ನವದೆಹಲಿ: ಕೆಳಮನೆಯ ಇತಿಹಾಸದಲ್ಲೇ 17 ನೇ ಲೋಕಸಭೆಯ ಮೊದಲ ಅಧಿವೇಶನವು 20 ವರ್ಷಗಳಲ್ಲೇ ಅತ್ಯಂತ ಫಲದಾಯಕ ಅಧಿವೇಶನವಾಗಿ ಹೊರಹೊಮ್ಮಿದೆ.
ಸಂಸತ್ತಿಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಸಕ್ರಿಯವಾಗಿ ಹಲವು ಗಂಟೆಗಳ ಕಾಲ, ಅನೇಕ ದಿನಗಳಲ್ಲಿ ಮಧ್ಯರಾತ್ರಿ 12 ರವರೆಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೊಸ ಅಧಿವೇಶನವು ಇಲ್ಲಿಯವರೆಗೆ ಶೇ.128ರಷ್ಟು ದಾಖಲೆಯ ಫಲಿದಾಯಕತೆಯನ್ನು ದಾಖಲಿಸಿದೆ ಎಂದು ನಾನ್ ಪ್ರಾಫಿಟ್ ಆರ್ಗನೈಝೇಶನ್ PRS ಲೆಜಿಸ್ಲೇಟಿವ್ ರಿಸರ್ಚ್ ಸಂಗ್ರಹಿಸಿದ ಅಂಕಿಅಂಶಗಳು ತಿಳಿಸಿವೆ.
ಲೋಕಸಭೆಯ ಅಧಿಕೃತ ಕೆಲಸದ ಸಮಯ ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ, ಮಧ್ಯಾಹ್ನ 1 ರಿಂದ 2 ರವರೆಗೆ ಒಂದು ಗಂಟೆ ವಿರಾಮವಿದೆ.
ಜೂನ್ 17 ರಂದು ಪ್ರಾರಂಭವಾದ ಲೋಕಸಭೆಯ ಅಧಿವೇಶನ ಜುಲೈ 16 ರವರೆಗೆ 150.2 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ ಎಂದು PRS ವರದಿ ತಿಳಿಸಿದೆ. ಅಧಿವೇಶನ ಜುಲೈ 26 ಕ್ಕೆ ಕೊನೆಗೊಳ್ಳಲಿದೆ.
ಸಂಸದರು ವಿವಿಧ ಸಚಿವಾಲಯಗಳ ಅನುದಾನಗಳ ಬಗ್ಗೆ ಚರ್ಚೆಯನ್ನು ನಡೆಸುವುದರಿಂದ ಬಜೆಟ್ ಅಧಿವೇಶನಗಳು ಸಾಮಾನ್ಯವಾಗಿ ಹೆಚ್ಚಿನ ಸಮಯ ಕಾರ್ಯನಿರ್ವಹಿಸುತ್ತವೆ. ಆದರೆ ಪ್ರಸ್ತುತ ನಡೆಯುತ್ತಿರುವ ಅಧಿವೇಶನವು ಹಿಂದಿನ ಎಲ್ಲಾ ಬಜೆಟ್ ಅವಧಿಗಳನ್ನು ಮೀರಿದೆ. 2015 ರ ಬಜೆಟ್ ಅಧಿವೇಶನದಲ್ಲಿ ಸದನವು 246.02 ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದು, 122% ನಷ್ಟು ಫಲಾದಾಯಕತೆಯನ್ನು ದಾಖಲಿಸಿದೆ. 2016 ಬಜೆಟ್ ಸೆಷನ್ 198.2 ಗಂಟೆಗಳ ಕಾಳ ಕಾರ್ಯನಿರ್ವಹಣೆ ಮಾಡಿ ಶೇ. 121ರಷ್ಟು ಫಲದಾಯಕತೆಯನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಈ ಬಾರಿಯ ಅಧಿವೇಶನವು ಶೇ.128ರಷ್ಟು ಫಲದಾಯಕತೆಯನ್ನು ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.