ಜೈಪುರ: ನಮ್ಮ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡಿರುವ ಬ್ರಿಟಿಷ್ ಪದ್ಧತಿಗಳಿಗೆ ತಿಲಾಂಜಲಿ ನೀಡುವ ಸಲುವಾಗಿ ರಾಜಸ್ಥಾನ ಹೈಕೋರ್ಟ್ನ ಪೂರ್ಣ ನ್ಯಾಯಾಲಯವು, ಸೋಮವಾರ ‘ಮೈ ಲಾರ್ಡ್’ ಅಥವಾ ‘ಯುವರ್ ಆನರ್’ನಂತಹ ನ್ಯಾಯಾಧೀಶರನ್ನು ಉದ್ದೇಶಿಸಲು ಬಳಸಲಾಗುವ ಪದಗಳ ಬಳಕೆಯನ್ನು ನಿಷೇಧ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ರವೀಂದ್ರ ಭಟ್ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜಸ್ಥಾನ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಇಂದು ಈ ಪದಗಳ ಬಳಕೆಯನ್ನು ಮಾಡದಂತೆ ನೋಟಿಸ್ ಹೊರಡಿಸಿದ್ದಾರೆ.
ರಾಜಸ್ಥಾನ ಹೈಕೋರ್ಟ್ ಜಾರಿಗೊಳಿಸಿದ ನೋಟಿಸ್ನಲ್ಲಿ, ”ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯನ್ನು ಗೌರವಿಸುವ ಸಲುವಾಗಿ, ನ್ಯಾಯಾಧೀಶರನ್ನು ಮೈ ಲಾರ್ಡ್ ಅಥವಾ ಯುವರ್ ಆನರ್ ಎಂದು ಸಂಬೋಧಿಸುವುದನ್ನು ನಿಲ್ಲಿಸುವಂತೆ ಸಲಹೆಗಾರರನ್ನು ಮತ್ತು ನ್ಯಾಯಾಲಯಕ್ಕೆ ಹಾಜರಾಗುವ ಪ್ರತಿಯೊಬ್ಬರನ್ನೂ ಕೋರಲಾಗಿದೆ” ಎಂದ ತಿಳಿಸಿದೆ.
ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಆದೇಶವನ್ನು ಗೌರವಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
Rajasthan High Court issues notice, it states, ‘To honour the mandate of equality enshrined in the Constitution of India, the Court has resolved to request the counsels& those who appear before the Court to desist from addressing the judges as ‘My Lord & ‘Your Lordship’. pic.twitter.com/sg3nOkeWrI
— ANI (@ANI) July 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.