ನವದೆಹಲಿ: ತನ್ನ ಸಚಿವರುಗಳಿಗೆ ಮತ್ತು ಸಂಸತ್ತಿನ ಸಂಸದರುಗಳಿಗೆ ಎರಡು ದಿನಗಳ ತರಬೇತಿಯನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಮೂಲಗಳ ಪ್ರಕಾರ, ಮುಂದಿನ ವಾರಾಂತ್ಯದಲ್ಲಿ ಈ ತರಬೇತಿ ಕಾರ್ಯಕ್ರಮ ಜರಗುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಈ ತರಬೇತಿಯನ್ನು ಆಗಸ್ಟ್ 3 ಮತ್ತು 4 ರಂದು ನಡೆಸಲಾಗುತ್ತಿದೆ ಎನ್ನಲಾಗಿದೆ. ಪರಿಣಾಮಕಾರಿ ಚುನಾಯಿತ ಪ್ರತಿನಿಧಿಗಳಾಗುವುದು ಹೇಗೆ ಎಂಬುದರ ಕುರಿತು ಸಂಸದರಿಗೆ ತರಬೇತಿ ನೀಡುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
303 ಬಿಜೆಪಿ ಸಂಸದರಲ್ಲಿ 133 ಮಂದಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
“ಸಂಸದರು ಲೋಕಸಭೆಯ ಸದಸ್ಯರಾಗಿ ಹಲವಾರು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಹಲವು ವಿಷಯಗಳಿವೆ. ಮೊದಲ ಬಾರಿಗೆ ಸಂಸದರಾದವರಿಗೆ ಈ ಎಲ್ಲ ವಿಷಯಗಳ ಬಗ್ಗೆ ವಿವರಿಸಬೇಕಾಗುತ್ತದೆ. ಅದಕ್ಕಾಗಿ ತರಬೇತಿ ಏರ್ಪಡಿಸಲಾಗಿದೆ ”ಎಂದು ಪಕ್ಷದ ಮೂಲಗಳು ತಿಳಿಸಿವೆ.
“ಪವರ್ ಬ್ರೋಕರ್ಗಳಿಂದ” ದೂರವಿರಬೇಕು. ನಡವಳಿಕೆ ಅಥವಾ ಭಾಷಣಗಳಲ್ಲಿ ಯಾವುದೇ ವಿವಾದಗಳಿಗೆ ಸಿಲುಕದಂತೆ ಎಚ್ಚರವಹಿಸಬೇಕು ಎಂದು ಮೋದಿ ಪದೇ ಪದೇ ಬಿಜೆಪಿ ಸಂಸದರು ಮತ್ತು ಸಚಿವರುಗಳಿಗೆ ಎಚ್ಚರಿಸುತ್ತಾ ಬಂದಿದ್ದಾರೆ.
ಕಳೆದ ತಿಂಗಳು ಮೋದಿ ಸಂಸದರೊಂದಿಗೆ ಹಲವಾರು ಸಭೆಗಳನ್ನು ನಡೆಸಿರುವ ಮೋದಿ, ಸಂಸತ್ತಿಗೆ ಸಕ್ರಿಯವಾಗಿ ಹಾಜರಾಗುವಂತೆ ಮತ್ತು ವಿವಿಧ ಮಸೂದೆಗಳ ಮತದಾನದ ಸಮಯದಲ್ಲಿ ಹಾಜರಿರುವಂತೆ ಸಲಹೆ ನೀಡಿದ್ದಾರೆ.
“ಈ ಅಧಿವೇಶನದಲ್ಲಿ ಸಂಸದರ ಹಾಜರಾತಿ ಒಂದು ಸಮಸ್ಯೆಯಾಗಿ ಉಳಿದಿದೆ. ಎರಡು ದಿನಗಳ ತರಬೇತಿಯಲ್ಲಿ, ಸಂಸದರಿಗೆ ಸಭೆಗಳಿಗೆ ಹಾಜರಾಗುವ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಮಹತ್ವದ ಬಗ್ಗೆ ಮತ್ತೊಮ್ಮೆ ತಿಳಿಸಿಕೊಡಲಾಗುತ್ತದೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಸಂಸದರು ತಮ್ಮ ಕ್ಷೇತ್ರಗಳಿಗೆ ಅನುದಾನವನ್ನು ಹೇಗೆ ಬಳಸಿಕೊಳ್ಳಬೇಕು, ತಮ್ಮ ಕ್ಷೇತ್ರಗಳಲ್ಲಿ ವಾರ್ಷಿಕ 5 ಕೋಟಿ ರೂ.ಗಳ ಕಾರ್ಯಗಳನ್ನು ಶಿಫಾರಸು ಮಾಡುವ ವಿಧಾನ ಹೇಗೆ, ಸಂಸತ್ತಿನಲ್ಲಿ ಪ್ರಶ್ನಾವಳಿ ಸಮಯದಲ್ಲಿ ಏನು ಕೇಳಬೇಕು ಮತ್ತು ಸಂಸತ್ತಿನಲ್ಲಿ ಏನು ಮಾಡಬಾರದು ಎಂಬಂತಹ ಇತರ ವಿಷಯಗಳ ಬಗ್ಗೆ ಸಂಸದರಿಗೆ ವಿವರಿಸಲಾಗುತ್ತದೆ ಎಂದಿದ್ದಾರೆ.
ಸಚಿವರು ಮತ್ತು ಸಂಸದರಿಗೆ ತಮ್ಮ ಕ್ಷೇತ್ರಗಳಲ್ಲಿ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಮನ್ವಯವನ್ನು ಸಾಧಿಸುವ ಬಗೆಯನ್ನು ತಿಳಿಸಿಕೊಡಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.