ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಪರಿಕಲ್ಪನೆಗೆ ಉತ್ತೇಜನವನ್ನು ನೀಡುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 30 ಯುವಕ-ಯುವತಿಯರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
29 ವರ್ಷದ ಸ್ವಿಮ್ಮಿಂಗ್ ಚಾಂಪಿಯನ್ ದಿಶಾ ಕೂಡ ಬಿಜೆಪಿ ಸೇರಿದವರಲ್ಲಿ ಒಬ್ಬರು. ಡೌನ್ ಸಿಂಡ್ರೋಮ್ ಹೊಂದಿರುವ ಈಕೆ, ಏಷ್ಯಾ ಪೆಸಿಫಿಕ್ ಸ್ಪೆಷಲ್ ಒಲಿಂಪಿಕ್ಸ್-2013ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. 2015ರ ಸ್ಪೆಷಲ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದಾರೆ.
ಬಿಜೆಪಿ ಕುಟುಂಬಕ್ಕೆ ಸದಸ್ಯರನ್ನು ಸ್ವಾಗತಿಸಿದ ಬಿಜೆಪಿ ನಾಯಕಿ ಪೂನಂ ಮಹಾಜನ್ ಅವರು, “ನೀವು ಬಿಜೆಪಿ ಸದಸ್ಯರಾಗುತ್ತಿರುವುದರಿಂದ ಪಕ್ಷ ಗಮನಾರ್ಹವಾಗಿ ಬಲಗೊಳ್ಳಲಿದೆ. ನಾವು ಒಗ್ಗಟ್ಟಾಗಿ ಭಾರತವನ್ನು ವಿಕಾಸದತ್ತ ಕೊಂಡೊಯ್ಯುಲಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿ, ಕಚ್ನಿಂದ ಕೊಹಿಮಾವರೆಗೆ ಜನರು ಬಿಜೆಪಿಯನ್ನು ದಾಖಲೆ ಸಂಖ್ಯೆಯಲ್ಲಿ ಆಶೀರ್ವದಿಸಿದ್ದಾರೆ” ಎಂದಿದ್ದಾರೆ.
ಪ್ರಧಾನ ಮಂತ್ರಿಯವರ ಅಧಿಕೃತ ಆ್ಯಪ್ ಅನ್ನು ಬಿಜೆಪಿಯ ಸದಸ್ಯತ್ವದ ಆಯ್ಕೆಗಾಗಿ ತೆರೆಯಲಾಗಿದೆ, ಬಿಜೆಪಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ನಮೋ ಆ್ಯಪ್ನಲ್ಲಿನ ಫೀಚರ್ ಅನ್ನು ಬಳಸಿಕೊಂಡು ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ.
Some eminent personalities Join BJP at BJP HQ. #BJPMembership https://t.co/FWxGcQ2P8p
— BJP (@BJP4India) July 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.