ಕೋಲ್ಕತ್ತಾ: ಭಯೋತ್ಪಾದನಾ ಸಂಘಟನೆಯಾದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ)ಯು ಭಯೋತ್ಪಾದನೆಯತ್ತ ಜನರನ್ನು ಸೆಳೆಯುವ ಸಲುವಾಗಿ ಪಶ್ಚಿಮಬಂಗಾಳದ ಬುರ್ದ್ವಾನ್ ಮತ್ತು ಮುರ್ಷಿದಾಬಾದ್ಗಳಲ್ಲಿನ ಮದರಸಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿದೆ.
ಮದರಸಗಳ ಮೂಲಕ ಭಯೋತ್ಪಾದನಾ ಸಂಘಟನೆಗೆ ನೇಮಕಾತಿಗಳನ್ನು ಮಾಡಲಾಗುತ್ತಿದೆ ಮತ್ತು ಜನರ ತಲೆ ಕೆಡಿಸಿ ಸಂಘಟನೆಗೆ ಸೇರುವಂತೆ ಪುಸಲಾಯಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶ ಮತ್ತು ಪಶ್ಚಿಮಬಂಗಾಳದ ಗಡಿ ಪ್ರದೇಶಗಳಲ್ಲಿ ಜೆಎಂಬಿಯು ಭಯೋತ್ಪಾದನಾ ಶಿಬಿರಗಳನ್ನು ಸ್ಥಾಪನೆ ಮಾಡಿದೆ ಎಂದು ವರದಿ ಹೇಳಿದೆ. ಇದಕ್ಕೆ ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆಗಳಾದ ಲಷ್ಕರ್-ಇ-ತೋಯ್ಬಾದ ಸಹಕಾರವೂ ಇರುವ ಸಾಧ್ಯತೆ ಇದೆ ಎಂದಿದೆ.
ಭಯೋತ್ಪಾದಕರು ಈ ಪ್ರದೇಶಗಳನ್ನು ಅಡಗುತಾಣಗಳಾಗಿ ಬಳಸುತ್ತಿರುವುದು ಮಾತ್ರವಲ್ಲದೇ, ಗಡಿ ಪ್ರದೇಶಗಳಲ್ಲಿ ನೇಮಕಾತಿಗಳನ್ನು ಕೂಡ ನಡೆಸುತ್ತಿದ್ದಾರೆ. ಈ ನೇಮಕಾತಿಗಳನ್ನು ಮದರಸಾ ಮತ್ತು ಮಸೀದಿಗಳ ಮೂಲಕ ಮಾಡಲಾಗುತ್ತದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮಾಲ್ಡಾ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಮತ್ತು ಅಸ್ಸಾಂನ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಉಗ್ರರ ಜಾಲಗಳು ಸಕ್ರಿಯವಾಗಿವೆ ಎಂದು ವರದಿ ತಿಳಿಸಿದೆ.
ಮೇ 23 ರಂದು ಕೇಂದ್ರ ಸರ್ಕಾರ ಜೆಎಂಬಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಬುರ್ದ್ವಾನ್ ಜಿಲ್ಲೆಯ ಮನೆಯೊಂದರಲ್ಲಿ 2014ರ ಅಕ್ಟೋಬರ್ 2ರಂದು ನಡೆದ ಸ್ಫೋಟದ ನಂತರ ಪಶ್ಚಿಮ ಬಂಗಾಳವನ್ನು ಉಗ್ರರು ತಮ್ಮ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.