ಚೆನ್ನೈ: ಶಾಲಾ ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ (International Debating Tournament) ಜುಲೈ 18 ರಿಂದ ಜುಲೈ 21 ರವರೆಗೆ ಚೆನ್ನೈನಲ್ಲಿ ನಡೆಯಲಿದೆ.
ಇಂಡಿಯನ್ ಸ್ಕೂಲ್ಸ್ ಡಿಬೇಟಿಂಗ್ ಸೊಸೈಟಿ (ISDS) ಆಯೋಜನೆಗೊಳಿಸುತ್ತಿರುವ “ಮಿನಿ ವರ್ಲ್ಡ್ಸ್” ಎಂಬ ಮೊಟ್ಟಮೊದಲ ಅಂತಾರಾಷ್ಟ್ರೀಯ ಚರ್ಚಾ ಕಾರ್ಯಕ್ರಮ ಇದಾಗಿದ್ದು, ವಿವಿಧ ದೇಶಗಳ 15 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ವರ್ಲ್ಡ್ ಸ್ಕೂಲ್ಸ್ ಡಿಬೇಟಿಂಗ್ ಚಾಂಪಿಯನ್ಶಿಪ್ಸ್ ಅನುಸರಿಸುವ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.
ಐಎಸ್ಡಿಎಸ್ ಪ್ರಕಟಣೆಯ ಪ್ರಕಾರ, ಈ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್, ಇಂಗ್ಲೆಂಡ್, ವೇಲ್ಸ್, ಐರ್ಲೆಂಡ್, ಮೆಕ್ಸಿಕೊ, ನೈಜೀರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಕೊರಿಯಾ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸಲಿವೆ. ಮೂರು ತಂಡಗಳು ಭಾರತವನ್ನು ಪ್ರತಿನಿಧಿಸಲಿವೆ.
ಭಾರತದ ಒಂದು ತಂಡದಲ್ಲಿ ಮುಂಬೈನ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಭವ್ಯಾ ಷಾ ಕೂಡ ಇರಲಿದ್ದಾರೆ. ದೃಷ್ಟಿ ವಿಕಲಚೇತನರೊಬ್ಬರು ಅಂತಾರಾಷ್ಟ್ರೀಯ ಡೆಬೆಟ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಭಾವ್ಯಾ ಅವರು ರಾವ್ ಜೂನಿಯರ್ ಕಾಲೇಜ್ ಆಫ್ ಸೈನ್ಸ್ನಲ್ಲಿ 12 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
2008 ರಲ್ಲಿ ಚೆನ್ನೈನಲ್ಲಿ ಕೇವಲ ಐದು ಶಾಲೆಗಳೊಂದಿಗೆ ಪ್ರಾರಂಭವಾದ ಐಎಸ್ಡಿಎಸ್, ಈಗ 10 ನಗರಗಳನ್ನು ಒಳಗೊಂಡಿದೆ, ದೇಶಾದ್ಯಂತ 200 ಕ್ಕೂ ಹೆಚ್ಚು ಶಾಲೆಗಳ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇದು ತಲುಪಿದೆ. ವರ್ಲ್ಡ್ ಸ್ಕೂಲ್ ಚಾಂಪಿಯನ್ಶಿಪ್ನಲ್ಲಿ ದೇಶವನ್ನು ಪ್ರತಿನಿಧಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ, ಇತರ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯದಲ್ಲೂ ತೊಡಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.