಗುತ್ತದೆ ಎಂಬ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ವಾಸ್ತವವಾಗಿ, ಪ್ರಮುಖ ಉದ್ಯಮಿಗಳು ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇಂದಿನ ಜಗತ್ತಿನಲ್ಲಿ, ಆರ್ಥಿಕ ಬೆಳವಣಿಗೆಯು ಮುಚ್ಚಿದ ವಾತಾವರಣದಲ್ಲಿ ಆಗಲು ಸಾಧ್ಯವಿಲ್ಲ. ಮುಕ್ತ ಮನಸ್ಸುಗಳು ಮತ್ತು ಮುಕ್ತ ಮಾರುಕಟ್ಟೆಗಳು ಯುವಕರನ್ನು ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. ಏಕೀಕರಣವು ಹೂಡಿಕೆ, ನಾವೀನ್ಯತೆ ಮತ್ತು ಆದಾಯಗಳಿಗೆ ಉತ್ತೇಜನ ನೀಡುತ್ತದೆ” ಎಂದು ಹೇಳಿದ್ದಾರೆ.
ಕಲಂ 370ರ ಬಗೆಗಿನ ಇತ್ತೀಚಿನ ನಿರ್ಧಾರವು ರಾಜ್ಯದಲ್ಲಿ ಸ್ಥಿರತೆ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆಗೆ ಅಗತ್ಯವಾದ ವಾತಾವರಣಗಳನ್ನು ಖಾತರಿಪಡಿಸಿದೆ ಎಂದು ಮೋದಿ ಹೇಳಿದ್ದಾರೆ.
“ಜಮ್ಮು ಕಾಶ್ಮೀರಕ್ಕೆ ಹೂಡಿಕೆ ಖಂಡಿತವಾಗಿಯೂ ಹರಿಯುತ್ತದೆ, ಅದರಲ್ಲೂ ವಿಶೇಷವಾಗಿ ಈ ಪ್ರದೇಶವು ಪ್ರವಾಸೋದ್ಯಮ, ಕೃಷಿ, ಐಟಿ, ಆರೋಗ್ಯ ರಕ್ಷಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳನ್ನು ಹೊಂದಿದೆ. ಇದು ಅಲ್ಲಿನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಇದು ಈ ಪ್ರದೇಶದ ಜನರ ಕೌಶಲ್ಯ, ಕಠಿಣ ಪರಿಶ್ರಮ ಮತ್ತು ಉತ್ಪನ್ನಗಳಿಗೆ ಉತ್ತಮ ಪ್ರತಿಫಲವನ್ನು ನೀಡುತ್ತದೆ”ಎಂದು ಅವರು ಹೇಳಿದ್ದಾರೆ.
ಐಐಟಿ, ಐಐಎಂ, ಏಮ್ಸ್ ನಂತಹ ಶಿಕ್ಷಣದ ಉತ್ತಮ ಮಾರ್ಗಗಳು ಯುವಕರಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ನೀಡುವುದಲ್ಲದೆ, ಈ ಪ್ರದೇಶಕ್ಕೆ ಉತ್ತಮ ಉದ್ಯೋಗಿಗಳನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ರಸ್ತೆಗಳು ಅಥವಾ ಹೊಸ ರೈಲು ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳ ಆಧುನೀಕರಣದಂತಹ ರಾಜ್ಯದ ಸಂಪರ್ಕ ಸಂಬಂಧಿತ ಯೋಜನೆಗಳ ವೇಗವರ್ಧನೆಗೆ ಪ್ರಧಾನಿ ಒತ್ತು ನೀಡಿದ್ದಾರೆ “ಉತ್ತಮ ಸಂಪರ್ಕ, ಉತ್ತಮ ಸಂಪರ್ಕಗಳು ಮತ್ತು ಉತ್ತಮ ಹೂಡಿಕೆ ಈ ಪ್ರದೇಶದ ಉತ್ಪನ್ನಗಳು ದೇಶ ಮತ್ತು ಪ್ರಪಂಚದಾದ್ಯಂತ ತಲುಪಲು ಸಹಾಯ ಮಾಡುತ್ತದೆ, ಇದು ಸಾಮಾನ್ಯ ಜನರ ಬೆಳವಣಿಗೆ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ” ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.