ದಂತೇವಾಡ: ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ನಕ್ಸಲಿಸಂ ಸಾಮಾನ್ಯ ಜನರ ಜೀವನದ ಮೇಲೆ ಯಾವ ರೀತಿಯಲ್ಲಿ ದುಷ್ಪರಿಣಾಮ ಬೀರಿದೆ ಎಂಬುದನ್ನು ಜನರಿಗೆ ತೋರಿಸಿಕೊಡುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಪೊಲೀಸರು ನೈಜ ಕಥೆಯನ್ನು ಆಧರಿಸಿದ ಕಿರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುವುದು ಮತ್ತು ಪರಿಸ್ಥಿತಿಯನ್ನು ತಿಳಿಸುವ ಸಲುವಾಗಿ ಇದನ್ನು ಸ್ಥಳೀಯ ಜನರಿಗೆ ಹಂಚಲಾಗುವುದು ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಅವರು ತಿಳಿಸಿದ್ದಾರೆ.
“ನಕ್ಸಲರು ತಮ್ಮ ಅಜೆಂಡಾದ ಭಾಗವಾಗಿ ಸ್ಥಳೀಯರ ತಲೆಕೆಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ನಕ್ಸಲಿಸಂ ಸ್ಥಳೀಯರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ತೋರಿಸಲು ನೈಜ ಜೀವನದ ಘಟನೆಗಳ ಆಧಾರದ ಮೇಲೆ ಕಿರುಚಿತ್ರವನ್ನು ನಿರ್ಮಿಸಲಾಗುತ್ತಿದೆ. ದಾಂತೇವಾಡದ ಹೆಚ್ಚುವರಿ ಎಸ್ಪಿಯವರು ಕಿರುಚಿತ್ರಕ್ಕಾಗಿ ಕಥೆಗಳನ್ನು ಬರೆದಿದ್ದಾರೆ ಮತ್ತು ನಾವು ಅದನ್ನು ನಿರ್ಮಿಸುತ್ತಿದ್ದೇವೆ. 10-15 ದಿನಗಳಲ್ಲಿ ಈ ಚಿತ್ರ ಸಿದ್ಧವಾಗಲಿದೆ. ಇದನ್ನು ಶಾಲಾ ಮಕ್ಕಳು, ಸ್ಥಳೀಯರು, ಸರಪಂಚರಿಗೆ ತೋರಿಸಲಾಗುತ್ತದೆ ಮತ್ತು ಅವರ ಮೂಲಕ ಇತರರಿಗೆ ಹಂಚಲಾಗುತ್ತದೆ. ತಪ್ಪು ಹಾದಿಯಲ್ಲಿ ಸಾಗುತ್ತಿರುವ ಮತ್ತು ನಕ್ಸಲರ ಬಗ್ಗೆ ಆಕರ್ಷಿತಗೊಂಡಿರುವ ಜನರು ಮುಖ್ಯವಾಹಿನಿಗೆ ಸೇರಲು ಈ ಕಿರುಚಿತ್ರ ಸಹಾಯ ಮಾಡಬಹುದು” ಎಂದು ಅಭಿಷೇಕ್ ಪಲ್ಲವ್ ಹೇಳಿದ್ದಾರೆ.
“ಈ ಕಿರುಚಿತ್ರದಲ್ಲಿ, ನಾವು ಸಣ್ಣ ವಿಷಯಗಳನ್ನು ಸ್ಪರ್ಶಿಸಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಕ್ಸಲಿಸಂ ಈ ಪ್ರದೇಶದ ಮೇಲೆ ಹೇಗೆ ಪ್ರಭಾವ ಬೀರಿದೆ, ಅದರಿಂದ ಜನರು ಹೇಗೆ ಬಳಲುತ್ತಿದ್ದಾರೆ ಎಂಬುದನ್ನು ಮನಮುಟ್ಟುವಂತೆ ತೋರಿಸುವ ಪ್ರಯತ್ನ ಮಾಡಿದ್ದೇವೆ. ಕಿರುಚಿತ್ರವನ್ನು ಹಿಂದಿ ಮತ್ತು ಗೊಂಡಿಯಲ್ಲಿ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಹೆಚ್ಚಿನ ಬೇಡಿಕೆ ಬಂದರೆ, ಇದನ್ನು ಇತರ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ನಾವು ಪ್ರಯತ್ನಿಸುತ್ತೇವೆ “ಎಂದಿದ್ದಾರೆ.
ಪೊಲೀಸರು, ಶರಣಾದ ನಕ್ಸಲರು ಈ ಕಿರುಚಿತ್ರದ ಭಾಗವಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.