ನವದೆಹಲಿ: ಇನ್ನು ಎರಡು ತಿಂಗಳೊಳಗೆ ಡಸಾಲ್ಟ್ ಕಂಪನಿಯು ಭಾರತೀಯ ವಾಯುಸೇನೆಗೆ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಹಸ್ತಾಂತರ ಮಾಡಲಿದೆ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಕ್ಸಾಂಡರ್ ಝೀಗ್ಲರ್ ಶುಕ್ರವಾರ ತಿಳಿಸಿದ್ದಾರೆ.
ರಫೇಲ್ ಅನ್ನು ಅತ್ಯುತ್ತಮ ಯುದ್ಧ ವಿಮಾನ ಎಂದು ಬಣ್ಣಿಸಿರುವ ಅವರು, ಭಾರತೀಯ ವಾಯುಸೇನೆಗೆ ಇದು ಹೆಚ್ಚಿನ ಸಾಮರ್ಥ್ಯವನ್ನು ತುಂಬಲಿದೆ ಎಂದಿದ್ದಾರೆ. ಮುಂದಿನ ಎರಡು ವರ್ಷಗಳೊಳಗೆ ಭಾರತ ಸರ್ಕಾರವು ಆರ್ಡರ್ ಮಾಡಿರುವ ಎಲ್ಲಾ 36 ಫೈಟರ್ ಜೆಟ್ಗಳನ್ನು ಭಾರತೀಯ ವಾಯುಸೇನೆಗೆ ತಲುಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಫ್ರೆಂಚ್ ದೇಶಗಳ ನಡುವಿನ ಸಂಬಂಧಗಳು ಸುಧಾರಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅವರು, “50 ವರ್ಷದ ಈ ಪಾಲುದಾರಿಕೆ ಮುಂದಿನ 50 ವರ್ಷಗಳ ಪಾಲುದಾರಿಕೆಯಾಗಿ ಮುಂದುವರೆಯಲಿದೆ ಎಂದು ನಾನು ನಂಬುತ್ತೇನೆ. ಅದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದಿದ್ದಾರೆ.
ರಫೇಲ್ ಜೆಟ್ಗಳ ಖರೀದಿಯ ಬಗೆಗಿನ ರಾಜಕೀಯ ವಿವಾದದ ಕುರಿತು ಮಾತನಾಡಿದ ಅವರು, “ನನಗೆ ವಿವಾದದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಫಲಿತಾಂಶಗಳ ಬಗ್ಗೆ ಮತ್ತು ಸತ್ಯಗಳಲ್ಲಿ ನಾನು ಆಸಕ್ತಿ ಹೊಂದಿದ್ದೇನೆ. ಮುಂದಿನ ಎರಡು ತಿಂಗಳಲ್ಲಿ ರಫೇಲ್ ಭಾರತಕ್ಕೆ ಬರಲಿದೆ ಎಂಬುದು ಸತ್ಯ. ಅದರ ಬಗ್ಗೆ ಹೆಮ್ಮೆಪಡುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.