ನವದೆಹಲಿ: ಇಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಪ್ರಕಟವಾಗಲಿದೆ. ವಾದ-ಪ್ರತಿವಾದ ಆಲಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾದ ಅಬ್ದುಲಕಾವೀ ಅಹಮದ್ ಯೂಸೂಫ್ ತೀರ್ಪು ಪ್ರಕಟಿಸಲಿದ್ದಾರೆ.
ಕುಲಭೂಷಣ್ ಜಾಧವ್ ಅವರನ್ನು ಚಹಬಾರ್ನಿಂದ ಅಪಹರಣ ಮಾಡಿ, ಪಾಕಿಸ್ಥಾನಕ್ಕೆ ಕರೆದೊಯ್ಯಲಾಗಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಪಾಕಿಸ್ಥಾನದ ನಟೋರಿಯಸ್ ಐಎಸ್ಐಯು ಜೈಶೇ ಅಲ್ ಅದ್ಲ್ ಭಯೋತ್ಪಾದಕ ಸಂಘಟನೆಯ ಮೂಲಕ ಕುಲಭೂಷಣ್ ಅವರನ್ನು ಅಪಹರಿಸಿದೆ, ಬಳಿಕ ಪಾಕಿಸ್ಥಾನಕ್ಕೆ ಕರೆದುಕೊಂಡು ಹೋಗಿದೆ. ನಂತರ ಜಗತ್ತಿಗೆ ಅವರೊಬ್ಬ ಭಾರತದ ಪರ ಬೇಹುಗಾರ ಎಂದು ನಂಬಿಸುವ ಪ್ರಯತ್ನ ಮಾಡಿದೆ ಎಂದಿದೆ.
ಪಾಕಿಸ್ಥಾನ ಆಡಳಿತವು ಕುಲಭೂಷಣ್ ಅವರ ವಿರುದ್ಧ ನಕಲಿ ಸಾಕ್ಷ್ಯಗಳನ್ನು ಬಳಸಿ ಬೇಹುಗಾರ ಎಂದು ಸಾಬೀತುಪಡಿಸಲು ಹೊರಟಿದೆ ಎಂಬುದಕ್ಕೆ ಭಾರತದ ಬಳಿ ಸಾಕಷ್ಟು ಪುರಾವೆಗಳಿವೆ.
ಪಾಕಿಸ್ಥಾನವು ಇರಾನ್ನ ಗಡಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇರಾನ್ ವಿರುದ್ಧ ಜೈಶ್ ಅಲ್ ಆಡ್ಲ್ ಅನ್ನು ಕೂಡ ಪಾಕಿಸ್ಥಾನ ಬಳಸಿದೆ. ಇರಾನ್-ಪಾಕಿಸ್ಥಾನ ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ಥಾನದ ಬೆಂಬಲ ನೀಡುತ್ತಿರುವ ಬಗ್ಗೆ ಇರಾನಿನ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಜೈಶ್ ಅಲ್ ಅದ್ಲ್ ಅನ್ನು ‘ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ’ ಆಗಿರುವ ಜುಂಡುಲ್ಲಾದ ಒಂದು ಭಾಗ ಎಂದು ಘೋಷಿಸಿದೆ.
ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯವು ಜಾಧವ್ ಪ್ರಕರಣವನ್ನು ಪಾಕಿಸ್ಥಾನದಲ್ಲಿ ವಿಚಾರಣೆ ನಡೆಸಿ ಅವರಿಗೆ ಮರಣದಂಡನೆಯನ್ನು ವಿಧಿಸಿತ್ತು. ಭಾರತ ಮರಣದಂಡನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ತಡೆ ತರುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಪ್ರಜೆಯಾದ ಜಾಧವ್ ಅವರನ್ನು ಬಂಧಿಸುವ ಮತ್ತು ವಿಚಾರಣೆ ಮಾಡುವ ವಿಷಯದಲ್ಲಿ 1963 ರ ಕಾನ್ಸುಲರ್ ಸಂಬಂಧಿತ ವಿಯೆನ್ನಾ ಕನ್ವೆನ್ಷನ್ ಅನ್ನು ಪಾಕಿಸ್ಥಾನವು ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತವು 2017ರ 8 ಮೇ ರಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಪ್ರಾರಂಭಿಸಿದೆ.
ಪಾಕಿಸ್ಥಾನವು ಕಾನೂನನ್ನು ತನ್ನ ಕೈಗೆತ್ತಿಕೊಳ್ಳುವುದನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪ್ರಯತ್ನಗಳು ಪಾಕಿಸ್ಥಾನದ ಮೇಲೆ ಒತ್ತಡವನ್ನು ತಂದಿವೆ. ಇದರಿಂದ ಅನಿವಾರ್ಯವಾಗಿ ಜಾಧವ್ ಅವರ ಮರಣದಂಡನೆಯನ್ನು ಪಾಕಿಸ್ಥಾನಕ್ಕೆ ನಿಲ್ಲಿಸಬೇಕಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.