ನವದೆಹಲಿ: ಲೋಕಸಭಾದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಮೊದಲ ಸಾಲಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರು ಮೊದಲ ಸಾಲಲ್ಲಿ ಸೇರಿಕೊಳ್ಳಲಿದ್ದಾರೆ. 16ನೇ ಲೋಕಸಭಾದಲ್ಲಿ ಇದ್ದ ಸೀಟನ್ನೇ ಈ ಬಾರಿಯೂ ರಾಜನಾಥ್ ಸಿಂಗ್ ಪಡೆದುಕೊಂಡಿದ್ದಾರೆ. ಲೋಕಸಭಾ ಕಾರ್ಯದರ್ಶಿಗಳು ಸಂಸದರಿಗೆ ಸೀಟುಗಳನ್ನು ಹಂಚಿಕೆ ಮಾಡುತ್ತಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೂಡ ಮೊದಲ ಸಾಲಲ್ಲೇ ಇರಲಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಇವರಿಬ್ಬರೂ ರಾಜ್ಯಸಭಾ ಸದಸ್ಯರಾಗಿದ್ದರು. ಈ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮೊದಲ ಸಾಲಲ್ಲಿ ಇರುವ ಇತರ ನಾಯಕರೆಂದರೆ ಡಿವಿ ಸದಾನಂದ ಗೌಡ, ಅರ್ಜುನ್ ಮುಂಡಾ, ನರೇಂದ್ರ ಸಿಂಗ್ ತೋಮರ್, ರಮೇಶ್ ಪೋಕ್ರಿಯಾಲ್ ನಿಶಾಂಕ್.
ಬಿಜೆಪಿ ಮೈತ್ರಿಗಳಾದ ಶಿವಸೇನೆಯ ಅರವಿಂದ ಸಾವಂತ್ ಮತ್ತು ಜೆಡಿಯು ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಕೂಡ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ.
ಪ್ರತಿಪಕ್ಷಗಳ ಬದಿಯಲ್ಲಿನ ಮೊದಲ ಸಾಲಿನ ಮೊದಲ ಸಿಟನ್ನು ಡೆಪ್ಯೂಟಿ ಸ್ಪೀಕರ್ ನೇಮಕವಾಗದ ಹಿನ್ನಲೆಯಲ್ಲಿ ಖಾಲಿ ಬಿಡಲಾಗಿದೆ. ನಂತರ ಕಾಂಗ್ರೆಸ್ ನಾಯಕ ಅಧೀರ್ ಚೌಧುರಿ, ಸೋನಿಯಾ ಗಾಂಧಿ, ಡಿಎಂಕೆ ನಾಯಕ ಟಿಆರ್ ಬಾಲು, ಮುಲಾಯಂ ಸಿಂಗ್ ಯಾದವ್ ಇರಲಿದ್ದಾರೆ. ವಯನಾಡಿನ ಕಾಂಗ್ರೆಸ್ ಸಂಸದರಾಗಿರುವ ರಾಹುಲ್ ಗಾಂಧಿ ಅವರಿಗೆ ಎರಡನೇ ಸಾಲಲ್ಲಿ ಸೀಟನ್ನು ಒದಗಿಸಲಾಗಿದೆ.
ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಪಕ್ಕದಲ್ಲೇ ಇರಲಿದ್ದಾರೆ. ಅದೇ ಸಾಲಲ್ಲಿ ಎನ್ ಸಿ ಸಂಸದ ಫಾರೂಖ್ ಅಬ್ದುಲ್ಲಾ, ಎನ್ ಸಿಪಿಯ ಸುಪ್ರಿಯಾ ಸುಲೆ ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.