ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಸಿಬ್ಬಂದಿಗಳು, ಚೆನ್ನೈನಲ್ಲಿನ ನೀರಿನ ಬಿಕ್ಕಟ್ಟನ್ನು ‘ವಾತಾವರಣದ ನೀರಿನ ಕೊಯ್ಲು (atmospheric water harvesting) ಮೂಲಕ ನಿಭಾಯಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಎಂಎಸ್ ಸ್ಕಾಲರ್ ಪಡೆದಿರುವ ರಮೇಶ್ ಕುಮಾರ್, ಪ್ರಾಧ್ಯಾಪಕ ಟಿ. ಪ್ರದೀಪ್ ಮತ್ತು ಪಿಎಚ್ಡಿ ಸ್ಕಾಲರ್ ಪಡೆದಿರುವ ಅಂಕಿತ್ ನಗರ ಅವರು ‘ಅಟ್ಮಾಸ್ಫಿಯರಿಕ್ ವಾಟರ್ ಜನರೇಟರ್ಸ್’ (AWG) ಅಭಿವೃದ್ಧಿಪಡಿಸಿದ್ದು, ಇದು ಗಾಳಿಯಲ್ಲಿನ ತೇವಾಂಶವನ್ನು ಬಳಸಿಕೊಂಡು ಕುಡಿಯುವ ನೀರನ್ನು ಒದಗಿಸುತ್ತದೆ.
“atmospheric water harvesting’ ಗೆ ಸ್ಪೂರ್ತಿ ಸಿಕ್ಕಿದ್ದು ಕರಾವಳಿಯ ಮರುಭೂಮಿಗಳಿಂದ. ಇಲ್ಲಿಯ ಪ್ರಕೃತಿಗಳಲ್ಲಿ ಇರುವ ಜೀರುಂಡೆಗಳು ಮತ್ತು ಬಾಳೆ ಎಲೆಗಳು ಆರ್ದ್ರತೆಯನ್ನು ಪರಿಣಾಮಕಾರಿಯಾಗಿ ಕೊಯ್ಲು ಮಾಡುತ್ತವೆ. ಇದು ನಮಗೆ ನ್ಯಾನೊ ಮತ್ತು ಮೈಕ್ರೊ ಎಂಜಿನಿಯರಿಂಗ್ ಬಳಸಿ ಹೊಸ ಮೇಲ್ಮೈಯನ್ನು ತಯಾರಿಸಲು ಮತ್ತು ವೇಗವಾಗಿ ಘನೀಕರಣವನ್ನು ಶಕ್ತಗೊಳಿಸುವಂತಹದನ್ನು ತರಲು ಪ್ರೇರಣೆ ನೀಡಿತು ”ಎಂದು ಅಂಕಿತ್ ನಗರ ಹೇಳಿದ್ದಾರೆ.
ಎಡಬ್ಲ್ಯೂಜಿ ಯಂತ್ರವು ಮೂರು ಹಂತಗಳಲ್ಲಿ ನೀರನ್ನು ಸಂಗ್ರಹಿಸುತ್ತದೆ. ಪ್ರಸ್ತುತ, ಚೆನ್ನೈನ ಅವರ ಕ್ಯಾಂಪಸ್ನಲ್ಲಿ 100 ಲೀಟರ್ ಯಂತ್ರದ ಮೂಲ ಮಾದರಿಯೊಂದನ್ನು ನಿಯೋಜಿಸಲಾಗಿದೆ, ಜೊತೆಗೆ ಇನ್ನೂ ಕೆಲವು ಸ್ಥಳಗಳಲ್ಲಿ ಈ ಯಂತ್ರವನ್ನು ನಿಯೋಜನೆಗೊಳಿಸಲಾಗಿದೆ. ಕಂಪನಿಯು 400 ಲೀಟರ್ ಮತ್ತು 2,000 ಲೀಟರ್ ಸಾಮರ್ಥ್ಯದ ಮೂಲ ಮಾದರಿ ಯಂತ್ರಗಳನ್ನು ತಯಾರಿಸುತ್ತದೆ.
100 ಲೀಟರ್ ಯಂತ್ರವನ್ನು ಖರೀದಿಸಲು 1.5 ಲಕ್ಷ ರೂ ತಗಲುತ್ತದೆ ಮತ್ತು ನಿರ್ವಹಣಾ ವೆಚ್ಚವು ಪ್ರತಿ ಲೀಟರ್ಗೆ 1.50 ರಿಂದ 2.50 ರೂ.ಬೀಳುತ್ತದೆ. ವಿಭಿನ್ನ ಅವಶ್ಯಕತೆಗಳನ್ನು ನೀಗಿಸಲು ವಿವಿಧ ಸಾಮರ್ಥ್ಯದ ವಿವಿಧ ಯಂತ್ರಗಳನ್ನು ನಾವು ಹೊಂದಿದ್ದೇವೆ ಎಂದು ಅಂಕಿತ್ ಹೇಳುತ್ತಾರೆ. ಯಂತ್ರಗಳು ಸೌರಶಕ್ತಿ ಚಾಲಿತವಾಗಿರುವುದರಿಂದ ಸಂಪೂರ್ಣವಾಗಿ ಆಫ್-ಗ್ರಿಡ್ ಮತ್ತು ನಿರ್ವಹಣೆಯ ಅಗತ್ಯವೂ ಕಡಿಮೆ ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.