ನವದೆಹಲಿ: ಥಾಯ್ಲೆಂಡಿನ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ 9ನೇ ಈಸ್ಟ್ ಏಷ್ಯಾ ಸಮಿತ್ ಫಾರಿನ್ ಮಿನಿಸ್ಟರ್ಸ್ ಮೀಟ್ನ ಎರಡನೇ ದಿನವಾದ ಇಂದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕಾದ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರನ್ನು ಭೇಟಿಯಾಗಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಬಯಸುತ್ತೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆಯ ಬಳಿಕ ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ಸಭೆ ಇದಾಗಿದೆ.
ಪಾಂಪಿಯೋ ಮತ್ತು ಎಸ್. ಜೈಶಂಕರ್ ನಡುವಣ ಭೇಟಿಯನ್ನು ಅಮೆರಿಕಾ ದೃಢಪಡಿಸಿ, “ಕಾರ್ಯದರ್ಶಿ ಪೊಂಪಿಯೊ ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರನ್ನು ಥಾಯ್ಲೆಂಡಿನ ಬ್ಯಾಂಕಾಕ್ನಲ್ಲಿ ಶುಕ್ರವಾರ ಭೇಟಿಯಾಗಲಿದ್ದಾರೆ” ಎಂದಿತ್ತು. ಅದರಂತೆ ಇಂದು ಇಬ್ಬರು ನಾಯಕರ ಭೇಟಿಯಾಗಿದೆ.
ಭೇಟಿಯ ಬಳಿಕ ಟ್ವೀಟ್ ಮಾಡಿರುವ ಜೈಶಂಕರ್ ಅವರು, “ಕಾಶ್ಮೀರದ ಬಗ್ಗೆ ಯಾವುದೇ ಚರ್ಚೆಯನ್ನು ಪಾಕಿಸ್ಥಾನದೊಂದಿಗೆ ದ್ವಿಪಕ್ಷೀಯವಾಗಿ ಮಾತ್ರ ಮಾಡುತ್ತೇವೆ ಎಂದು ಅಮೆರಿಕದ ಪ್ರತಿನಿಧಿಯಾದ ಪೊಂಪಿಯೊಗೆ ಸ್ಪಷ್ಟವಾಗಿ ತಿಳಿಸಿದ್ದೇನ್” ಎಂದಿದ್ದಾರೆ.
ಜೈಶಂಕರ್ ಅವರು ಆಗಸ್ಟ್ 1-2ರಂದು ASEAN plus ನಲ್ಲಿ ಭಾಗವಹಿಸುವ ಸಲುವಾಗಿ ಬ್ಯಾಂಕಾಕ್ನಲ್ಲಿ ಇರಲಿದ್ದಾರೆ. ಅವರು ಗುರುವಾರ ಈಸ್ಟ್ ಏಷ್ಯಾ ಸಮಿತ್ ಫಾರಿನ್ ಮಿನಿಸ್ಟರ್ಸ್ ಮೀಟ್ನಲ್ಲಿ ಭಾಗವಹಿಸಿದ್ದು, ಶುಕ್ರವಾರ ಅಸಿಯಾನ್ ರಿಜಿನಲ್ ಫೋರಂನಲ್ಲಿ ಭಾಗವಹಿಸುತ್ತಿದ್ದಾರೆ.
ಇನ್ನೊಂದೆಡೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದ ವಿಷಯದಲ್ಲಿ ಮಧ್ಯಪ್ರವೇಶಿಸಲು ಇಚ್ಛಿಸುತ್ತಿರುವುದಾಗಿ ಪುನರುಚ್ಛರಿಸಿದ್ದಾರೆ. “ಒಂದು ವೇಳೆ ಭಾರತ ಬಯಸಿದರೆ ಖಂಡಿತವಾಗಿಯೂ ಮಧ್ಯಪ್ರವೇಶ ಮಾಡುತ್ತೇನೆ” ಎಂದಿದ್ದಾರೆ. ಇತ್ತೀಚಿಗಷ್ಟೇ ಮೋದಿ ನನಗೆ ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಹೇಳಿದ್ದರು ಎನ್ನುವ ಮೂಲಕ ಅವರು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು.
ಭಾರತ ಮಾತ್ರ, ಕಾಶ್ಮೀರದ ವಿಷಯದಲ್ಲಿ ಯಾರ ಮಧ್ಯಪ್ರವೇಶವನ್ನೂ ನಾವು ಬಯಸುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.