ಚಮೋಲಿ: ಮಾನವಕುಲವು ಬಳಸುವ ಅತ್ಯಂತ ಹಾನಿಕಾರಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು. ಇದು ಮನುಷ್ಯರಿಗೆ ಮತ್ತು ಭೂಮಿಗೆ ಅಪಾಯ ಉಂಟು ಮಾಡುತ್ತಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರದ ಪ್ಯಾಕೆಟ್ಗಳು ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿಕೊಂಡು ಸ್ವಚ್ಛತೆಯನ್ನೇ ಹಾಳು ಮಾಡುತ್ತಿದೆ. ಒಂದು ವೇಳೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆ ಮಾಡದೇ ಹೋದರೆ ಅದರಿಂದ ಮುಕ್ತಿ ಪಡೆಯಲು ನಮಗೆ ಹಲವಾರು ವರ್ಷಗಳೇ ಬೇಕಾಗಬಹುದು.
ಈ ಹಿನ್ನಲೆಯಲ್ಲಿ ಉತ್ತರಾಖಂಡದ ಚಮೋಲಿಯ ಪುರಸಭೆಯು ಹಳೆಯ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಯೋಜನೆಯನ್ನು ರೂಪಿಸಿದೆ. ಪ್ರವಾಸಿ ತಾಣಗಳ ಬೀದಿಗಳಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ಟೈಲ್ಸ್ಗಳಾಗಿ ಪರಿವರ್ತಿಸುವುದು ಮತ್ತು ಅದನ್ನು ರಸ್ತೆಗಳಿಗೆ ಬಳಸುವುದು ಅದರ ಯೋಜನೆಯಾಗಿದೆ.
ಹೇಮಕುಂಡ್ ಕೊಳದಲ್ಲಿ ಪ್ರವಾಸಿಗರು ಎಸೆದಿರುವ ಪ್ಲಾಸ್ಟಿಕ್ಗಳನ್ನು ಮೇಲೆತ್ತುವ ಕಾರ್ಯವನ್ನು ಚಮೋಲಿ ಪುರಸಭೆ ಈ ಯೋಜನೆಯಡಿ ಮಾಡಲಿದೆ. “ಪ್ಲಾಸ್ಟಿಕ್ ಅನ್ನು ಟೈಲ್ಸ್ ಆಗಿ ಪರಿವರ್ತಿಸಲಿದ್ದೇವೆ. ಪ್ರತಿ ದಿನ, 6 ರಿಂದ 7 ಟನ್ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಈ ಭಾಗದಲ್ಲಿ ಉತ್ಪತ್ತಿಯಾಗುತ್ತಿದೆ. ಹಿಂದೆ ಇದನ್ನು ಕಾಂಪ್ಯಾಕ್ಟ್ ಆಗಿ ಪರಿವರ್ತಿಸುತ್ತಿದ್ದೆವು ಮತ್ತು ಬೇರೆಡೆಗೆ ಕಳುಹಿಸುತ್ತಿದ್ದೆವು. ಈಗ ನಾವು ಅದನ್ನು ರಿಸೈಕಲ್ ಮಾಡುತ್ತಿದ್ದೇವೆ ಮತ್ತು ಬಳಸಿಕೊಳ್ಳುತ್ತಿದ್ದೇವೆ. ಈ ಟೈಲ್ಸ್ಗಳನ್ನು ನಮ್ಮ ರಸ್ತೆಯುದ್ದಕ್ಕೂ ಹಾಸುತ್ತೇವೆ” ಎಂದು ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಪಂಥ್ ತಿಳಿಸಿದ್ದಾರೆ.
ಈ ಯೋಜನೆಗಾಗಿ ಪುರಸಭೆಯು 20 ಲಕ್ಷ ರೂ.ಗಳನ್ನು ವ್ಯಯ ಮಾಡುತ್ತಿದೆ. ಕಸವನ್ನು ಬೇರ್ಪಡಿಸಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಟೈಲ್ಸ್ ಆಗಿ ಸಂಗ್ರಹಿಸಿದ ಹಣವನ್ನು ವಿನಿಯೋಗಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.