ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‘ಡಿಸ್ಕವರಿ” ಚಾನೆಲ್ನ ಪ್ರಸಿದ್ಧ ‘ಮ್ಯಾನ್ ವರ್ಸಸ್ ವೈಲ್ಡ್’ ಶೋದಲ್ಲಿ ಭಾಗಿಯಾಗಿದ್ದು, ಈ ಸಂಚಿಕೆ ಆಗಸ್ಟ್ 12 ರಂದು ಪ್ರಸಾರವಾಗಲಿದೆ.
ಹಿಂದೆಂದೂ ಕಾಣದ ಅವತಾರದಲ್ಲಿ ಪ್ರಧಾನಿಯನ್ನು ನಾವಿಲ್ಲಿ ಕಾಣಬಹುದಾಗಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಶೋ ನಿರೂಪಕ ಬೇರ್ ಗ್ರಿಲ್ಸ್ ಅವರೊಂದಿಗೆ ಮೋದಿ ಉತ್ತರಾಖಂಡದ ಅರಣ್ಯದಲ್ಲಿ ಸಾಹಸ ಪ್ರಯಾಣ ಮಾಡುವುದನ್ನು ನಾವು ಈ ಶೋದಲ್ಲಿ ನೋಡಬಹುದಾಗಿದೆ.
ಗ್ರಿಲ್ಸ್ ಟ್ವಿಟರ್ ಮೂಲಕ ಈ ಘೋಷಣೆಯನ್ನು ಮಾಡಿದ್ದು, ಪ್ರಧಾನಿ ಮೋದಿಯವರು ನದಿಯಲ್ಲಿ ಸವಾರಿ ಮಾಡುವ ದೃಶ್ಯವನ್ನು ಅವರು ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ ಗ್ರಿಲ್ ಅವರು ಮೋದಿಗೆ, “ನೀವು ಭಾರತದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ, ನಿಮ್ಮನ್ನು ಜೀವಂತವಾಗಿಡುವುದು ನನ್ನ ಜವಾಬ್ದಾರಿ’ ಎಂದು ಹೇಳುವ ಸನ್ನಿವೇಶವಿದೆ.
“ಪ್ರಾಣಿಗಳ ಸಂರಕ್ಷಣೆ ಮತ್ತು ಪರಿಸರ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ಅರಣ್ಯಕ್ಕೆ ಕಾಲಿಡುವುದನ್ನು ವಿಶ್ವದ 180 ದೇಶಗಳ ಜನರು ನೋಡಲಿದ್ದಾರೆ ಮತ್ತು ಈ ವೇಳೆ ಮೋದಿಯವರ ಮತ್ತೊಂದು ಅಪರಿಚಿತ ಸ್ವರೂಪ ಅನಾವರಣಗೊಳ್ಳಲಿದೆ. ಮೋದಿಯನ್ನು ಹೊಂದಿರುವ ‘ಮ್ಯಾನ್ ವರ್ಸಸ್ ವೈಲ್ಡ್’ ಶೋ ತಪ್ಪದೇ ನೋಡಿ” ಎಂದು ಟ್ವಿಟರಿನಲ್ಲಿ ಅವರು ಹೇಳಿಕೊಂಡಿದ್ದಾರೆ.
ಡಿಸ್ಕವರಿ ಚಾನೆಲಿನಲ್ಲಿ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ. ಪ್ರಾಣಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ಸಲುವಾಗಿ ಮೋದಿ ಈ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಶೋ ಮೂಲಕ ಮೋದಿ ತಮ್ಮ ಸಾಹಸಿ ಪ್ರವೃತ್ತಿಯನ್ನು ಜಗತ್ತಿನ ಮುಂದೆ ತೋರ್ಪಡಿಸಿದ್ದಾರೆ.
People across 180 countries will get to see the unknown side of PM @narendramodi as he ventures into Indian wilderness to create awareness about animal conservation & environmental change. Catch Man Vs Wild with PM Modi @DiscoveryIN on August 12 @ 9 pm. #PMModionDiscovery pic.twitter.com/MW2E6aMleE
— Bear Grylls (@BearGrylls) July 29, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.