ಮುಂಬಯಿ: ರಾಜಕಾರಣಿಗಳು ತಮ್ಮ ಬೆಂಬಲಿಗರಿಂದ ಹಾರ ಹಾಕಿಸಿಕೊಂಡು ಜನ್ಮ ದಿನ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ಮಹಾರಾಷ್ಟ್ರ ಸಿಎಂ ಭಿನ್ನವಾದ ಕಾರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂದು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರು 49 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಅಮೂಲ್ಯ ದಿನದಂದು ಮುಖ್ಯಮಂತ್ರಿಗಳು ಬೆಳಿಗ್ಗೆ ತಮ್ಮ ನಿವಾಸ ‘ವರ್ಷ’ ದಲ್ಲಿ ಗಿಡ ನೆಡುವಿಕೆಯ ಕಾರ್ಯವನ್ನು ನಡೆಸಿ ಇತರರಿಗೆ ಪ್ರೇರಣೆಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಫಡ್ನವೀಸ್ ಅವರ ಜನ್ಮದಿನಕ್ಕೆ ಶುಭಾಶಯ ಕೋರಿ, “ಮಹಾರಾಷ್ಟ್ರದ ಬಲಿಷ್ಠ ಮತ್ತು ಕ್ರಿಯಾತ್ಮಕ ಸಿಎಂಗೆ ಜನ್ಮದಿನದ ಶುಭಾಶಯಗಳು. ಕಳೆದ 5 ವರ್ಷಗಳಿಂದ ಅವರು ರಾಜ್ಯವನ್ನು ಬೆಳವಣಿಗೆಯ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರು ಬಡವರ ಕಲ್ಯಾಣಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರು ಉತ್ತಮ ಆರೋಗ್ಯ ಮತ್ತು ಇನ್ನೂ ಹಲವು ವರ್ಷಗಳ ಸೇವೆಯನ್ನು ಮಾಡುವ ಅವಕಾಶ ಪಡೆಯಲಿ ಎಂದು ಆಶಿಸುತ್ತೇನೆ ” ಎಂದಿದ್ದಾರೆ.
Birthday greetings to the energetic and dynamic CM of Maharashtra, @Dev_Fadnavis Ji. For the last 5 years, he has steered the state to new heights of growth. He has assiduously worked for the welfare of the poor. May he be blessed with good health and many more years of service.
— Narendra Modi (@narendramodi) July 22, 2019
ಪ್ರಧಾನ ಮಂತ್ರಿಗೆ ಧನ್ಯವಾದ ತಿಳಿಸಿದ ಫಡ್ನವಿಸ್, “ನಿಮ್ಮ ಆಶೀರ್ವಾದ, ಶುಭಾಶಯಗಳು ಮತ್ತು ಪ್ರೋತ್ಸಾಹದ ಮಾತುಗಳಿಗಾಗಿ ಮತ್ತು ಮಹಾರಾಷ್ಟ್ರಕ್ಕೆ ನಿಮ್ಮ ದೃಢವಾದ ಬೆಂಬಲಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ನರೇಂದ್ರ ಮೋದಿಜೀ, ಈ ಕಾರಣದಿಂದಾಗಿ ನಾವು ಮಹಾರಾಷ್ಟ್ರ ಜನರ ಆಶೋತ್ತರಗಳನ್ನು ಪೂರೈಸಲು ಸಮರ್ಥರಾಗಿದ್ದೇವೆ ” ಎಂದಿದ್ದಾರೆ.
Planted a sapling at Varsha residence this morning!
‘वर्षा‘ निवासस्थानी आज सकाळी वृक्षारोपण केले! pic.twitter.com/ylX9qSk1NB— Devendra Fadnavis (@Dev_Fadnavis) July 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.