ನವದೆಹಲಿ: ದೇಶದಲ್ಲಿ ಗುಂಪು ಹಲ್ಲೆ ಪ್ರಕರಣಗಳು ನಡೆಯುತ್ತಿವೆ ಎಂಬ ಬಗ್ಗೆ ಹಲವಾರು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ. ಈ ಸುದ್ದಿಗಳು ದೇಶವ್ಯಾಪಿಯಾಗಿ ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿವೆ. ಆದರೆ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜಾಂಶ ಇದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಆದರೆ ಲೀಗಲ್ ರೈಟ್ಸ್ ಅಬ್ಸರ್ವೇಟರಿ ಎಂಬ ಕಾನೂನು ಕಾರ್ಯಕರ್ತರ ಗುಂಪೊಂದು, ದಿ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಶನ್ (ಎನ್ಬಿಎ) ಸದಸ್ಯರಾಗಿರುವ ಪ್ರಮುಖ ಸುದ್ದಿ ಪ್ರಸಾರಕರಿಗೆ ಪತ್ರವನ್ನು ಬರೆದಿದ್ದು, ಲಿಂಚಿಂಗ್ (ಗುಂಪು ಹಲ್ಲೆ) ಘಟನೆಗಳನ್ನು ವರದಿ ಮಾಡುವಾಗ ಸಂಯಮವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.
ಸುದ್ದಿ ಸಂಸ್ಥೆಗಳಿಗೆ ಇಮೇಲ್ ಕಳುಹಿಸಿರುವ ಅದು, ಗುಂಪು ಹಲ್ಲೆಯ ಅನೇಕ ಪ್ರಕರಣಗಳು ನಕಲಿ ಮತ್ತು ಕಟ್ಟುಕಥೆ ಎಂದು ಸಾಬೀತಾಗಿದೆ, ಆದ್ದರಿಂದ ಅಂತಹ ಘಟನೆಗಳನ್ನು ವರದಿ ಮಾಡುವಾಗ ಬಹಳ ಜಾಗರೂಕರಾಗಿರಬೇಕು ಎಂದು ತಿಳಿಸಿದೆ.
ಮೊನ್ನೆಯಷ್ಟೇ ಒಬ್ಬ ಮುಸ್ಲಿಂ ಯುವಕನಿಗೆ ‘ಜೈಶ್ರೀರಾಮ್’ ಎಂದು ಹೇಳಲು ಒತ್ತಾಯಿಸಿ ಬಳಿಕ ಆತನ ಮೇಲೆ ಗುಂಪು ಹಲ್ಲೆ ನಡೆಸಲಾಯಿತು ಎಂಬ ಸುದ್ದಿ ಡಿಜಿಟಲ್, ಪ್ರಿಂಟ್, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರಗೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಮಾಧ್ಯಮಗಳು ಹಿಂದೂ ಬಹುಸಂಖ್ಯಾತರ ಮೇಲೆ ದೊಡ್ಡ ಮಟ್ಟದಲ್ಲಿ ಹರಿದಾಡಿದವು. ಆದರೆ ಬಹುತೇಕ ಇಂತಹ ಪ್ರಕರಣಗಳು ಫೇಕ್ ಆಗಿವೆ ಎಂದು ಈಗಾಗಲೇ ಸಾಬೀತಾಗಿದೆ.
“ಜೈ ಶ್ರೀ ರಾಮ್” ಹೆಸರಿನಲ್ಲಿ ಮುಸ್ಲಿಮರ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಸುಳ್ಳು ಹರಡಿಸುತ್ತಿರುವ ಭಾರತೀಯ ಮಾಧ್ಯಮಗಳು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಭಾರತವನ್ನು ಜರೆಯಲು ಆಹಾರ ಒದಗಿಸುತ್ತಿವೆ ಎಂದು ಲೀಗಲ್ ರೈಟ್ಸ್ ಅಬ್ಸರ್ವೇಟರಿ ಆರೋಪಿಸಿದೆ. ನ್ಯೂಸ್ 18, ಟೈಮ್ಸ್ ಆಫ್ ಇಂಡಿಯಾ ಮತ್ತು ಇತರ ಕೆಲವು ಮಾಧ್ಯಮಗಳು ಕೂಚ್ಬೆಹರ್, ಗುರುಗ್ರಾಮ್, ಕಾನ್ಪುರ್ ಮುಂತಾದ ಕಡೆಗಳಲ್ಲಿ ವರದಿಯಾದ ಜೈಶ್ರೀರಾಮ್ ಘೋಷಣೆಗಳಿಗೆ ಸಂಬಂಧಿಸಿದ ಲಿಂಚಿಂಗ್ ಪ್ರಕರಣಗಳು ನಕಲಿ ಎಂದು ಸಾಬೀತಾಗಿದೆ ಎಂದು ಪ್ರಕಟಿಸಿವೆ. ಆದರೆ ಸತ್ಯ ಹೊರಬರುವ ಮೊದಲೇ, ಇಂತಹ ನಕಲಿ ಸುದ್ದಿಗಳಿಂದಾಗಿ ಭಾರತದ ಘನತೆಗೆ ಭಾರೀ ಪ್ರಮಾಣದ ಹಾನಿಯಾಗಿದೆ.
ಹೀಗಾಗಿ ಇನ್ನು ಮುಂದೆಯಾದರೂ ಗುಂಪು ಹಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವಾಗ ಜಾಗರೂಕವಾಗಿ ಇರುವಂತೆ ಮಾಧ್ಯಮಗಳಿಗೆ ಲೀಗಲ್ ರೈಟ್ಸ್ ಅಬ್ಸರ್ವೇಟರಿ ಮನವಿ ಮಾಡಿಕೊಂಡಿದೆ.
#LRO has written email to India’s leading news broadcasters which r members of #NBSA, requested them to restrain maximum caution while reporting news regarding #Lynching as scores of such news proven fake n fabricated. Also reminded them of IPC 153A, 295A, 298 #Lynchistaan pic.twitter.com/cL8lLKYXvy
— Legal Rights Observatory- LRO (@LegalLro) July 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.