ನವದೆಹಲಿ: ರೈಲ್ವೇ ಪ್ಲಾಟ್ ಫಾರ್ಮ್ಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ರೈಲ್ವೇಯು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ‘ನೋ ಬಿಲ್, ನೋ ಪೇಮೆಂಟ್’ ಎಂಬ ವಿನೂತನ ನಿಯಮವನ್ನು ಅದು ಜಾರಿಗೆ ತಂದಿದ್ದು, ಇದರ ಪ್ರಕಾರ ಪ್ಲಾಟ್ ಫಾರ್ಮ್ನಲ್ಲಿನ ವ್ಯಾಪಾರಿಗಳು ಬಿಲ್ ನೀಡದೇ ಇದ್ದರೆ ಖರೀದಿ ಮಾಡಿದ ವಸ್ತುಗಳಿಗೆ ಹಣ ಪಾವತಿಸುವ ಅಗತ್ಯವಿರುವುದಿಲ್ಲ.
“ಈ ಯೋಜನೆಯಡಿಯಲ್ಲಿ, ರೈಲು ಅಥವಾ ರೈಲು ನಿಲ್ದಾಣಗಳಲ್ಲಿ ಖರೀದಿ ಮಾಡುವ ಯಾವುದೇ ವಸ್ತುವಿಗೆ ಬಿಲ್ ಅನ್ನು ನೀಡದೇ ಇದ್ದರೆ ಪ್ರಯಾಣಿಕರು ಹಣವನ್ನು ಪಾವತಿ ಮಾಡಬೇಕಾಗಿಲ್ಲ” ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ಘೋಷಣೆ ಮಾಡಿದ್ದಾರೆ.
ಉತ್ಪನ್ನಗಳ ನೈಜ ಬೆಲೆಗೆ ಸಂಬಂಧಿಸಿದಂತೆ ಪ್ರಯಾಣಿಕರ ವಿಶ್ವಾಸವನ್ನು ಮತ್ತು ಪಾರದರ್ಶಕತೆಯನ್ನು ಈ ನಿಯಮ ಹೆಚ್ಚಿಸಲಿದೆ. ಹೆಚ್ಚಿನವರು ಸಾಮಾನ್ಯ ಮಾರುಕಟ್ಟೆಗಳಿಗೆ ಹೋಲಿಸಿದರೆ, ರೈಲ್ವೆ ಪ್ಲಾಟ್ಫಾರ್ಮ್ಗಳಲ್ಲಿ ಖರೀದಿ ಮಾಡಿದ ಉತ್ಪನ್ನಗಳಿಗೆ ಹೆಚ್ಚುವರಿ ಮೊತ್ತವನ್ನು ವಿಧಿಸಲಾಗುತ್ತದೆ ಎಂದು ದೂರುತ್ತಾರೆ. ಈ ಹಿನ್ನಲೆಯಲ್ಲಿ ಬಿಲ್ ನೀಡುವುದನ್ನು ಕಡ್ಡಾಯ ಮಡಲಾಗಿದೆ. ಬಿಲ್ ನೀಡದೇ ಇದ್ದರೆ ಹಣವನ್ನು ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಪ್ರಯಾಣಿಕರಿಂದ ಸ್ವೀಕರಿಸಿದ ದೂರುಗಳನ್ನು ಉಲ್ಲೇಖಿಸಿರುವ ಸಚಿವರು, ಮಾರಾಟಗಾರರು ನೀರಿನ ಬಾಟಲಿಗಳ ಮೇಲೆ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ವಿಧಿಸುತ್ತಾರೆ ಮತ್ತು ಅನೇಕ ಆಹಾರ ಪದಾರ್ಥಗಳಿಗೆ ನಿಗದಿತ ಬೆಲೆಯೂ ಇರುವುದಿಲ್ಲ. ಹೀಗಾಗಿ ‘ನೋ ಬಿಲ್, ನೋ ಪೇಮೆಂಟ್’ ನೀತಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಮಾರಾಟಗಾರರು ಬಿಲ್ ನೀಡದಿದ್ದರೆ ಅವರಿಗೇ ನಷ್ಟವಾಗುತ್ತದೆ, ರೈಲಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಇದರಿಂದ ಪ್ರಯೋಜನವಾಗುತ್ತದೆ ಎಂದಿದ್ದಾರೆ.
रेलवे द्वारा No Bill, No Payment की नीति अपनाते हुए विक्रेताओं द्वारा ग्राहकों को बिल देना अनिवार्य किया गया है।
ट्रेन अथवा रेलवे प्लेटफार्म पर यदि कोई विक्रेता आपको बिल देने से इंकार करता है तो आप को उसे पैसे देने की आवश्यकता नही है। pic.twitter.com/qxcnnjtemb
— Piyush Goyal (@PiyushGoyal) July 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.