ನವದೆಹಲಿ: 6,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಸಂಪರ್ಕಿಸುವ ಮೂಲಕ ಸರ್ಕಾರಿ ಸ್ವಾಮ್ಯದ ರೈಲ್ಟೆಲ್ ಕಾರ್ಪೊರೇಷನ್ ವಿಶ್ವದ ಅತಿದೊಡ್ಡ ಸಿಸಿಟಿವಿ ನೆಟ್ವರ್ಕ್ ಅನ್ನು ನಿರ್ಮಾಣ ಮಾಡಲು ಸಜ್ಜಾಗಿದೆ.
ರೈಲ್ಟೆಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ ಅವರು ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಪೋರೇಶನ್ ಮುಂದಿನ ತಿಂಗಳಲ್ಲಿಯೇ ಟೆಂಡರ್ಗೆ ಆಹ್ವಾನವನ್ನು ನೀಡಲಿದೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆಯನ್ನು ಬಳಸುವುದರಿಂದ, ಸಿಸಿಟಿವಿ ಕ್ಯಾಮೆರಾಗಳ ಬೃಹತ್ ನೆಟ್ವರ್ಕ್ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ಜೊತೆಗೆ ಅಪರಾಧಗಳನ್ನು ತಡೆಗಟ್ಟುವ ಕೇಂದ್ರ ಸರ್ಕಾರದ ದೊಡ್ಡ ಗುರಿಯನ್ನು ಸಾಧಿಸಲು ಸಹಾಯ ಮಾಡಲಿದೆ.
ರೈಲ್ವೆ ಸಚಿವಾಲಯವು ನಿಲ್ದಾಣಗಳಲ್ಲಿ ಮತ್ತು ಪ್ರಯಾಣಿಕ ರೈಲುಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಸಿಸಿಟಿವಿ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸಲು ಯೋಜಿಸಿದೆ ಎಂದು ಇತ್ತೀಚಿಗೆ ಸಂಸತ್ತಿಗೆ ಸರ್ಕಾರ ಮಾಹಿತಿಯನ್ನು ನೀಡಿದೆ.
ರೈಲ್ಟೆಲ್ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಇದು ರೈಲ್ವೆ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿದೆ ಮತ್ತು ರೈಲ್ವೆ ಸೇರಿದಂತೆ ಸರ್ಕಾರಿ ಇಲಾಖೆಗಳಿಗೆ ಟೆಲಿಕಾಂಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.