ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ನಗರ ಸಂಚಾರ ಪೊಲೀಸರಿಗೆ ಬುಧವಾರ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕ್ಯಾಮೆರಾಗಳು ಮಹತ್ವದ ಪಾತ್ರವನ್ನು ವಹಿಸಲಿವೆ.
ಸಂಚಾರಿ ನಿಯಮ ಉಲ್ಲಂಘನೆಗಳ ಮೇಲೆ ಹದ್ದಿನ ಕಲ್ಲಿಡಲು, ರಸ್ತೆಗಳಲ್ಲಿ ಉತ್ತಮ ಕಣ್ಗಾವಲನ್ನು ಇರಿಸುವ ಸಲುವಾಗಿ ಅಲ್ಟ್ರಾ ಮಾಡರ್ನ್ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಸಂಚಾರಿ ಪೊಲೀಸರಿಗೆ ಒದಗಿಸಲಾಗಿದೆ. ತಮ್ಮ ಕರ್ತವ್ಯದ ಸಂದರ್ಭಗಳಲ್ಲಿ ಅವರು ಇದನ್ನು ಧರಿಸಲಿದ್ದಾರೆ.
ಈ ಕ್ಯಾಮೆರಾಗಳು ಸಂಚಾರಿ ನಿಯಮ ಉಲ್ಲಂಘನೆಯನ್ನು ಆನ್ಲೈನ್ ಮೂಲಕ ಪರಿಶೀಲನೆ ನಡೆಸಲಿದೆ, ಸಂಚಾರಿ ಪೊಲೀಸರ ಚಲನವಲನಗಳು ಕೂಡ ಪರಿಶೀಲನೆಗೊಳಪಡಲಿವೆ. ಇದರಿಂದಾಗಿ ಭ್ರಷ್ಟಾಚಾರಗಳಿಗೂ ಕಡಿವಾಣವನ್ನು ಹಾಕಬಹುದಾಗಿದೆ.
ಕೊಯಂಬತ್ತೂರಿನ ನಗರ ಪೊಲೀಸ್ ಆಯುಕ್ತ ಸುಮಿತ್ ಸರನ್ ಅವರು ಸಂಚಾರ ಇಲಾಖೆಯಿಂದ ಪೂರೈಕೆಯಾದ ಈ ಕ್ಯಾಮೆರಾಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ” ಈ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಆನ್ಲೈನ್ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರಿಂದ ಸಂಚಾರಿ ನಿಯಮಗಳ ಉಲ್ಲಂಘನೆಯ ಮೇಲೆ ಹದ್ದಿನ ಕಣ್ಣಿಡಲು ಸಹಾಯಕವಾಗಲಿದೆ ಮತ್ತು ಕ್ಯಾಮೆರಾಗಳನ್ನು ಧರಿಸಿದ ಪೊಲೀಸರ ಚಟುವಟಿಕೆಗಳನ್ನೂ ಕೂಡ ಮೇಲ್ವಿಚಾರಣೆಗೊಳಪಡಿಸಬಹುದಾಗಿದೆ” ಎಂದಿದ್ದಾರೆ.
ಇಲಾಖೆಯು 70 ಬಾಡಿ ವೋರ್ನ್ ಕ್ಯಾಮೆರಾಗಳನ್ನು ಪೂರೈಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.