ಕೊಲ್ಲಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ಭಾರತಕ್ಕೆ ಕರೆತರಲು ಕೇರಳದ ಕೊಲ್ಲಂನ ಪೊಲೀಸ್ ಆಯುಕ್ತೆ ಮೆರಿನ್ ಜೋಸೆಫ್ ಮತ್ತು ಅವರ ತಂಡ ಸೌದಿಗೆ ತೆರಳಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಸೌದಿಯಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈ ವೇಳೆ 2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಇದಾಗಿದ್ದು, ಮೆರಿನ್ ಜೋಸೆಫ್ ವಿಶೇಷ ಆಸಕ್ತಿಯನ್ನು ತೆಗೆದುಕೊಂಡು ಈ ಪ್ರಕರಣದ ಬೆನ್ನತ್ತಿದ್ದಾರೆ. ಕಳೆದ ಜೂನ್ನಲ್ಲಿ ಕೊಲ್ಲಂನ ಪೊಲೀಸ್ ಆಯುಕ್ತೆಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
2017ರಲ್ಲಿ ಸುನಿಲ್ ಕುಮಾರ್ ಭದ್ರನ್ ಎಂಬಾತ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸೌದಿ ಅರೇಬಿಯಾಗೆ ಪರಾರಿಯಾಗಿದ್ದ. ಆದರೆ ಅತ್ಯಾಚಾರ ಸಂತ್ರಸ್ಥೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾತ್ರವಲ್ಲ ಬಾಲಕಿಯನ್ನು ಆರೋಪಿಗೆ ಪರಿಚಯಿಸಿದ್ದ ವ್ಯಕ್ತಿ ಕೂಡ ಪಶ್ಚಾತ್ತಾಪದಿಂದ ಆತ್ಯಹತ್ಯೆ ಮಾಡಿಕೊಂಡಿದ್ದರು.
ಅತ್ಯಾಚಾರ ಸಂತ್ರಸ್ಥೆಯ ಮರಣದ ಬಳಿಕ, ಆರೋಪಿ ಸೌದಿಗೆ ಪರಾರಿಯಾದ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಬೆಳವಣಿಗೆಯನ್ನು ಕಾಣದೆ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀ ಕೊಲ್ಲಂಗೆ ಪೊಲೀಸ್ ಆಯುಕ್ತೆಯಾಗಿ ಬಂದಿರುವ ಮೆರಿನ್ ಅತ್ಯಾಚಾರ ಆರೋಪಿಗೆ ಸೂಕ್ತ ಶಿಕ್ಷೆ ಕೊಡಿಸಲೇಬೇಕೆಂದು ಪಣತೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಸೌದಿಯಲ್ಲಿ ತಲೆಮರೆಸಿಕೊಂಡಿದ್ದ ಸುನಿಲ್ ಕುಮಾರ್ ಬಂಧನಕ್ಕಾಗಿ ಸೌದಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸೌದಿ ಪೊಲೀಸರು ಸುನಿಲ್ನನ್ನು ಬಂಧಿಸಿರುವ ಮಾಹಿತಿ ರವಾನಿಸಿದ್ದಾರೆ.
ಹೀಗಾಗಿ ಕಳೆದ ಭಾನುವಾರ ಮೆರಿನ್ ಜೊಸೆಫ್ ಮತ್ತು ಅವರ ತಂಡ ರಿಯಾದ್ಗೆ ತೆರಳಿದ್ದು, ಸುನಿಲ್ನನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವನನ್ನು ಬಂಧಿಸಿ ಕರೆತರಲಿದ್ದಾರೆ. ಮೆರಿನ್ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.