ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪುಣೆ ವಿದ್ಯಾರ್ಥಿಗಳು ಮತ್ತು ಮೆಕಾನಿಕಲ್ ವಿಭಾಗದ ಸಿಬ್ಬಂದಿಗಳು ತಮ್ಮ ‘Surfactant Based Boiling System for Zero Gravity’ ಕೂಲಿಂಗ್ ವ್ಯವಸ್ಥೆಗಾಗಿ ಪೇಟೆಂಟ್ ಪಡೆದುಕೊಂಡಿದ್ದಾರೆ.
ಕೈಸರ್ ರಾಝಾ ಮತ್ತು ಪ್ರಾಧ್ಯಾಪಕ ರಿಷಿ ರಾಜ್ ಅವರು ಎಲೆಕ್ಟ್ರಾನಿಕ್ ವ್ಯವಸ್ಥೆಗಳು ಬಾಹ್ಯಾಕಾಶದಲ್ಲಿ ಹೆಚ್ಚು ಬಿಸಿಯಾಗದಂತೆ ರಕ್ಷಿಸುವ ಈ ಕೂಲಿಂಗ್ ಸಾಧನವನ್ನು ನಿರ್ಮಿಸಿದ್ದಾರೆ. 2015 ರ ಫೆಬ್ರವರಿಯಲ್ಲಿ ಈ ಸಾಧನಕ್ಕಾಗಿ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ನಾಲ್ಕು ವರ್ಷಗಳ ನಂತರ 2019ರ ಜೂನ್ 24 ರಂದು ಭಾರತೀಯ ಪೇಟೆಂಟ್ ಕಚೇರಿಯಿಂದ ಇವರಿಗೆ ಪೇಟೆಂಟ್ ಲಭ್ಯವಾಗಿದೆ.
2013 ರಲ್ಲಿ ಐಐಟಿ ಪಾಟ್ನಾದ ಥರ್ಮಲ್ ಆ್ಯಂಡ್ ಫ್ಲೂಯಿಡ್ ಟ್ರಾನ್ಸ್ಪೋರ್ಟ್ ಲ್ಯಾಬೊರೇಟರಿ (TFTL)ಯಲ್ಲಿ ರಾಝಾ ಮತ್ತು ರಾಜ್ ತಮ್ಮ ಆವಿಷ್ಕಾರವನ್ನು ಪ್ರಾರಂಭಿಸಿದ್ದರು. 2015 ರಲ್ಲಿ ಈ ಕೂಲಿಂಗ್ ವ್ಯವಸ್ಥೆಯನ್ನು ಹೊರತಂದಿದ್ದರು. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭವಿಷ್ಯದ ಉಪಗ್ರಹಗಳಿಗೆ ಈ ವ್ಯವಸ್ಥೆಯನ್ನು ಬಳಸುವ ನಿಟ್ಟಿನಲ್ಲಿ TFTLನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಈ ಪ್ರಾಜೆಕ್ಟ್ ಅಡಿ ಇಸ್ರೋ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ ಹೇಳಿದ್ದಾರೆ.
ಬಾಹ್ಯಾಕಾಶ ಆಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಪಂಪ್ ಮಾಡಲು ಮತ್ತು ತಣ್ಣಗಾಗಿಸಲು ವಿಜ್ಞಾನಿಗಳು ಬಳಸುವ ಸಾಂಪ್ರದಾಯಿಕ ಏಕ-ಹಂತದ ತಂತ್ರಗಳಿಗೆ ಹೋಲಿಸಿದರೆ ಈ ಸಾಧನವು ಹೆಚ್ಚು ಲಘು ಮತ್ತು ಅಗ್ಗವಾಗಿದೆ ಎಂದು ರಾಜ್ ಹೇಳಿದ್ದಾರೆ. ” ಸಾಂಪ್ರದಾಯಿಕ ಸಾಧನಗಳು ಹೆಚ್ಚಿನ ಉಡಾವಣಾ ಮತ್ತು ನಿರ್ವಹಣಾ ವೆಚ್ಚವನ್ನು ಹೊಂದಿವೆ. ಆದರೆ ಈ ಸಾಧನದ ಗಾತ್ರವು ಬಾಹ್ಯಾಕಾಶ ಸಾಧನಗಳಲ್ಲಿನ ಅಪ್ಲಿಕೇಶನ್ ಅನ್ನು ಅವಲಂಬಿಸಿರುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.