ನವದೆಹಲಿ: ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ದೇಶಗಳೊಂದಿಗೆ ಭಾರತಕ್ಕೂ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡುವ ಕಾರ್ಯತಾಂತ್ರಿಕ ಶಾಸಕಾಂಗ ನಿಬಂಧನೆ (strategic legislative provision) ಅನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2020 ರ ಆರ್ಥಿಕ ವರ್ಷದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್ಡಿಎಎ) ಯನ್ನು ಕಳೆದ ವಾರ ಯುಎಸ್ ಸೆನೆಟ್ ಅಂಗೀಕರಿಸಿತು. ಮಸೂದೆಯನ್ನು ಸೆನೆಟ್ ಇಂಡಿಯಾ ಕಾಕಸ್ ಕೋ-ಚೇರ್ ಸೆನೆಟರ್ ಜಾನ್ ಕಾರ್ನಿನ್ ಅವರು ಸೆನೆಟ್ ಇಂಡಿಯಾ ಕಾಕಸ್ ಕೋ-ಚೇರ್ ಸೆನೆಟರ್ ಮಾರ್ಕ್ ವಾರ್ನರ್ ಅವರ ಬೆಂಬಲದೊಂದಿಗೆ ಜಂಟಿಯಾಗಿ ಪ್ರಾಯೋಜಿಸಿದರು.
ಈ ತಿದ್ದುಪಡಿಯು ಹಿಂದೂ ಮಹಾಸಾಗರದಲ್ಲಿ ಅಮೆರಿಕಾ-ಭಾರತ ರಕ್ಷಣಾ ಸಹಕಾರವನ್ನು ಹೆಚ್ಚಿಸುತ್ತದೆ ಮತ್ತು ಮಾನವೀಯ ನೆರವು, ಭಯೋತ್ಪಾದನಾ ನಿಗ್ರಹ, ಕಡಲ್ಗಳ್ಳತನ ನಿಗ್ರಹ ಮತ್ತು ಕಡಲ ಸುರಕ್ಷತೆಗೆ ವಿಶೇಷ ಉತ್ತೇಜನವನ್ನು ನೀಡುತ್ತದೆ.
ಈ ಮಸೂದೆ ಕಾನೂನಾಗಬೇಕಾದರೆ, ಅದು ಯುಎಸ್ ಸೆನೆಟ್ ಆದ ಕಾಂಗ್ರೆಸ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡೂ ಚೇಂಬರ್ಗಳಲ್ಲಿ ಅಂಗೀಕಾರಗೊಳ್ಳಬೇಕು.
ಅಮೆರಿಕಾ ಮತ್ತು ಭಾರತದ ಕಾರ್ಯತಾಂತ್ರಿಕ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ಸೆನೆಟರ್ಗಳಾದ ಕಾರ್ನಿನ್ ಮತ್ತು ವಾರ್ನರ್ ಅವರ ಪ್ರಯತ್ನಗಳನ್ನು ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್ಎಎಫ್) ಶ್ಲಾಘಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.