ಲಂಡನ್: ಯುಕೆಯ ಹೊಸ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ಬೋರಿಸ್ ಜಾನ್ಸನ್ ಅವರು ಬುಧವಾರ ನೇಮಕಗೊಂಡಿದ್ದಾರೆ. ಇದೀಗ ಅವರ ಸಂಪುಟಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರು ಸೇರ್ಪಡೆಗೊಂಡಿದ್ದಾರೆ. ಮತ್ತಿಬ್ಬರು ಭಾರತೀಯರಾದ ಅಲೋಕ್ ಶರ್ಮಾ ಮತ್ತು ಪ್ರೀತಿ ಪಟೇಲ್ ಕೂಡ ಸಂಪುಟವನ್ನು ಸೇರ್ಪಡೆಗೊಂಡಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯನಾಗಿರುವ ರಿಷಿ ಸುನಕ್ ಅವರು, ಯುಕೆ ಸಂಪುಟದಲ್ಲಿ ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅಲೋಕ್ ಕುಮಾರ್ ಅವರು ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಪ್ರೀತಿ ಪಟೇಲ್ ಗೃಹ ಕಾರ್ಯದರ್ಶಿಯಾಗಿದ್ದಾರೆ.
Rishi Sunak attends Cabinet as Chief Secretary to the Treasury @HMTreasury pic.twitter.com/wTf0UbJJcV
— UK Prime Minister (@10DowningStreet) July 24, 2019
ಹ್ಯಾಂಪ್ಶೈರ್ನಲ್ಲಿ ಜನಿಸಿರುವ 39 ವರ್ಷದ ಸುನಕ್ ಯಾರ್ಕ್ಷೈರ್ನ ರಿಚ್ಮಂಡ್ಗೆ 2015 ರಿಂದ ಸಂಸದರಾಗಿದ್ದಾರೆ. ಉದ್ಯಮಿಯೂ ಆಗಿರುವ ಸುನಕ್, ಆಕ್ಸ್ಫರ್ಡ್ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಾಯಿ pharmacist ಆಗಿದ್ದರೆ, ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಭೇಟಿಯಾಗಿ ನಂತರ ವಿವಾಹವಾಗಿದ್ದಾರೆ.
ಆಗ್ರಾ ಮೂಲದ ಅಲೋಕ್ ಶರ್ಮಾ ಅವರು ಈ ಹಿಂದಿನ ಥೆರೇಸಾ ಮೇ ಅವರ ಸರ್ಕಾರದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ವೇಳೆ ಅವರು ಉದ್ಯೋಗ ಖಾತೆಯನ್ನು ಹೊಂದಿದ್ದರು. ಈ ಸಂಪುಟದಲ್ಲಿ ಅವರಿಗೆ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಕಾರ್ಯದರ್ಶಿ ಹುದ್ದೆ ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.