ನವದೆಹಲಿ: ಕಾರ್ಗಿಲ್ ಯುದ್ಧ ಸಂಭವಿಸಿ 20 ವರ್ಷಗಳ ಬಳಿಕ, ಟೈಗರ್ ಹಿಲ್ಸ್ಗಾಗಿನ ಪಾಕಿಸ್ಥಾನ ವಿರುದ್ಧದ ಆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಭಾರತೀಯ ಸೇನೆಯು ಚಾರಣ ನಡೆಸಿ ‘ಆಪರೇಶನ್ ವಿಜಯ್’ ಅನ್ನು ಮರುಸೃಷ್ಟಿಸಿದೆ. 2 ರಜಪೂತಾನ ರೈಫಲ್ಸ್ ಪಡೆಯ ಯೋಧರು ಟೊಲೊಲಿಂಗ್ ಶಿಖರಕ್ಕೆ ಚಾರಣವನ್ನು ಹಮ್ಮಿಕೊಂಡು ಯುದ್ಧವೀರರಿಗೆ ಗೌರವಾರ್ಪಣೆ ಮಾಡಿದರು.
ಬಾತ್ರ ಟಾಪ್ ಮತ್ತು ಟೈಗರ್ ಹಿಲ್ಗೆ ಎರಡು ಪ್ರತ್ಯೇಕ ಚಾರಣವನ್ನು 13 ಜಮ್ಮು ಆ್ಯಂಡ್ ಕಾಶ್ಮೀರ್ ರೈಫಲ್ಸ್ ಮತ್ತು 18 ಗ್ರೆನೇಡಿಯರ್ಸ್ ಆಯೋಜಿಸಿದೆ. ಜುಲೈ 3 ರಂದು ಚಾರಣ ಆರಂಭಗೊಂಡಿದ್ದು, ದ್ರಾಸ್ ಅನ್ನು ದಾಟಿ ಅತ್ಯಂತ ಕಠಿಣ ಹಾದಿಯನ್ನು ಸವೆಸಿ ಜುಲೈ 7 ರಂದು ಟೈಗರ್ ಹಿಲ್ ತಲುಪಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
2 ರಜಪೂತಾನ ರೈಫಲ್ಸ್ನ ಸೈನಿಕರು ಟೊಲೊಲಿಂಗ್ ಶಿಖರವನ್ನು ಹತ್ತಿದ್ದಾರೆ, 13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಪಾಯಿಂಟ್ 4875 ಅನ್ನು ಏರಿದೆ (ಈಗ ಇದನ್ನು ಬಾತ್ರಾ ಟಾಪ್ ಎಂದು ಕರೆಯಲಾಗುತ್ತದೆ) ಮತ್ತು 1/9 ಗೂರ್ಖಾ ರೈಫಲ್ಸ್ ಖಲುಬರ್ ಶೃಂಗವನ್ನು ಏರಿದೆ ಎಂದು ವರದಿ ತಿಳಿಸಿದೆ.
1999 ರಲ್ಲಿ ಹಿಮಾವೃತ ಶಿಖರವನ್ನು ಆಕ್ರಮಿಸಿಕೊಂಡ ಪಾಕಿಸ್ಥಾನಿ ಸೇನೆಯ ವಿರುದ್ಧ ಭಾರತವು ಕಾರ್ಗಿಲ್ ಯುದ್ಧವನ್ನು ಸಾರಿತ್ತು. ಅಲ್ಲದೇ ಪಾಕ್ ವಿರುದ್ಧ ಪರಾಕ್ರಮವ ವಿಜಯವನ್ನೂ ದಾಖಲಿಸಿತ್ತು. ಈ ನೆನಪಿಗಾಗಿ ಪ್ರತಿ ವರ್ಷ ಜುಲೈ 27 ರಂದು ‘ಆಪರೇಷನ್ ವಿಜಯ್’ ಅನ್ನು ಆಚರಿಸಲಾಗುತ್ತದೆ. ಈ ವರ್ಷ ಅದರ 20 ನೇ ವಾರ್ಷಿಕೋತ್ಸವವನ್ನು ಆಚರಿಸಲು ಭಾರತೀಯ ಸೇನೆ ಸಜ್ಜಾಗಿದೆ. ‘ಅವರ ತ್ಯಾಗದ ಸ್ಮರಣೆ’, ‘ಅವರ ಗೆಲುವಿನ ಮೆಲುಕು ಹಾಕುವಿಕೆ’ ಮತ್ತು ‘ಪ್ರತಿಜ್ಞೆಯನ್ನು ನವೀಕರಿಸುವುದು’ ಈ ಮೂರು ಥೀಮ್ ಇಟ್ಟುಕೊಂಡು ಈ ಬಾರಿಗೆ ‘ಆಪರೇಶನ್ ವಿಜಯ್’ ಅನ್ನು ಆಚರಿಸಲಾಗುತ್ತಿದೆ.
Battle of #Tololing was the turning point in #KargilWar.Commemorating the epic victory, trekking expedition was undertaken by 2RajRif. #ArmyCdrNC accompanied by #GOCFireAndFuryCorps received troops of 2RajRif at #Tololing Top & paid homage to martyrs.@adgpi#20YearsToKargilVijay pic.twitter.com/wNHXwjkW0F
— NorthernComd.IA (@NorthernComd_IA) July 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.