ನವದೆಹಲಿ: ಭಾರತವು ಮಯನ್ಮಾರಿಗೆ ಮೊದಲ ಬ್ಯಾಚಿನ ಸುಧಾರಿತ ಲಘು ತೂಕದ ಟಾರ್ಪಿಡೊಗಳಾದ ಶೈನಾವನ್ನು ಜುಲೈ ಆರಂಭದಲ್ಲಿ ಪೂರೈಕೆ ಮಾಡಿದೆ. ಶೈನಾ ಟಾರ್ಪಿಡೊಗಳ ಪೂರೈಕೆಗಾಗಿ ಭಾರತ ಮತ್ತು ಮ್ಯಾನ್ಮಾರ್ 2017 ರಲ್ಲಿ 37.9 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಶೈನ ಟಾರ್ಪಿಡೊಗಳನ್ನು ಕ್ರಮವಾಗಿ ಡಿಆರ್ಡಿಒದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಪಡಿಸಿದೆ. ಭಾರತೀಯ ನೌಕಾಪಡೆಯ ಹಲವಾರು ಯುದ್ಧನೌಕೆಗಳು ಶೈನ ಟಾರ್ಪಿಡೊಗಳಿಂದ ಶಸ್ತ್ರಸಜ್ಜಿತವಾಗಿವೆ.
ಹಗುರವಾದ ಟಾರ್ಪಿಡೊಗಳು ವಿದ್ಯುತ್ ಚಾಲಿತ, ಸೆಲ್ಫ್ ಹೋಮಿಂಗ್ ಅಂಡರ್ ವಾಟಲರ್ ವೆಪನ್ ಆಗಿದೆ. ಇದನ್ನು ಜಲಾಂತರ್ಗಾಮಿ, ಮೇಲ್ಮೈ ಯುದ್ಧನೌಕೆ, ಹೆಲಿಕಾಪ್ಟರ್ ಮತ್ತು ವಿಮಾನದಿಂದ ಉಡಾಯಿಸಬಹುದು.
2.75 ಮೀಟರ್ ಉದ್ದ ಮತ್ತು 220 ಕೆಜಿ ತೂಕ ಹೊಂದಿರು ಶೈನಾ 50 ಕೆಜಿ ಸಿಡಿತಲೆಯನ್ನು ಹೊಂದಿದೆ. ಇದು ಪ್ರಾಥಮಿಕವಾಗಿ ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರವಾಗಿದ್ದು, ಗರಿಷ್ಠ ಏಳು ಕಿ.ಮೀ.ವ್ಯಾಪ್ತಿಯನ್ನು ಹೊಂದಿದೆ. ಇದರ ಗರಿಷ್ಠ ಕಾರ್ಯಾಚರಣೆಯ ಆಳ 540 ಮೀಟರ್ ಮತ್ತು ಆಳವಿಲ್ಲದ ಮತ್ತು ಆಳವಾದ ನೀರಿನಲ್ಲಿ ಆರು ನಿಮಿಷಗಳ ಕಾಲ ಕಾರ್ಯವಿರ್ವಹಣೆ ಮಾಡುತ್ತದೆ. ಇದರ ಗರಿಷ್ಠ ವೇಗವು 33 ನಾಟ್ಸ್. 2012ರ ಮಾರ್ಚ್ 3 ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಶೈನಾ, ಮಾರ್ಗದರ್ಶನಕ್ಕಾಗಿ ನಿಷ್ಕ್ರಿಯ / ಸಕ್ರಿಯ ಅಕೌಸ್ಟಿಕ್ ಹೋಮಿಂಗ್ ಅನ್ನು ಬಳಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ “ಆಕ್ಟ್ ಈಸ್ಟ್ ಪಾಲಿಸಿ” ಯ ಭಾಗವಾಗಿ ಭಾರತವು ಮ್ಯಾನ್ಮಾರ್ ಮತ್ತು ಏಷ್ಯಾದ ಇತರ ದೇಶಗಳೊಂದಿಗೆ ತನ್ನ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತಿದೆ. ಭಾರತದ ಆಕ್ಟ್ ಈಸ್ಟ್ ಪಾಲಿಸಿಯು ಏಷ್ಯಾ-ಪೆಸಿಫಿಕ್ ಪ್ರದೇಶದ ವಿಸ್ತೃತ ನೆರೆಹೊರೆಯನ್ನು ಕೇಂದ್ರೀಕರಿಸುತ್ತಿದೆ. ಮೂಲತಃ ಆರ್ಥಿಕ ಉಪಕ್ರಮವೆಂದು ಹೇಳಲಾದ ಈ ನೀತಿಯು ರಾಜಕೀಯ ಮತ್ತು ಕಾರ್ಯತಂತ್ರ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಕೂಡ ಹೊಂದಿದೆ.ಮಾತುಕತೆ ಮತ್ತು ಸಹಕಾರಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಇದು ಸ್ಥಾಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.