ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 40 ಸಾವಿರ ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರ ಹಾಕುವ ಸಲುವಾಗಿ ಕರ್ನಾಟಕದಲ್ಲೂ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ (NRC) ಅನ್ನು ಮಾಡಬೇಕು ಎಂದು ದಕ್ಷಿಣ ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ಶೂನ್ಯ ಕಲಾಪದ ವೇಳೆಯಲ್ಲಿ ಮಾತನಾಡಿದ ತೇಜಸ್ವಿ, ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಆಧಾರ್ ಕಾರ್ಡ್ಗಳು ಮತ್ತು ಇತರ ಗುರುತಿನ ದಾಖಲೆಗಳ ಸಹಾಯದಿಂದ ಉದ್ಯೋಗಗಳನ್ನು ಗಳಿಸುವ ಮೂಲಕ ಅಕ್ರಮ ವಲಸಿಗರು ಕರ್ನಾಟಕದ ಜನರಿಗೆ ಅತ್ಯಂತ ಗಂಭೀರ ಆರ್ಥಿಕ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂದು ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಇತರ ಅಧಿಕಾರಿಗಳ ಸಹಾಯದಿಂದ ಅವರು ಈ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ ಎಂದು ಸೂರ್ಯ ಆರೋಪಿಸಿದ್ದಾರೆ.
ಇತ್ತೀಚಿಗೆ ರಾಷ್ಟ್ರೀಯ ತನಿಖಾ ತಂಡವು ಬೆಂಗಳೂರಿನಲ್ಲಿ ಬೇಧಿಸಿದ ಬಾಂಗ್ಲಾದೇಶದ ಭಯೋತ್ಪಾದಕ ಮಾದರಿಯ ಬಗ್ಗೆಯೂ ಅವರು ಉಲ್ಲೇಖ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾದ ಶಂಕಿತ ಭಯೋತ್ಪಾದಕ ಹಬೀಬುರ್ ರೆಹಮಾನ್ ಅವರ ಮನೆಯಿಂದ ಎರಡು ಕಚ್ಚಾ ಬಾಂಬ್ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು.
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆಯಾದರೂ ರಾಜ್ಯ ಸರ್ಕಾರ ಮಾತ್ರ ಇತ್ತ ಕಡೆ ಗಮನ ಹರಿಸುತ್ತಲೇ ಇಲ್ಲ. ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ತೇಜಸ್ವಿ ಸೂರ್ಯ ಅವರು ಎಲ್ಲರು ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ.
A HUGE no. of illegal Bangladeshi immigrants have made Bengaluru their home, posing serious threat to national security while taking away jobs of Indians.
Inflow must end NOW & I urge the @HMOIndia to extend NRC to K’taka & Bengaluru to weed them out. @AmitShah @kishanreddybjp pic.twitter.com/GBzGNIYuPO
— Tejasvi Surya (@Tejasvi_Surya) July 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.