ನವದೆಹಲಿ: ಭಾರತೀಯ ರೈಲ್ವೆ ಕೇವಲ ಲಾಭಕ್ಕಾಗಿ ಕಾರ್ಯ ಮಾಡುವುದಿಲ್ಲ, ಪ್ರಯಾಣಿಕರ ನಿಜವಾದ ಸೇವೆಗಾಗಿಯೂ ಕೆಲಸ ಮಾಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಯೋವೃದ್ಧರು, ದಿವ್ಯಾಂಗರು ಮತ್ತು ಅನಾರೋಗ್ಯ ಪೀಡಿತರು ಸುಲಲಿತವಾಗಿ ರೈಲನ್ನು ಹತ್ತಲಿ ಎಂಬ ಕಾರಣಕ್ಕೆ ಮಡಚಲು ಸಾಧ್ಯವಾಗುವಂತಹ ಹೊಸ ರ್ಯಾಂಪ್ ಅನ್ನು ರೈಲು ನಿಲ್ದಾಣಗಳಲ್ಲಿ ಪರಿಚಯಿಸುತ್ತಿದೆ.
ಹೊಸ ರ್ಯಾಂಪ್ಗಳನ್ನು ಭುವನೇಶ್ವರ, ಗುಂಟೂರು ಮತ್ತು ಇತರ ಕೆಲವು ನಿಲ್ದಾಣಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಅಳವಡಿಸಲಾಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ. ರೈಲು ಸ್ಥಗಿತಗೊಂಡಾಗ ಕಂಪಾರ್ಟ್ಮೆಂಟ್ ಡೋರ್ ಮತ್ತು ಪ್ಲಾಟ್ಫಾರ್ಮ್ಗೆ ಈ ರ್ಯಾಂಪ್ ಅನ್ನು ಜೋಡಿಸಲಾಗುತ್ತದೆ. ವೃದ್ಧರು ಅಥವಾ ದಿವ್ಯಾಂಗರು ಸುಲಭವಾಗಿ ಗಾಲಿಕುರ್ಚಿಯ ಮೂಲಕ ಈ ರ್ಯಾಂಪ್ ಬಳಸಿ ರೈಲನ್ನು ಹತ್ತಬಹುದು ಮತ್ತು ಇಳಿಯಬಹುದಾಗಿದೆ.
ಗಾಲಿಕುರ್ಚಿಯ ಮೂಲಕ ಪ್ಲಾಟ್ಫಾರ್ಮ್ನಿಂದ ಕೋಚ್ನ ಒಳಗೆ ಚಲಿಸಲು ಅನುಕೂಲವಾಗುವಂತೆ ರ್ಯಾಂಪ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ತುಂಬಾ ತೃಪ್ತರಾಗಿದ್ದಾರೆ. ಈ ಮೊದಲು ಕೋಚ್ಗೆ ಪ್ರವೇಶಿಸುವುದು ಮತ್ತು ಪ್ಲಾಟ್ಫಾರ್ಮ್ನಿಂದ ಇಳಿಯುವುದು ದಿವ್ಯಾಂಗರಿಗೆ, ಅನಾರೋಗ್ಯ ಪೀಡಿತರಿಗೆ ದೊಡ್ಡ ಸಮಸ್ಯೆಯಾಗಿತ್ತು.
ಮಡಚಬಹುದಾದ ಈ ರ್ಯಾಂಪ್ ಸುಮಾರು 35 ಕಿ.ಗ್ರಾಂ ಭಾರವಿದೆ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟೇಬಲ್ ವ್ಹೀಲ್ನಿಂದಾಗಿ ಇದು ಪೋರ್ಟಬಲ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಪರಿಗಣಿಸಿ, ರ್ಯಾಂಪ್ಗೆ ಸೇಫ್ಟಿ ಲಾಕ್ಗಳನ್ನು ಸಹ ಜೋಡಿಸಲಾಗಿದೆ. ಇದು 250 ಕೆಜಿ ವರೆಗೆ ತೂಕವನ್ನು ಸಾಗಿಸಬಲ್ಲದು.
ಭಾರತದಾದ್ಯಂತದ ಎಲ್ಲಾ ರೈಲು ನಿಲ್ದಾಣಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಕಾರ್ಯೋನ್ಮುಖಗೊಂಡಿದೆ.
भारतीय रेल द्वारा यात्रियों को प्रयोग स्वरूप फोल्डेबल रैंप की नई सुविधा प्रदान की गई है। जिसकी मदद से बुजुर्ग या बीमार यात्रियों को आसानी से ट्रेन में चढ़ाया या उतारा जा सकता है जिससे उनकी यात्रा और भी सुगम और आरामदायक हो जाती है। pic.twitter.com/cwFVLtZ9Hk
— Ministry of Railways (@RailMinIndia) July 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.