ನವದೆಹಲಿ: ಭಾರತೀಯ ನೌಕಾಪಡೆಯು ಜುಲೈ 29ರಂದು ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (LCU) MK IV ಕ್ಲಾಸ್ IN LCU L56ನ ಐದನೇ ನೌಕೆಯನ್ನು ಜುಲೈ 29ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ವಿಶಾಖಪಟ್ಟಣಂನ ನಾವಲ್ ಡಾಕ್ಯಾರ್ಡ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕೆಯನ್ನು ಸೇರ್ಪಡೆಗೊಳಿಸಲಾಗಿದೆ.
ಎರಡು MTU ಡೀಸೆಲ್ ಎಂಜಿನ್ಗಳನ್ನು ಹೊಂದಿರುವ ಈ ನೌಕೆ 15 ನಾಟ್ ನಿರಂತರ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 62 ಮೀಟರ್ ಉದ್ದವಿದ್ದು ಮತ್ತು 900 ಡಿಸ್ಪ್ಲೇಸ್ಮೆಂಟ್ ಹೊಂದಿದೆ. ಇದು ಎರಡು 30 mm CRN-91 -91 ಬಂದೂಕುಗಳನ್ನು ಹೊಂದಿದ್ದು, 150 ಸೈನಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಎಂಜಿನಿಯರ್ಸ್ (ಜಿಆರ್ಎಸ್ಇ) ನಿರ್ಮಿಸಿದ 100 ನೇ ಯುದ್ಧನೌಕೆಯಾಗಿದ್ದು, ಭೂಮಿ ಮತ್ತು ನೀರು ಎರಡಲ್ಲೂ ಕಾರ್ಯಾಚರಿಸಲಿದೆ. ಇಂತಹ ಹಡಗನ್ನು ನಿರ್ಮಿಸಿದ ಮೈಲಿಗಲ್ಲು ಸಾಧಿಸಿದ ದೇಶದ ಮೊದಲ ಶಿಪ್ಯಾರ್ಡ್ ಎಂಬ ಹೆಗ್ಗಳಿಕೆಗೆ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಎಂಜಿನಿಯರ್ಸ್ ಪಾತ್ರವಾಗಿದೆ.
ಭಾರತೀಯ ನೌಕಾಪಡೆಯಲ್ಲಿ L56 ಹಡಗಿನ ಮುಖ್ಯ ಕಾರ್ಯವೆಂದರೆ, ಬ್ಯಾಟಲ್ ಟ್ಯಾಂಕ್ಗಳನ್ನು, ಶಸ್ತ್ರಸಜ್ಜಿತ ವಾಹನಗಳನ್ನು, ಸೈನಿಕರನ್ನು ಮತ್ತು ಸಲಕರಣೆಗಳನ್ನು ಸಾಗಿಸುವುದಾಗಿದೆ. ಬೀಚಿಂಗ್ ಆಪರೇಶನ್, ಶೋಧಕಾರ್ಯ ಮತ್ತು ಸಮುದ್ರ ತೀರಗಳಿಗೆ ಸಲಕರಣೆ ಸಾಗಾಣೆ, ವಿಪತ್ತು ಪರಿಹಾರ ಕಾರ್ಯಾಚರಣೆಗಳು, ಕರಾವಳಿ ಗಸ್ತು ಮತ್ತು ಕಣ್ಗಾವಲು ಕಾರ್ಯಾಚರಣೆಗಳಂತಹ ಬಹು-ಪಾತ್ರ ಚಟುವಟಿಕೆಗಳಿಗೆ ಈ ಹಡಗನ್ನು ಬಳಸಬಹುದಾಗಿದೆ.
@makeinindia VAdm AK Jain FOCinC(E) to commission 6th Landing Craft Utility IN LCU L-56. The ship is sixth in series of eight being built by M/s Garden Reach Shipbuilders &Engineers Ltd. Kolkata & 100th warship fm M/s.GRSE @CMDGRSE @drajaykumar_ias @rajnathsingh @SpokespersonMoD pic.twitter.com/NYaSCOWgYo
— SpokespersonNavy (@indiannavy) July 29, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.