ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಇಬ್ಬರು ಜೈಶೇ ಇ ಮೊಹಮ್ಮದ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತರ ಪೈಕಿ ಓರ್ವ ಈ ಸಂಘಟನೆಯ ಕಮಾಂಡರ್ ಮುನ್ನ ಲಹೋರಿ ಎನ್ನಲಾಗಿದೆ. ಈತ ಪಾಕಿಸ್ಥಾನದವನಾಗಿದ್ದಾನೆ. ಐಇಡಿ (Improvised Explosive Devices) ಗಳನ್ನು ತಯಾರಿಸುವುದರಲ್ಲಿ ಈತ ತಜ್ಞನಾಗಿದ್ದ.
ರಕ್ಷಣಾ ಸಚಿವಾಲಯದ ಪ್ರಕಟನೆಯ ಪ್ರಕಾರ, ಮಾರ್ಚ್ 30 ರಂದು ಬನಿಹಲ್ನಲ್ಲಿ ಕಾರು ಮೇಲೆ ಬಾಂಬ್ ದಾಳಿ ನಡೆಸಿದರು ಮತ್ತು ಜೂನ್ 17 ರಂದು ಪುಲ್ವಾಮದ ಹರಿಹಾಲ್ನಲ್ಲಿ ಸೇನಾ ವಾಹನವನ್ನು ಉಡಾಯಿಸಿದ ಹಿಂದಿನ ರುವಾರಿ ಈ ಮುನ್ನ ಲಹೋರಿ.
ಬೊನ್ಬಜಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಪಡೆಗಳು ಈತನನ್ನು ಕೊಂದಿವೆ. ಹತ್ಯೆಗೀಡಾದ ಮತ್ತೊಬ್ಬ ಜೈಶ್ ಭಯೋತ್ಪಾದಕ ಸ್ಥಳೀಯ ಕಾಶ್ಮೀರಿ ಎನ್ನಲಾಗಿದೆ. ಆತನನ್ನು ತುರ್ಕವಾಂಗಂ ಗ್ರಾಮಕ್ಕೆ ಸೇರಿದ ಜೀನಾತುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಹತ್ಯೆಗೀಡಾದ ಭಯೋತ್ಪಾದಕರಿಂದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಐಇಡಿ ತಯಾರಿಸಲು ಬಳಸುವ ಸಾಮಗ್ರಿಗಳು ಸೇರಿದಂತೆ ಹಲವಾರು ವಿಧ್ವಂಸಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಲಹೋರಿ, ದಕ್ಷಿಣ ಕಾಶ್ಮೀರದ ಶೋಪಿಯಾನ್ ಪಟ್ಟಣದ ಉನ್ನತ ಜೈಶ್ ಕಮಾಂಡರ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮಾಹಿತಿಯನ್ನು ಆಧರಿಸಿ ಸೇನಾ ಪಡೆಗಳು ರಾತ್ರಿಯಿಡೀ ಕಾರ್ಯಾಚರಣೆಯನ್ನು ನಡೆಸಿ ಇಬ್ಬರನ್ನು ಕೊಂದಿದ್ದಾರೆ.
The slain Jaish commander Munna Lahori was responsible for partial Car Blast attack on Security Force convoy on 30/3/19 at Banihal and fatal car blast on Army vehicle at Arihal Pulwahma on 17/6/19.Some fatal & non fatal casualties took place in that blast. pic.twitter.com/BfjICmWJpn
— J&K Police (@JmuKmrPolice) July 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.