ಪುರಿ: ಜಗ್ನನಾಥ ರಥಯಾತ್ರೆ ಜರುಗುತ್ತಿದೆ. ಈ ವೇಳೆ ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಈ ಜನಸಾಗರದ ನಡುವೆ ಗುರುವಾರ ರಥಯಾತ್ರೆಯ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇನ್ನಿತರ ಸಂಸ್ಥೆಗಳ ಸ್ವಯಂಸೇವಕರು ಸೇರಿ ಅಂಬ್ಯುಲೆನ್ಸ್ ಸಾಗಲು ದಾರಿ ಮಾಡಿಕೊಟ್ಟ ದೃಶ್ಯ ನಿಜಕ್ಕೂ ಅದ್ಭುತವಾಗಿತ್ತು. ದೇಶದ ಮೂಲೆ ಮೂಲೆಯ ಜನರಿಂದ ಈ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ಅಂಬ್ಯುಲೆನ್ಸ್ ಬರುತ್ತಿದ್ದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಸ್ತೆಯ ಎರಡೂ ಬದಿಗಳಲ್ಲಿ ಮಾನವ ಸರಪಣಿಯನ್ನು ನಿರ್ಮಾಣ ಮಾಡಿದರು ಮತ್ತು ಭಕ್ತರು ಸರಿದು ನಿಂತರು. ಇದರಿಂದಾಗಿ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸರಾಗವಾಗಿ ಚಲಿಸಿದೆ. ಕ್ಯಾಮೆರಾ ಕಣ್ಣಲ್ಲಿ ಈ ದೃಶ್ಯ ಸೆರೆಯಾಗಿದ್ದು ಈಗ ಎಲ್ಲೆಡೆಯೂ ಶ್ಲಾಘನೆಗಳ ಮಹಾಪೂರ ಹರಿದು ಬಂದಿದೆ.
“1200 ಸ್ವಯಂಸೇವಕರು, 10 ಸಂಸ್ಥೆಗಳು ಮತ್ತು ಗಂಟೆಗಳ ಅಭ್ಯಾಸದ ಪರಿಣಾಮವಾಗಿ 2019ರ ರಥಯಾತ್ರೆಯ ವೇಳೆ ಅಂಬ್ಯುಲೆನ್ಸ್ ಸಾಗಲು ಹ್ಯೂಮನ್ ಕಾರಿಡಾರ್ ನಿರ್ಮಾಣವನ್ನು ಸಾಧ್ಯವಾಗಿಸಿತು” ಎಂದು ಪುರಿ ಪೊಲೀಸ್ ಸಂಕೇತ ಹೊಂದಿರುವ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.
1200 volunteers, 10 organizations and hours of practice made this human corridor for free ambulance movement possible during Puri Rath Yatra 2019. pic.twitter.com/zVKzqhzYCw
— SP Puri (@SPPuri1) July 6, 2019
ಕೆಲವು ದಿನಗಳ ಹಿಂದೆ ಹಾಂಗ್ ಕಾಂಗ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೋರಾಟಗಾರರು ಅಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟ ವೀಡಿಯೋ ವೈರಲ್ ಆಗಿತ್ತು. ಇಂತಹ ಘಟನೆಗಳು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ವಾರ್ಷಿಕ ಜಗನ್ನಾಥ ರಥಯಾತ್ರೆಗಾಗಿ ಪ್ರತಿವರ್ಷ ಒರಿಸ್ಸಾದ ಕರಾವಳಿ ನಗರವಾದ ಪುರಿಯಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ, ಯಾತ್ರೆಗಾಗಿ ಭಗವಾನ್ ಬಾಲಭದ್ರ, ಭಗವಾನ್ ಜಗನ್ನಾಥ್ ಮತ್ತು ದೇವಿ ಸುಭದ್ರಾ ರಥಗಳನ್ನು ಕಲಾವಿದರು ನಿರ್ಮಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.