ಪಾಟ್ನಾ: ನಕಲಿ ಸರ್ಟಿಫಿಕೇಟ್ಗಳ ಮೂಲಕ ಉದ್ಯೋಗ ಗಿಟ್ಟಿಸಿಕೊಂಡವರ ಎದೆಯಲ್ಲಿ ಈಗ ನಡುಕ ಹುಟ್ಟಿದೆ. ಇದೇ ಕಾರಣಕ್ಕೆ ಬಿಹಾರದಲ್ಲಿ ಒಟ್ಟು 1,400 ಶಿಕ್ಷಕರು ಸ್ವಪ್ರೇರಣೆಯಿಂದ ರಾಜೀನಾಮೆಯನ್ನು ನೀಡಿದ್ದಾರೆ. ಇವರೆಲ್ಲ ನಕಲಿ ಸರ್ಟಿಫಿಕೇಟ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದರು.
ಇವರ ಭಯಕ್ಕೆ ಬಿಹಾರ ಹೈಕೋರ್ಟ್ ತೀರ್ಪು ಕಾರಣವಾಗಿದೆ. ನಕಲಿ ಸರ್ಟಿಫಿಕೇಟ್ ಹೊಂದಿರುವವರು ತಮ್ಮ ಉದ್ಯೋಗವನ್ನು ಬಿಡಬೇಕು, ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕು ಎಂದು ಇತ್ತೀಚಿಗೆ ಹೈಕೋರ್ಟ್ ಸೂಚನೆ ನೀಡಿತ್ತು.
ಈ ಸೂಚನೆಯಂತೆ ಬಿಹಾರದ ಶಿಕ್ಷಣ ಇಲಾಖೆ ನಕಲಿ ಶಿಕ್ಷಕರಿಗೆ ಜುಲೈ 18ರವರೆಗೆ ಡೆಡ್ಲೈನನ್ನೂ ನೀಡಿದೆ. ಅಲ್ಲದೇ ಇದರೊಳಗೆ ಕೆಲಸ ಬಿಡದವರ ವಿರುದ್ಧ ಎಫ್ಐಆರ್ ಹಾಕುವ ಎಚ್ಚರಿಕೆ ಬೀಡಿದೆ. ಹೀಗಾಗಿ ತಾವು ಜೈಲು ಪಾಲಾಗಬಹುದು ಎಂಬ ಉದ್ದೇಶದಿಂದ 1,400 ನಕಲಿ ಶಿಕ್ಷಕರು ರಾಜೀನಾಮೆಯನ್ನು ನೀಡಿದ್ದಾರೆ. ಇನ್ನಷ್ಟು ಮಂದಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಹಾರದಲ್ಲಿ ಒಟ್ಟು 3.5 ಲಕ್ಷ ಶಿಕ್ಷಕರಿದ್ದಾರೆ, ಇವರಲ್ಲಿ ನಕಲಿ ಸರ್ಟಿಫಿಕೇಟ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡವರು ಅಪಾರ ಪ್ರಮಾಣದಲ್ಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ನ್ಯಾಯಾಲಯದ ಸೂಚನೆ ಇವರಲ್ಲಿ ಭಯ ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.